ಪಾಟ್ನಾ: ಚುನಾವಣೋತ್ತರ ಸಮೀಕ್ಷೆಯು ಬಿಹಾರದಲ್ಲಿ ಆರ್‌ಜೆಡಿ ಜಯ ಗಳಿಸಲಿದೆ ಎಂದು ಹೇಳಿರುವ ಹಿನ್ನೆಲೆ ವಿವಿಧ ಜಿಲ್ಲೆಗಳ ಆರ್‌ಜೆಡಿ ಬೆಂಬಲಿಗರು ತೇಜಸ್ವಿ ಯಾದವ್ ಅವರ ರಾಬ್ಡಿ ನಿವಾಸದ ಬಳಿ ಈಗಾಗಲೇ ಜಮಾಯಿಸುತ್ತಿದ್ದಾರೆ.
ಎಕ್ಸಿಟ್ ಪೋಲ್ ಸಮೀಕ್ಷೆ ನೀಡಿರುವಂತೆಯೇ ಇಂದು ಚುನಾವಣಾ ಫಲಿತಾಂಶ ಬರುತ್ತದೆ ಮತ್ತು ಈ ಬಾರಿ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಆರ್‌ಜೆಡಿ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ನಿನ್ನೆಯೇ ಗಯಾದಿಂದ ಬಂದಿದ್ದೇನೆ. ಎಕ್ಸಿಟ್ ಪೋಲ್ಗೆ ಅನುಗುಣವಾಗಿ ಫಲಿತಾಂಶಗಳು ಬರಲಿವೆ ಎಂದು ನಾವು ಆಶಿಸುತ್ತೇವೆ. ಈ ಬಾರಿ ಬಿಹಾರದಲ್ಲಿ ಮಹಾಘಟಬಂಧನ್ ಗೆಲ್ಲುತ್ತದೆ ಮತ್ತು ಯುವ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಲಿದ್ದಾರೆ. ಅವರು ಮುಖ್ಯಮಂತ್ರಿಯಾಗುವುದನ್ನು ನಾವು ನೋಡಲಿದ್ದೇವೆ ಎಂದು ನಿವಾಸದ ಬಳಿ ಜಮಾಯಿಸಿದ್ದ ಬೆಂಬಲಿಗರೊಬ್ಬರು ಹೇಳಿದ್ರು.
ಇದೇ ವೇಳೆ, ಮಾತನಾಡಿದ ಮತ್ತೊಬ್ಬ ಹಿರಿಯ ಆರ್‌ಜೆಡಿ ಬೆಂಬಲಿಗರು, ತೇಜಸ್ವಿ ನೀಡಿರುವ ಭರವಸೆ ಈಡೇರಿಸುತ್ತಾರೆ' ಈಗಾಗಲೇ ಮುಖ್ಯಮಂತ್ರಿಯಾಗಿದ್ದಾರೆ, ಕೇವಲ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ. ತೇಜಸ್ವಿ ಘೋಷಿಸಿದ ಯಾವುದೇ ಆಶ್ವಾಸನೆಯನ್ನು ಖಂಡಿತವಾಗಿಯೂ ಈಡೇರಿಸುತ್ತಾರೆ. ಈ ಬಾರಿ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಬಿಹಾರದ 38 ಜಿಲ್ಲೆಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ 55 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಮೂರು ಹಂತದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.