ನವದೆಹಲಿ: ರಾಷ್ಟ್ರೀಯ ಹಬ್ಬ, ಭಾರತದ ವೈಭವ ದರ್ಶನ ಮಾಡುವ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜಪಥದಲ್ಲಿ ಸೇನಾ ಪಡೆಗಳಿಂದ ಭರ್ಜರಿ ತಾಲೀಮು ನಡೆಯಿತು.
ತೀವ್ರ ಚಳಿಯ ನಡುವೆ ನೌಕಾಪಡೆ ಯೋಧರಿಂದ ಕವಾಯತು ನಡೆಯಿತು. ಕವಾಯತು ಹಿನ್ನೆಲೆಯಲ್ಲಿ ಪ್ರತಿದಿನ ಅಂದರೆ 7 ದಿನಗಳ ಕಾಲ ಬೆಳಗ್ಗೆ 10:35 ರಿಂದ 12 -15 ರವರೆಗೆ ವಿಮಾನಗಳ ಹಾರಾಟವನ್ನ ನಿಷೇಧಿಸಿ ನೋಟಿಸ್ ಜಾರಿ ಮಾಡಲಾಗಿದೆ.
ಇನ್ನು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.