ರಾಜ್ಕೋಟ್: ಟೀಂ ಇಂಡಿಯಾದ ಹಿಟ್ಮ್ಯಾನ್ ಖ್ಯಾತಿಯ ಪ್ಲೇಯರ್ ರೋಹಿತ್ ಶರ್ಮಾ ಇದೀಗ ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ 42 ರನ್ ಗಳಿಸಿ ಮಾಡುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಹಾಶೀಂ ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದರು.
ಆರಂಭಿಕರಾಗಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ 7 ಸಾವಿರ ರನ್ ಪೂರೈಸುವ ದಾಖಲೆ ಇದೀಗ ರೋಹಿತ್ ಶರ್ಮಾ ಪಾಲಾಗಿದ್ದು, ಕೇವಲ 137 ಇನ್ನಿಂಗ್ಸ್ ಮೂಲಕ ಈ ಸಾಧನೆ ಮಾಡಿದ್ದಾರೆ.
ಈ ಹಿಂದೆ ಟೀಂ ಇಂಡಿಯಾ ಆರಂಭಿಕ ಸಚಿನ್ ತೆಂಡೂಲ್ಕರ್ 160 ಇನ್ನಿಂಗ್ಸ್ನಲ್ಲಿ, ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ 147 ಇನ್ನಿಂಗ್ಸ್ನಲ್ಲಿ ಈ ದಾಖಲೆ ಬರೆದಿದ್ದರು. ಇದರ ಜತೆಗೆ 7 ಸಾವಿರ ರನ್ ಪೂರೈಸಿರುವ ಭಾರತೀಯ 4ನೇ ಆರಂಭಿಕ ಆಟಗಾರನೆಂಬ ದಾಖಲೆ ಸಹ ರೋಹಿತ್ ಪಾಲಾಗಿದೆ. ಈಗಾಗಲೇ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಈ ದಾಖಲೆ ಮಾಡಿದ್ದರು.
ಕೇವಲ 4 ರನ್ನಿಂದ ಮತ್ತೊಂದು ದಾಖಲೆ ಮಿಸ್:
ಮುಂಬೈ ಮೈದಾನದಲ್ಲಿ ಕಳಪೆ ರನ್ಗಳಿಸಿ ವಿಕೆಟ್ ಒಪ್ಪಿಸಿದ್ದ ರೋಹಿತ್ ಶರ್ಮಾ, ಇಂದಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡರು. ಆದರೆ 42ರನ್ ಮಾಡಿದ್ದ ವೇಳೆ ಜಂಪಾ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಒಂದು ವೇಳೆ ಅವರು 46ರನ್ ಕಲೆ ಹಾಕಿದ್ದಿದ್ದರೆ ಏಕದಿನದಲ್ಲಿ 9 ಸಾವಿರ ರನ್ ಸಾಧನೆಗೈದ ಶ್ರೇಯಕ್ಕೆ ಪಾಲುದಾರರಾಗುತ್ತಿದ್ದರು.