ETV Bharat / bharat

ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ನೂತನ ಜನರಲ್ ಮನೋಜ್​ ಮುಕುಂದ್​ ನರವನೆ - ಭಾರತೀಯ ಸೇನಾ ಮುಖ್ಯಸ್ಥ

ಭಯೋತ್ಪಾದನೆಯ ಮೂಲಗಳ ಮೇಲೆ ಪೂರ್ವಭಾವಿಯಾಗಿ ದಾಳಿ ನಡೆಸುವ ಯೋಜನೆ ನಮಗೆ ತಿಳಿದಿದೆ ಎಂದು ನೂತನ ಜನರಲ್ ಮನೋಜ್​ ಮುಕುಂದ್​ ನರವನೆ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮನೋಜ್​ ಮುಕುಂದ್​ ನರವನೆ,New Army Chief General MM Naravane
ಮನೋಜ್​ ಮುಕುಂದ್​ ನರವನೆ
author img

By

Published : Jan 1, 2020, 9:11 AM IST

ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ದಂಡನಾತ್ಮಕ ಪ್ರತಿಕ್ರಿಯೆ ತಂತ್ರವನ್ನು ನಾವು ರೂಪಿಸಿದ್ದೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮನೋಜ್​ ಮುಕುಂದ್​ ನರವನೆ ಎಚ್ಚರಿಸಿದ್ದಾರೆ.

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ, ಭಯೋತ್ಪಾದನೆಯ ಮೂಲಗಳ ಮೇಲೆ ಪೂರ್ವಭಾವಿಯಾಗಿ ದಾಳಿ ನಡೆಸುವ ಯೋಜನೆ ನಮಗೆ ತಿಳಿದಿದೆ. ಪಾಕಿಸ್ತಾನ ಪ್ರಾಯೋಜಿಸಿದ ಅಥವಾ ಬೆಂಬಲಿಸುವ ಯಾವುದೇ ಭಯೋತ್ಪಾದನೆ ಕೃತ್ಯಕ್ಕೆ ಪ್ರತಿಕ್ರಿಯಿಸಲು ಹಲವು ಆಯ್ಕೆಗಳು ನಮ್ಮ ಮುಂದಿವೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

  • #WATCH Army Chief General MM Naravane: Our neighbour is trying to use terrorism as tool of state policy, as a way of carrying out proxy war against us. While maintaining deniability. However, this state can't last long, as they say you can't fool all the people, all the time. pic.twitter.com/mQEsh8CbaJ

    — ANI (@ANI) December 31, 2019 " class="align-text-top noRightClick twitterSection" data=" ">

ಈವರೆಗೂ ಸೇನಾ ಮುಖ್ಯಸ್ಥರಾಗಿದ್ದ ಬಿಪಿನ್​ ರಾವತ್, ಸೇವೆಯಿಂದ ನಿವೃತ್ತಿಗೊಂಡಿದ್ದು, ಈ ಹಿಂದೆ ದೇಶದ ಪೂರ್ವ ವಲಯದ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ​ಎಂ.ಎಂ.ನರವನೆ ಇನ್ನು ಮುಂದೆ ಪ್ರಪಂಚದ ಬಲಿಷ್ಠ ಸೇನೆಗಳಲ್ಲೊಂದಾದ ಭಾರತೀಯ ಸೇನೆಯನ್ನು ಮುನ್ನಡೆಸಲಿದ್ದಾರೆ.

ಸೇನಾ ಮುಖ್ಯಸ್ಥರ ಹುದ್ದೆಯಿಂದ ನಿವೃತ್ತಿಗೊಳ್ಳುತ್ತಿದ್ದಂತೆ, ಸಿಡಿಎಸ್‌(ಚೀಫ್‌ ಆಫ್ ಡಿಫೆನ್ಸ್‌ ಸ್ಟಾಫ್‌) ಆಗಿ ಜನರಲ್ ಬಿಪಿನ್ ರಾವತ್ ಆಯ್ಕೆಯಾಗಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.