ETV Bharat / bharat

ಮೊಹರಂ ಮೆರವಣಿಗೆ ತಡೆಗೆ ಕಾಶ್ಮೀರದ ಕೆಲ ಭಾಗದಲ್ಲಿ ನಿರ್ಬಂಧ - ಶ್ರೀನಗರದಲ್ಲಿ ಮೊಹರಂ ಆಚರಣೆ

ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಮೊಹರಂ ಆಚರಣೆ ಜಾರಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಶ್ರೀನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.‌

ಮೊಹರಂ
ಮೊಹರಂ
author img

By

Published : Aug 28, 2020, 7:31 PM IST

ಶ್ರೀನಗರ : ಜನರು ಮೊಹರಂ ಮೆರವಣಿಗೆಯನ್ನು ನಡೆಸದಂತೆ ತಡೆಯಲು ಕಾಶ್ಮೀರದ ಕೆಲವು ಭಾಗಗಳಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಸ್ಲಿಂ ಬಾಂಧವರ ಹಬ್ಬ ಮೊಹರಂ ಆಚರಣೆ ಸದ್ಯ ನಡೆಯುತ್ತಿದ್ದು, ಎಂಟನೇ ದಿನವಾದ ಇಂದು ಶ್ರೀನಗರದ ಬುಡ್ಗಮ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.‌ ಇದರಡಿಯಲ್ಲಿ ಜನ ಸಂಚಾರ ಮತ್ತು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.

ಶ್ರೀನಗರದಲ್ಲಿ ಶಹೀದ್‌ಗುಂಜ್, ಎಂಎ ರಸ್ತೆ, ರಾಮ್ ಮುನ್ಶಿ ಬಾಗ್, ಮೈಸುಮಾ ಮತ್ತು ಬಟಮಾಲೂ ಪ್ರದೇಶದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಬಂಧ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ಸಾರ್ವಜನಿಕ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಮೊಹರಂನ ಎಂಟನೇ ದಿನವನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿರ್ಬಂಧ ಹೇರಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಣಿವೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.