ETV Bharat / bharat

ಲೋಕಸಮರದಲ್ಲಿ ಕಾಂಚಾಣದ ಕುಣಿತ.. ಜಪ್ತಿಯಾದ ಸರಕಿನ ಮೌಲ್ಯ 2014ಕ್ಕಿಂತ ಎರಡು ಪಟ್ಟು ಹೆಚ್ಚಳ! - ನವದೆಹಲಿ

ಮಾಹಿತಿಯ ಪ್ರಕಾರ ಪ್ರತಿನಿತ್ಯ ಅಧಿಕಾರಿಗಳು ಸುಮಾರು ನೂರು ಕೋಟಿ ನಗದು ಹಾಗೂ ಇನ್ನಿತರ ಸರಕುಗಳನ್ನು ಜಪ್ತಿ ಮಾಡುತ್ತಿದ್ದಾರೆ. ಈವರೆಗೆ ಜಪ್ತಿಯಾದ ಹಣ, ಮದ್ಯ, ಚಿನ್ನ ಹಾಗೂ ಇತರೆ ಸರಕುಗಳ ಒಟ್ಟಾರೆ ಮೌಲ್ಯ 2,500 ಕೋಟಿ ಎಂದು ಅಂದಾಜಿಸಲಾಗಿದೆ.

ಕಾಂಚಾಣ
author img

By

Published : Apr 15, 2019, 7:07 PM IST

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಇನ್ನೂ ಆರು ಹಂತಗಳು ಬಾಕಿ ಇದೆ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಅಕ್ರಮವಾಗಿ ಹಣವನ್ನು ಸಾಗಿಸುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ.

ಮಾಹಿತಿಯ ಪ್ರಕಾರ ಪ್ರತಿನಿತ್ಯ ಅಧಿಕಾರಿಗಳು ಸುಮಾರು ನೂರು ಕೋಟಿ ನಗದು ಹಾಗೂ ಇನ್ನಿತರ ಸರಕುಗಳನ್ನು ಜಪ್ತಿ ಮಾಡುತ್ತಿದ್ದಾರೆ. ಈವರೆಗೆ ಜಪ್ತಿಯಾದ ಹಣ, ಮದ್ಯ, ಚಿನ್ನ ಹಾಗೂ ಇತರೇ ಸರಕುಗಳ ಒಟ್ಟಾರೆ ಮೌಲ್ಯ 2,500 ಕೋಟಿ ಎಂದು ಅಂದಾಜಿಸಲಾಗಿದೆ. ಇದು 2014ರ ಲೋಕಸಭಾ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾದ ಮೌಲ್ಯಕ್ಕಿಂತ ಎರಡು ಪಟ್ಟು ಹೆಚ್ಚಳ. ಏರ್​ಪೋರ್ಟ್​, ಹೆದ್ದಾರಿ, ರೈಲ್ವೇ ನಿಲ್ದಾಣ, ಹೋಟೆಲ್ ಹಾಗೂ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಕೋಟಿ ಕೋಟಿ ಹಣವನ್ನು ಜಪ್ತಿ ಮಾಡುತ್ತಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ 2014ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಿಗಳು 1,200 ಕೋಟಿ ಮೌಲ್ಯದ ನಗದು ಹಾಗೂ ಇನ್ನಿತರ ಸರಕನ್ನು ವಶಪಡಿಸಿಕೊಂಡಿದ್ದರು. ಆದರೆ, ಈ ಪ್ರಮಾಣ ಈಗಾಗಲೇ ದುಪ್ಪಟ್ಟಾಗಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Intro:Body:

ಲೋಕಸಮರದಲ್ಲಿ ಕಾಂಚಾಣದ ಕುಣಿತ... ಇದು 2014ರ ಚುನಾವಣೆಗಿಂತ ಎರಡು ಪಟ್ಟು ಹೆಚ್ಚಳ...!

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು ಇನ್ನುಆರು ಹಂತ ಬಾಕಿ ಇದೆ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಅಕ್ರಮವಾಗಿ ಹಣವನ್ನು ಸಾಗಿಸುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ.

ಮಾಹಿತಿಯ ಪ್ರಕಾರ ಪ್ರತಿನಿತ್ಯ ಅಧಿಕಾರಿಗಳು ಸುಮಾರು ನೂರು ಕೋಟಿ ನಗದು ಹಾಗೂ ಇನ್ನಿತರ ಸರಕುಗಳನ್ನು ಜಪ್ತಿ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಜಪ್ತಿಯಾದ ಹಣ, ಮದ್ಯ, ಚಿನ್ನ ಹಾಗೂ ಇತರೇ ಸರಕುಗಳ ಒಟ್ಟಾರೆ ಮೌಲ್ಯ 2,500 ಕೋಟಿ ಎಂದು ಅಂದಾಜಿಸಲಾಗಿದೆ. ಇದು 2014ರ ಲೋಕಸಭಾ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾದ ಮೌಲ್ಯಕ್ಕಿಂತ ಎರಡು ಪಟ್ಟು ಹೆಚ್ಚಳ..!

ಏರ್​ಪೋರ್ಟ್​, ಹೆದ್ದಾರಿಗಳು, ರೈಲ್ವೇ ನಿಲ್ದಾಣಗಳು, ಹೋಟೆಲ್ ಹಾಗೂ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಕೋಟಿ ಕೋಟಿ ಹಣವನ್ನು ಜಪ್ತಿ ಮಾಡುತ್ತಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ 2014 ಲೋಕಸಭಾ ಚುನಾವಣೆಯಲ್ಲಿ ಅಧಿಕಾರಿಗಳು 1,200 ಕೋಟಿ ಮೌಲ್ಯದ ನಗದು ಹಾಗೂ ಇನ್ನಿತರ ಸರಕನ್ನು ವಶಪಡಿಸಿಕೊಂಡಿದ್ದರು. ಆದರೆ ಈ ಪ್ರಮಾಣ ಈಗಾಗಲೇ ದುಪ್ಪಟ್ಟಾಗಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ನಿಚ್ಚಳವಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.