ETV Bharat / bharat

ಮುಂಬೈ-ನಾಗ್ಪುರ ಸಂಪೂರ್ಣ ಸ್ತಬ್ಧ: ಮನೆಯಿಂದ ಹೊರ ಬರದಂತೆ ಪೊಲೀಸರ ಮನವಿ - ಮುಂಬೈನಲ್ಲಿ ಬೀದಿಗಿಳಯದ ಜನ

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮುಂಬೈ, ನಾಗ್ಪುರ ಸಂಪೂರ್ಣ ಬಂದ್​ ಮಾಡುವಂತೆ ಸೂಚಿಸಿದ್ದು ಇಂದು ಜನ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ.

government announced closure of all non-essential services,ಕೊರೊನಾ ಭೀತಿಯಿಂದ ಮುಂಬೈ-ನಾಗ್ಪುರ ಸಂಪೂರ್ಣ ಸ್ತಬ್ಧ
ಕೊರೊನಾ ಭೀತಿಯಿಂದ ಮುಂಬೈ-ನಾಗ್ಪುರ ಸಂಪೂರ್ಣ ಸ್ತಬ್ಧ
author img

By

Published : Mar 21, 2020, 9:53 AM IST

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ರಾಜ್ಯ ಸರ್ಕಾರ, ಮಾರ್ಚ್ 31 ರವರೆಗೆ ಪುಣೆ, ಪಿಸಿಎಂಸಿ, ಮುಂಬೈ, ನಾಗ್ಪುರದಲ್ಲಿ ಸಂಪೂರ್ಣ ಬಂದ್​ ಮಾಡುವಂತೆ ಸೂಚಿಸಿದ ಬೆನ್ನಲ್ಲೆ ಇಂದು ಜನ ಸಂಚಾರ ಸಂಪೂರ್ಣ ಬಂದ್​ ಆಗಿದೆ.

ಮುಂಬೈನ ಗುರು ತೇಜ್ ಬಹದ್ದೂರ್​ನಗರದ ರೈಲು ನಿಲ್ದಾಣದಲ್ಲಿ ಜನಸಂಚಾರ ವಿರಳವಾಗಿತ್ತು. ನಾಗ್ಪುರದ ರಸ್ತೆಗಳು ಕೂಡಾ ವಾಹನ ಸಂಚಾರವಿಲ್ಲದೆ ಖಾಲಿ ಖಾಲಿಯಾಗಿ ಕಾಣುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಂಚರಿಸಬಾರದು ಎಂದು ನಾಗ್ಪುರ ಪೊಲೀಸರು ರಸ್ತೆ ರಸ್ತೆಗಳಲ್ಲಿ ತೆರಳಿ ಘೋಷಣೆ ಮಾಡುತ್ತಿದ್ದಾರೆ.

ಮುಂಬೈ, ಪುಣೆ ಮತ್ತು ನಾಗ್ಪುರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಕಚೇರಿಗಳು ಮತ್ತು ಅಂಗಡಿಗಳನ್ನು ಮಾರ್ಚ್ 31 ರವರೆಗೆ ಮುಚ್ಚಲಾಗುವುದು ಎಂದು ಸಿಎಂ ಉದ್ಧವ್ ಠಾಕ್ರೆ ನಿನ್ನೆ ಘೋಷಣೆ ಮಾಡಿದ್ದರು.

  • Maharashtra: Sparse crowd at Guru Teg Bahadur Nagar railway station in Mumbai today; CM yesterday announced that all offices and shops apart from essential services will remain closed till March 31 in major cities of the state including Mumbai, Pune and Nagpur. #CoronaVirus pic.twitter.com/Uw8gn72v6X

    — ANI (@ANI) March 21, 2020 " class="align-text-top noRightClick twitterSection" data=" ">

ಅಗತ್ಯ ಅಂಗಡಿಗಳು, ಕಚೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಮುಚ್ಚುವಂತೆ ಉದ್ಧವ್​ ಠಾಕ್ರೆ ಸೂಚಿಸಿದ್ದಾರೆ. ಮನೆಯಲ್ಲೇ ಕುಳಿತು ಕೆಲಸ ಮಾಡಲು ಸಾಧ್ಯವಾಗದ ಕಚೇರಿಗಳು ಕೂಡಾ ಮಾರ್ಚ್ 31 ರವರೆಗೆ ಬಾಗಿಲು ತೆರೆಯುವಂತಿಲ್ಲ ಎಂದು ಕಡ್ಡಾಯವಾಗಿ ತಿಳಿಸಲಾಗಿದೆ. ಬ್ಯಾಂಕ್​ಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.