ETV Bharat / bharat

ಬಿಹಾರ ರಣಾಂಗಣ ಸಜ್ಜು: ಡಿಜಿಟಲ್​ ಆಗ್ತಿದೆ ಬಿಜೆಪಿ, ತಟ್ಟೆ ಬಡಿದ ಆರ್​ಜೆಡಿ - ಬಿಜೆಪಿ ವಿರುದ್ಧ ಆರ್​ಜೆಡಿ

ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ವಿರೋಧ ಪಕ್ಷ ಸ್ಥಾನದಲ್ಲಿರುವ ಆರ್​ಜೆಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗರೀಬ್​ ಅಧಿಕಾರ್​ ದಿವಸ್ ಅನ್ನು ಹಮ್ಮಿಕೊಂಡಿದೆ.

garib adhikar diwas
ಗರೀಬ್​ ಅಧಿಕಾರ್ ದಿವಸ್
author img

By

Published : Jun 7, 2020, 12:55 PM IST

ಪಾಟ್ನಾ(ಬಿಹಾರ): ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಭಾರಿ ರಾಜಕೀಯ ಬೆಳವಣಿಗೆಗಳು ಸೃಷ್ಟಿಯಾಗುತ್ತಿವೆ. ಕೊರೊನಾದಿಂದಾಗಿ ಬಹಿರಂಗ ಪ್ರಚಾರಕ್ಕೆ ನಿಷೇಧವಿರುವ ಕಾರಣದಿಂದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಜೂನ್​ 9ರಂದು ವರ್ಚುವಲ್​ ನಡೆಸುತ್ತಿದ್ದು, ಈ ರ‍್ಯಾಲಿಯಲ್ಲಿ ಫೇಸ್​ಬುಕ್​ ಲೈವ್ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಅಮಿತ್​ ಶಾ ಭಾಷಣ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಲು ಮುಂದಾಗಿದ್ದಾರೆ.

ಇದಕ್ಕೆ ಪ್ರತಿಯಾಗಿ ಅಲ್ಲಿನ ಪ್ರಾದೇಶಿಕ ಪಕ್ಷಗಳೂ ಕೂಡಾ ತಂತ್ರ, ಪ್ರತಿತಂತ್ರಗಳನ್ನು ಹೆಣೆಯುತ್ತಿವೆ. ರಾಷ್ಟ್ರೀಯ ಜನತಾ ದಳ (ಆರ್​ಜೆಡಿ)ಯ ನಾಯಕರು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಆರ್​ಜೆಡಿ ನಾಯಕರು ಗರೀಬ್​ ಅಧಿಕಾರ್ ದಿವಸ್​ ಅನ್ನು ಹಮ್ಮಿಕೊಂಡಿದ್ದು, ರಸ್ತೆಗಳಲ್ಲಿ ತಟ್ಟೆಗಳನ್ನು ಬಡಿದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗರೀಬ್​ ಅಧಿಕಾರ್ ದಿವಸ್

ಈ ಕುರಿತು ಮಾತನಾಡಿರುವ ಬಿಹಾರ ವಿರೋಧ ಪಕ್ಷ ನಾಯಕ ತೇಜಸ್ವಿ ಯಾದವ್​, ನಿತೀಶ್ ಕುಮಾರ್ ಮುಂದಾಳತ್ವದ ಎನ್​ಡಿಎ ಸರ್ಕಾರ ರಾಜ್ಯದಲ್ಲಿ ಮನುಷ್ಯರನ್ನು ಕೊಂದು ಚುನಾವಣೆಯಲ್ಲಿ ಜಯಗಳಿಸಲು ಮುಂದಾಗಿದೆ. ರಾಜ್ಯಕ್ಕೆ ಸಾಕಷ್ಟು ವಲಸೆ ಕಾರ್ಮಿಕರು ವಾಪಸ್ಸಾಗಿದ್ದು, ಅವರನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅವರಿಗೆ ಮೂಲ ಸೌಕರ್ಯಗಳನ್ನು ಕೂಡಾ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸಿಎಂ ನಿತೀಶ್ ಕುಮಾರ್ ಕೊರೊನಾ ವೈರಸ್​ ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ವಿರೋಧ ಪಕ್ಷ ಸ್ಥಾನದಲ್ಲಿರುವ ಆರ್​ಜೆಡಿ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿರುವ ಜೆಡಿಯುನ ನಿತೀಶ್​ಕುಮಾರ್ ಸ್ವಂತ ಬಲದಿಂದ ಸರ್ಕಾರ ರಚನೆಗೆ ಯೋಜನೆ ರೂಪಿಸುತ್ತಿದ್ದಾರೆ. ಬಿಜೆಪಿಯೂ ಕೂಡಾ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲು ಪ್ಲಾನ್​ ರೂಪಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.