ಮುಂಬೈ: ಸ್ಪೀಕರ್ಗೆ ರಾಜೀನಾಮೆ ನೀಡಿ ಮತ್ತೆ ಮುಂಬೈ ಸೇರಿರುವ ಬಂಡಾಯ ಶಾಸಕರು ಇದೀಗ ಶಿರಡಿಗೆ ಭೇಟಿ ನೀಡಿ ಸಾಯಿ ಬಾಬಾನ ದರ್ಶನ ಪಡೆದರು.
ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿನ್ನೆ ಸುಪ್ರೀಂ ಆದೇಶ ನೀಡಿದ ಬೆನ್ನಲ್ಲೆ ಅತೃಪ್ತ ಶಾಸಕರು ವಿನಾಯಕನ ಗುಡಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಇದೀಗ ಶಿರಡಿಯ ಬಾಬಾ ದೇಗುಲಕ್ಕೂ ಭೇಟಿ ನೀಡಿ, ಸಾಯಿಬಾಬಾಗೆ ಪೂಜೆ ಸಲ್ಲಿಸಿದರು.
ರೆನೈಸೆನ್ಸ್ ಹೋಟೆಲ್ನಿಂದ ಮುಂಬೈ ಏರ್ಪೋರ್ಟ್ಗೆ ಬಂದ ಶಾಸಕರು, ಆನಂತರ ಶಿರಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು
ಈಗಾಗಲೆ ವಿಪ್ಅನ್ನೂ ಲೆಕ್ಕಿಸದೆ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಚಕ್ಕರ್ ಹೊಡೆದಿದ್ದಾರೆ. ಮುಂದಿನ ದಿನಗಳಲ್ಲಾದರೂ ಅಧಿವೇಶನಕ್ಕೆ ಹಾಜರಾಗ್ತಾರಾ ಎಂಬುದು ಇನ್ನೂ ನಿಗೂಢವಾಗಿದೆ. ಈ ಮಧ್ಯೆ ಮಂಗಳವಾರ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲಿದ್ದು, ಶಾಸಕರ ಭವಿಷ್ಯವೂ ನಿರ್ಧಾರವಾಗಲಿದೆ.