ಕೋಲ್ಕತಾ (ಪಶ್ಚಿಮ ಬಂಗಾಳ): ಕೋವಿಡ್-19 ಪರಿಸ್ಥಿತಿಯಿಂದಾಗಿ ಅನೇಕ ಗರ್ಭಿಣಿಯರು ತಮ್ಮ ರುಟೀನ್ ಹೆಚ್‌ಐವಿ ಪರೀಕ್ಷೆಗಳಿಗೆ ಒಳಗಾಗಲು ಸಾಧ್ಯವಾಗುತ್ತಿಲ್ಲ.
ಅನೇಕ ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಈಗಾಗಲೇ ಪತ್ತೆಯಾಗಿದ್ದು, ನವಜಾತ ಶಿಶುಗಳು ಕೂಡ ಸೋಂಕಿಗೆ ಒಳಗಾಗಿವೆ.
ಗರ್ಭಿಣಿಯರ ರುಟೀನ್ ತಪಾಸಣೆಯಡಿಯಲ್ಲಿ, ಮೂಲ ರಕ್ತ ಗುಂಪು ಪರೀಕ್ಷೆ, ಶುಗರ್ ಪರೀಕ್ಷೆ, ಯೂರಿನ್ ಟೆಸ್ಟ್, ಥಲಸ್ಸೆಮಿಯಾ, ಸಿಫಿಲಿಸ್, ಹೆಪಟೈಟಿಸ್ ಮತ್ತು ಹೆಚ್ಐವಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಗರ್ಭಿಣಿ ಮಹಿಳೆ ಮೊದಲ ಬಾರಿಗೆ ವೈದ್ಯರ ಬಳಿಗೆ ಹೋದಾಗ ಹೆಚ್‌ಐವಿ ಪರೀಕ್ಷೆಯು ಪ್ರಾಥಮಿಕ ತಪಾಸಣೆಯಾಗಿದೆ. ತಾಯಿಯಿಂದ ಭ್ರೂಣಕ್ಕೆ ಹೆಚ್‌ಐವಿ ಹರಡುವುದನ್ನು ತಡೆಯಲು ಈ ಪರೀಕ್ಷೆ ಮಾಡಲಾಗುತ್ತದೆ.
ಆದರೆ ಪ್ರಸ್ತುತ ಕೊರೊನಾ ವೈರಸ್ ಪರಿಸ್ಥಿತಿಯಿಂದಾಗಿ ಅನೇಕ ಮಹಿಳೆಯರು ತಮ್ಮ ರುಟೀನ್ ತಪಾಸಣೆಗೆ ಹೋಗಲು ಸಾಧ್ಯವಾಗುತ್ತಿಲ್ಲ.