ಒಡಿಶಾ: ಪ್ರಸಿದ್ಧ ಪರಿಸರ ವಿಜ್ಞಾನಿ ಡಾ. ದೆಬಲ್ ದೇಬ್ ಅವರು, ಅಳಿವಿನಂಚಿನಲ್ಲಿರೋ ದೇಶಿ ತಳಿಯ ಭತ್ತಗಳನ್ನು ಸಂರಕ್ಷಣೆ ಮಾಡುತ್ತಿದ್ದಾನೆ. ಒಂದು ವ್ರತದಂತೆ, ತಪಸ್ಸಿನಂತೆ ಇವರು ಭತ್ತದ ಅಪರೂಪದ ಬೀಜಗಳ ಸಂರಕ್ಷಣೆಯ ಪಣ ತೊಟ್ಟಿದಾರೆ.
ಡಾ. ದೆಬಲ್ ದೇಬ್ ಈವರೆಗೆ ಸುಮಾರು 1,452 ಅಪರೂಪದ ವೈವಿಧ್ಯಮಯ ದೇಶಿ ಭತ್ತದ ಬೀಜಗಳನ್ನು ಸಂರಕ್ಷಿಸಿದ್ದಾರೆ. ಇವರೇನೂ ಕೃಷಿ ವಿಜ್ಞಾನಿ ಅಲ್ಲ. ಆದರೆ, ತಮ್ಮನ್ನು ತಾವು ಕೃಷಿಗೆ ಅರ್ಪಿಸಿಕೊಂಡಿದ್ದಾರೆ. ಮೂಲತಃ ಪಶ್ಚಿಮ ಬಂಗಾಳದ ದೇಬ್ ಅವರು ಒಡಿಶಾದ ರಾಯಗಡ ಜಿಲ್ಲೆಯ ಹಿಂದುಳಿದ ಹಳ್ಳಿಯೊಂದರಲ್ಲಿ ಭತ್ತ ಕೃಷಿಯನ್ನ ಒಂದು ಯಜ್ಞದಂತೆ ಕೈಗೊಂಡಿದಾರೆ.
ಭಾರತದಲ್ಲಿ ಒಂದು ಕಾಲಕ್ಕೆ ಒಂದು ಲಕ್ಷದ ಹತ್ತು ಸಾವಿರ ಬಗೆಯ ದೇಶಿ ಭತ್ತದ ಬೀಜ ಲಭ್ಯವಿದ್ದವು. ವಿವಿಧ ಪ್ರದೇಶಗಳಲ್ಲಿನ ಭೌಗೋಳಿಕ ಪರಿಸ್ಥಿತಿ ಮತ್ತು ಹವಾಮಾನ ಅನುಸಾರ ವಿವಿಧ ಬಗೆಯ ಭತ್ತದ ಬೀಜಗಳನ್ನು ಬಿತ್ತಲಾಗುತ್ತಿತ್ತು. 1955ರಿಂದ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಿನ ಇಳುವರಿಯಿಂದ ರೈತರನ್ನು ಆಕರ್ಷಿಸಿದವು. ಮತ್ತು ಹಸಿರು ಕ್ರಾಂತಿಯ ಹೆಸರಿನಲ್ಲಿ ಸಾಂಪ್ರದಾಯಿಕ ಬೀಜಗಳನ್ನು ಕೃಷಿ ಪ್ರಕ್ರಿಯೆಗೆ ತೆಗೆದುಕೊಂಡು ಹೈಬ್ರಿಡ್ ಬೀಜಗಳನ್ನು ರೈತರಿಗೆ ಹಸ್ತಾಂತರಿಸಲು ಶುರು ಮಾಡ್ಲಾಯಿತು.
ರೈತರು ತಮ್ಮ ಸಂಗ್ರಹ ಡಬ್ಬಿಗಳಲ್ಲಿ ಸಂರಕ್ಷಿಸಲ್ಪಟ್ಟ ಬೀಜಗಳು ಕಣ್ಮರೆಯಾಗ್ತಾ ಬಂದವು. ರಾಸಾಯನಿಕ ಗೊಬ್ಬರದಿಂದ ಕೃಷಿ ಭೂಮಿಯ ಫಲವತ್ತತೆಯೂ ಕ್ರಮೇಣ ಕಡಿಮೆಯಾಗುತ್ತಾ ಬಂತು. ಅಷ್ಟೇ ಅಲ್ಲ, ಹೈಬ್ರೀಡ್ ಬೀಜಗಳ ಬಳಕೆಯಿಂದ ಭೂಮಿ ಬಂಜರಾಗುತ್ತಿದೆ.
ಕೃಷಿ ಆಧಾರಿತ ಈ ದೇಶಕ್ಕೆ ಪ್ರಸ್ತುತ ಸಾಗುತ್ತಿರುವ ದಿಕ್ಕು ಸರಿಯಿಲ್ಲ. ಹಾಗಾಗಿಯೇ ರೈತರಿಗೆ ಡಾ. ದೇಬ್ ಸಹಜ ಪಾರಂಪರಿಕ ಕೃಷಿಯ ಬಗ್ಗೆ ಮನವರಿಕೆ ಮಾಡಿಸ್ತಿದಾರೆ. ಜತೆಗೆ ಭತ್ತದ ಅಪರೂಪದ ಬೀಜಗಳ ಸಂರಕ್ಷಣೆಯ ಕೈಂಕರ್ಯವನ್ನೂ ಮುಂದುವರೆಸಿದ್ದಾರೆ.