ETV Bharat / bharat

ಕೋವಿಡ್-19 ವಿರುದ್ಧ ಹೋರಾಡಲು ಖೆಡ್ಡಾ ತೋಡಿದ ಆರ್​ಬಿಐ - ಕೋವಿಡ್-19 ವಿರುದ್ಧ ಹೋರಾಡಲು ಖೆಡ್ಡಾ ತೋಡಿದ ಆರ್​ಬಿಐ

ಆರ್​ಬಿಐ ಕ್ರಮಗಳು ಹಲವು ಆವಿಷ್ಕಾರಗಳೊಂದಿಗೆ ನಿರೀಕ್ಷಿತ ಮಾರ್ಗದಲ್ಲಿ ಸಾಗಿದ್ದರೂ ಅದು ಸಾಂಪ್ರದಾಯಿಕ ನೆಲೆಗೆ ತಳಕು ಹಾಕಿಕೊಂಡಿದೆ. ಕೊರೊನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗ ದಾಂಗುಡಿ ಇಟ್ಟ ಹೊತ್ತಿನಲ್ಲಿಯೇ ಎಚ್ಚೆತ್ತ ಕೇಂದ್ರೀಯ ಬ್ಯಾಂಕ್ ತನ್ನ ಹಣದ ದ್ರವ್ಯತೆಯ (ಲಿಕ್ವಿಡಿಟಿ) ಕಿಟಕಿಗಳನ್ನು ತೆರೆದು ಸನ್ನದ್ಧಗೊಂಡಿದೆ.

ಕೋವಿಡ್-19
ಕೋವಿಡ್-19
author img

By

Published : Mar 30, 2020, 9:09 AM IST

ಕೊರೊನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗ ದಾಂಗುಡಿ ಇಟ್ಟ ಹೊತ್ತಿನಲ್ಲಿಯೇ ಎಚ್ಚೆತ್ತ ಕೇಂದ್ರೀಯ ಬ್ಯಾಂಕ್ ತನ್ನ ಹಣದ ದ್ರವ್ಯತೆಯ ( ಲಿಕ್ವಿಡಿಟಿ ) ಕಿಟಕಿಗಳನ್ನು ತೆರೆದು ಸನ್ನದ್ಧಗೊಂಡಿತು. ಪ್ರಸ್ತುತ ಏಳನೇ ದ್ವೈಮಾಸಿಕ ವಿತ್ತೀಯ ನೀತಿ ಪರಾಮರ್ಶೆ ವೇಳೆ, ಆರ್​ಬಿಐ ತನ್ನ ಅಭಯದಾಯಕ ನಿಲುವನ್ನು ಮುಂದುವರಿಸಿದೆ.

ವೈರಸ್ ವಿರುದ್ಧ ಹೋರಾಟ ನಡೆಸಲು ಅನುಕೂಲವಾಗುವಂತೆ ಬ್ಯಾಂಕುಗಳಿಗೆ ಹೆಚ್ಚು ಅಗತ್ಯ ಪರಿಹಾರ ಒದಗಿಸಲು ವಿತ್ತೀಯ ಮತ್ತು ನಿಯಂತ್ರಕ ಕ್ರಮಗಳನ್ನು ಅದು ತೆರೆದಿಟ್ಟಿತು. ಆರ್​ಬಿಐ ಕ್ರಮಗಳು ಹಲವಾರು ಆವಿಷ್ಕಾರಗಳೊಂದಿಗೆ ನಿರೀಕ್ಷಿತ ಮಾರ್ಗದಲ್ಲಿ ಸಾಗಿದ್ದರೂ ಅದು ಸಾಂಪ್ರದಾಯಿಕ ನೆಲೆಗೆ ತಳಕು ಹಾಕಿಕೊಂಡಿದೆ. 75 ಬೇಸಿಸ್ ಪಾಯಿಂಟ್‌ಗಳ ಕಡಿತದೊಂದಿಗೆ ರೆಪೊ ದರವನ್ನು ಶೇ 5.15 ರಿಂದ 4.4 ಕ್ಕೆ ಅದು ಇಳಿಸಿದೆ. ಬಾಹ್ಯ ಮಾನದಂಡ ದರಗಳೊಂದಿಗೆ ಈಗಾಗಲೇ ಸಂಪರ್ಕ ಹೊಂದಿದ ಕಡಿಮೆ ಸಾಲ ದರಗಳ ಸ್ವಯಂ ಪ್ರಸರಣ ಇದಾಗಿರಬಹುದು. ಆ ಮಟ್ಟಿಗೆ ಪ್ರಸರಣ ಉಂಟಾಗಿ ಸಾಲಗಾರರಿಗೆ ಹೆಚ್ಚು ಅಗತ್ಯ ಪರಿಹಾರ ದೊರೆಯಲಿದೆ.

ನವೀನತೆಯನ್ನು ನಿರೂಪಿಸಲೆಂಬಂತೆ ಆರ್‌ಬಿಐ ರಿವರ್ಸ್ ರೆಪೊ ದರ ಕಡಿತವನ್ನು ಶೇ 4 ರಷ್ಟು ಮರು ಹೊಂದಾಣಿಕೆ ಮಾಡಿದೆ. ಅದರಂತೆ ಈಗಿರುವ ಪಾಲಿಸಿ ದರದ ಹಾದಿಯನ್ನು 50 ಬಿ ಪಿ ಎಸ್‌ನಿಂದ 65 ಬಿ ಪಿ ಎಸ್‌ಗೆ ಹಿಗ್ಗಿಸಲಾಗಿದೆ. ಹೊಸ ಮಾರ್ಗದಂತೆ, ಲಿಕ್ವಿಡಿಟಿ ಹೊಂದಾಣಿಕೆ ಸೌಲಭ್ಯ (ಎಲ್‌ ಎ ಎಫ್) ಅಡಿಯಲ್ಲಿ ರಿವರ್ಸ್ ರೆಪೊ ದರವು, ಪಾಲಿಸಿ ರೆಪೊ ದರಕ್ಕಿಂತ 40 ಬಿ ಪಿ ಎಸ್ ಕಡಿಮೆ ಇರುತ್ತದೆ. ಅಸ್ತಿತ್ವದಲ್ಲಿ ಇರುವ 25 ಬಿ ಪಿ ಎಸ್‌ಗೆ ಹೋಲಿಕೆ ಮಾಡಿದರೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರವು ಪಾಲಿಸಿ ರೆಪೊ ದರಕ್ಕಿಂತ 25 ಬಿ ಪಿ ಎಸ್ ಆಗಿರುತ್ತದೆ. ರಿವರ್ಸ್ ರೆಪೊ ದರಗಳ ಅಡಿಯಲ್ಲಿ ಆರ್​ಬಿಐ ನಲ್ಲಿ ಇರಿಸಲಾಗಿರುವ ನಿಧಿಯ ಮೇಲಿನ ಇಳುವರಿ (ಯೀಲ್ಡ್ ) ಇನ್ನು ಮುಂದೆ ಕಡಿಮೆ ಆಗುವುದರಿಂದ ಈ ಕ್ರಮವು ಬ್ಯಾಂಕುಗಳ ಕ್ರೆಡಿಟ್ ರಿಸ್ಕ್ ಹಸಿವನ್ನು ಹೆಚ್ಚಿಸಬಹುದು.

1. ಹಣದ ದ್ರವ್ಯತೆ ಬೆಂಬಲಿಸುವ ಕ್ರಮಗಳು:

2020 ರ ಫೆಬ್ರವರಿ 17 ಮತ್ತು ಮಾರ್ಚ್ 18 ರ ನಡುವೆ ಐದು ದೀರ್ಘ ಕಾಲೀನ ರೆಪೊ ಕಾರ್ಯಾಚರಣೆಗಳನ್ನು ನಡೆಸಿರುವುದರ ಜೊತೆಗೆ ( ಎಲ್‌ ಟಿ ಆರ್‌ ಒ ಗಳು ) ಒಂದು ವರ್ಷದ ಮತ್ತು ಮೂರು ವರ್ಷದ ಟೆನರ್​ಗಳಿಗಾಗಿ ರೂ 1,25,000 ಕೋಟಿ ಮೊತ್ತದ ಹಣವನ್ನು ಸಮಂಜಸವಾದ ವೆಚ್ಚದಲ್ಲಿ ಬ್ಯಾಂಕುಗಳಿಗೆ ಬಾಳಿಕೆ ಬರುವ ದ್ರವ್ಯತೆಯನ್ನು ಒದಗಿಸಲು (ಸ್ಥಿರ ರೆಪೊ ದರ), ತಡೆ ರಹಿತ ಪಾವತಿ ಮತ್ತು ತೀರುವಳಿ ವ್ಯವಸ್ಥೆ ಖಚಿತಪಡಿಸಿಕೊಳ್ಳಲು ಆರ್‌ ಬಿ ಐ ಆಂದೋಲನದ ಮಾದರಿಯ ಮಧ್ಯಸ್ಥಿಕೆ ಮುಂದುವರಿಸಿದೆ.

ಮುಂದಿನ ದ್ರವ್ಯತೆಯ ಆದ್ಯತೆಗಳನ್ನು ಗಮನದಲ್ಲಿ ಇರಿಸಿಕೊಂಡು ಮತ್ತು ಪ್ರಸ್ತುತ ಸಮಾಜದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಹೊಸ ಠೇವಣಿ ಒಳಹರಿವು ಕಡಿಮೆ ಆಗಬಹುದಾದ ಕಾರಣಕ್ಕೆ ಬ್ಯಾಂಕಿಂಗ್ ವ್ಯವಸ್ಥೆಯ ಹಣದ ಅಗತ್ಯ ಅರಿತು ಬ್ಯಾಂಕುಗಳು ಆರ್ ಬಿ ಐನೊಂದಿಗೆ ಠೇವಣಿ ಇಡಬೇಕಾದ ಶೇಕಡಾವಾರು ನಗದು ಮೀಸಲು ಅನುಪಾತವನ್ನು ( ಸಿ ಆರ್‌ ಆರ್ ) ಶೇ 3 ರಿಂದ ಶೇ 4ಕ್ಕೆ ಕಡಿಮೆ ಮಾಡಿದ್ದು ಮತ್ತೆ ಬ್ಯಾಂಕಿನ ನಿಧಿಯಾದ ರೂ .1,37,000 ಕೋಟಿ ಹಣವನ್ನು ಬಿಡುಗಡೆಗೊಳಿಸಿದೆ. ರೋಗಗ್ರಸ್ತ ಉದ್ಯಮದ ಪುನಶ್ಚೇತನಕ್ಕೆ ಇದನ್ನು ವಿನಿಯೋಗ ಮಾಡಬಹುದು.

ಶಾಸನಬದ್ಧ ದ್ರವ್ಯತೆ ಅನುಪಾತದ ( ಎಸ್‌ ಎಲ್‌ ಆರ್ ) ಅಡಿಯಲ್ಲಿರುವ ಸೆಕ್ಯೂರಿಟಿಗಳಿಗೆ ತಕ್ಕಂತೆ ಬ್ಯಾಂಕುಗಳು ಆರ್‌ ಬಿ ಐ ನಿಂದ ಸಾಲ ಪಡೆಯುವ ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯದ (ಎಂಎಸ್‌ಎಫ್) ಶೇಕಡಾವಾರು ಪ್ರಮಾಣವನ್ನು ಶೇ 2 ರಿಂದ ಶೇ 3ಕ್ಕೆ ಏರಿಕೆ ಮಾಡಲಾಗಿದೆ. ಆರ್ ಬಿ ಐ ಮತ್ತೆ ರೂ .1,37,000 ಕೋಟಿ ಸಂಪನ್ಮೂಲಗಳನ್ನು ಬ್ಯಾಂಕುಗಳಿಗೆ ಸೇರಿಸಬೇಕು ಮತ್ತು ಅಂತಹ ಎಲ್ಲಾ ಕ್ರಮಗಳ ಒಟ್ಟು ಪರಿಣಾಮವನ್ನು ಸ್ವೀಕರಿಸಿ ವಿಸ್ತರಿಸಿದ ದ್ರವ್ಯತೆ ರೂ. 3.74,000 ಕೋಟಿ ರೂ. ಆಗಲಿದ್ದು ಬ್ಯಾಂಕುಗಳಿಗೆ ಸಾಲ ಕೊಡಲು ಬಲ ತುಂಬಲಿದೆ.

2. ಬ್ಯಾಂಕ್ ಸಾಲಗಾರರಿಗೆ ಪರಿಹಾರ:

ಪ್ರಸ್ತುತ ಬಿಕ್ಕಟ್ಟಿನ ವಾಸ್ತವಿಕ ಮತ್ತು ಪ್ರಾಯೋಗಿಕ ದೃಷ್ಟಿಕೋನವನ್ನು ತೆಗೆದುಕೊಂಡರೆ, ಎಲ್ಲಾ ಬ್ಯಾಂಕುಗಳು ಮತ್ತು ಬ್ಯಾಂಕೇತರರು ಈಗಿರುವ ಸಾಲಗಳ ಮರುಪಾವತಿಯನ್ನು ಮೂರು ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ನಿಷೇಧಿಸಬಹುದು. ಇದರ ಪರಿಣಾಮ ಎಂಬಂತೆ ಸಾಂಕ್ರಾಮಿಕ ರೋಗದಿಂದ ತೊಂದರೆಗೆ ಸಿಲುಕಿರುವ ಸಾಲಗಾರರು ಸಮಾನ ಮಾಸಿಕ ಕಂತುಗಳನ್ನು (ಇಎಂಐ) ಪಾವತಿಸುವ ಒತ್ತಡದಿಂದ ಮುಕ್ತರಾಗುತ್ತಾರೆ ಮತ್ತು ಸಾಲ ಕಟ್ಟಲೇ ಬೇಕಾದ ಬದ್ಧತೆಯನ್ನು ಮುಂದೂಡಿದಂತೆ ಆಗುತ್ತದೆ.

ಅಂತೆಯೇ, ಕಾರ್ಯನಿರತ ಬಂಡವಾಳದ ಮಿತಿಗಳ ಮೇಲಿನ ಬಡ್ಡಿಯನ್ನು ಮಾರ್ಚ್ 1, 2020 ರಂದು ಬಾಕಿ ಇರುವ ಅಂತಹ ಸೌಲಭ್ಯಗಳ ಮೇಲೆ ಮೂರು ತಿಂಗಳವರೆಗೆ ಮುಂದೂಡಿಕೆ ಮಾಡಬಹುದು. ಇದು ಉದ್ಯಮವನ್ನು ಬಡ್ಡಿ ಸೇವೆಯ ಒತ್ತಡದಿಂದ ಮುಕ್ತಗೊಳಿಸಲಿದೆ. ಅಂತಹ ಸಾಲ ಸೌಲಭ್ಯಗಳಲ್ಲಿನ ಬಾಕಿ ಮತ್ತು ನಿಗದಿತ ಕಂತುಗಳನ್ನು ಮುಂದೂಡುವುದನ್ನು ಬ್ಯಾಂಕುಗಳಿಗೆ ಪರಿಹಾರ ನೀಡುವ ನಿಷ್ಕ್ರಿಯ ಆಸ್ತಿ ( ಎನ್‌ ಪಿ ಎ ) ಎಂದು ವರ್ಗೀಕರಣ ಮಾಡಬಾರದು. ಸಾಲಗಾರರು ಪಾವತಿ ಮಾಡದೆ ಇರುವುದರಿಂದ, ಅವರ ಸಾಲ ಪಡೆಯುವ ಅರ್ಹತೆಯ ಚರಿತ್ರೆಗೆ ಧಕ್ಕೆ ಆಗದಂತೆ ಭವಿಷ್ಯದಲ್ಲಿ ಬ್ಯಾಂಕುಗಳ ಅಪಾಯ ಆಧಾರಿತ ಬೆಲೆ ಮಾಪನಗಳ ಮೇಲೆ ಪರಿಣಾಮ ಬೀರುವುದನ್ನು ತಡೆಯಬೇಕು. ಒಂದು ವೇಳೆ ಅಪಾಯದ ಪ್ರೀಮಿಯಂ ತುಂಬಿಕೊಂಡಿದ್ದೇ ಆದರೆ ಸಾಲ ದರ ಹೆಚ್ಚಿಸುವ ಸಾಮರ್ಥ್ಯ ಮರುಕಳಿಸಲಿದೆ.

3. ಬ್ಯಾಂಕುಗಳಿಗೆ ಪರಿಹಾರ:

ಸಾಲ ಮರುಪಾವತಿ ಮತ್ತು ಸೌಲಭ್ಯಗಳ ಮರುಹಂಚಿಕೆಯಲ್ಲಿ ನೀಡಲಾದ ವಿನಾಯ್ತಿಯಿಂದ ಉಂಟಾಗುವ ಆಸ್ತಿ ವರ್ಗೀಕರಣ ಮಾನದಂಡಗಳಲ್ಲಿನ ಪರಿಹಾರದ ಹೊರತಾಗಿ, 2020ರ ಏಪ್ರಿಲ್ 1 ರಿಂದ 2020 ರ ಅಕ್ಟೋಬರ್ 1 ರವರೆಗೆ ಜಾರಿಗೆ ಬರಲಿರುವ ವರ್ಧಿತ ಜಾಗರೂಕತೆಯ ಮಾನದಂಡಗಳ ಅನುಸರಣೆಯನ್ನು ಮುಂದೂಡಲು ಬ್ಯಾಂಕುಗಳಿಗೆ ಅನುಮತಿ ಇದೆ. ಸ್ಥಿರವಾದ ನಿಧಿಯ ಸ್ಥಾನವನ್ನು ಕಾಯ್ದುಕೊಳ್ಳಲು ಬ್ಯಾಂಕುಗಳು ಅಗತ್ಯವಿರುವ ವರ್ಧಿತ ನಿವ್ವಳ ಸ್ಥಿರ ನಿಧಿ ಅನುಪಾತ ( ಎನ್‌ ಎಸ್‌ ಎಫ್ ಆರ್ ). ಅಂತೆಯೇ, ಬಂಡವಾಳ ಸಂರಕ್ಷಣಾ ಬಫರ್ ( ಸಿ ಸಿ ಬಿ ) ಮಟ್ಟವನ್ನು ಹೆಚ್ಚಿಸುವ ಅನುಸರಣೆಯನ್ನು ಮಾರ್ಚ್ 31, 2020 ರಿಂದ ಸೆಪ್ಟೆಂಬರ್ 30, 2020 ರವರೆಗೆ ಮುಂದೂಡಲಾಗಿದೆ, ಹೊಸ ಜಾಗರೂಕತೆಯ ಮಾನದಂಡಗಳಿಗೆ ಹೊಂದಿಕೊಳ್ಳಲು ಬ್ಯಾಂಕುಗಳಿಗೆ ಸಮಂಜಸವಾದ ಬಲ ಒದಗಿಸುತ್ತದೆ.

ಕೋವಿಡ್​-19 ನಿಂದ ಉಂಟಾಗುವ ಸ್ಥಿತಿಯನ್ನು ವಿಶ್ಲೇಷಿಸಿದರೆ ಅದರಲ್ಲಿಯೂ ಬ್ಯಾಂಕು ಮತ್ತು ಗ್ರಾಹಕನ ನಡುವೆ ಸಾಮಾಜಿಕ ಅಂತರ ಉಂಟಾಗಿರುವಾಗ ಆರ್‌ ಬಿ ಐ ನ ಕ್ರಮಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸಲು ಹಲವು ಬ್ಯಾಂಕುಗಳಿಗೆ ಕಠಿಣ ಸವಾಲು ಎದುರಾಗಬಹುದು. ಬ್ಯಾಂಕುಗಳು ಕೂಡ ತಮ್ಮ ವ್ಯವಹಾರ ಮುಂದುವರಿಕೆ ಯೋಜನೆಗಳನ್ನು (ಬಿಸಿಪಿ) ಸಕ್ರಿಯಗೊಳಿಸಬಹುದು. ಅ ಯೋಜನೆಗಳನ್ನು ಕಾರ್ಯಗತಗೊಳಿಸಲು, ಹಣಕಾಸು ವ್ಯವಸ್ಥೆಯ ಮೇಲೆ ನಿಗಾ ಇಡಲು ಬಿ ಸಿ ಪಿ ಮೇಲೆ ಕೆಲಸ ಮಾಡುವ ಆರ್‌ ಬಿ ಐ ತಂಡದ ಸಹಯೋಗದೊಂದಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕಾಗಿ ಕರಡೊಂದು ಸಿದ್ಧಗೊಂಡಿದೆ.

4. ಬ್ಯಾಂಕುಗಳ ತೀವ್ರ ಪಾತ್ರ:

ಮಾರ್ಚ್ 26, 2020 ರಂದು ಘೋಷಿಸಲಾದ ರೂ. 1.7 ಲಕ್ಷ ಕೋಟಿಯಷ್ಟು ಪರಿಹಾರ ಪ್ಯಾಕೇಜ್​ ಅನ್ನು ವೈರಸ್ ದಾಳಿಗೆ ತುತ್ತಾದ ಮುಖ್ಯವಾಗಿ ದೇಶದೊಳಗೆ ಸಾಮಾಜಿಕ ನ್ಯಾಯದಿಂದ ವಂಚಿತರಾದವರು ಮತ್ತು ದುರ್ಬಲ ಸಮುದಾಯಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮಾಡಲು ಆರ್‌ ಬಿ ಐ ವಿತರಣೆಯಡಿ, ಬ್ಯಾಂಕುಗಳು ಸಹ ಸಾಕಷ್ಟು ಸಂಪನ್ಮೂಲಗಳನ್ನು ಒಟ್ಟುಗೂಡಿಸಬೇಕಾಗಿದೆ. ವೈರಸ್ ಪೀಡಿತರ ವಿಶಾಲ ವರ್ಗಕ್ಕೆ ಪರಿಹಾರ ಒದಗಿಸಲು ಆರ್‌ ಬಿ ಐ ಮತ್ತು ಸರ್ಕಾರ ಉತ್ತಮವಾಗಿ ವಿನ್ಯಾಸಗೊಳಿಸಿದ ಪ್ರಣಾಳಿಕೆ ರೂಪಿಸಿದ್ದರೂ, ಇತರ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಅವುಗಳನ್ನು ಕಾರ್ಯಗತಗೊಳಿಸಲು ಸರಿಯಾದ ವಿಧಾನ ರೂಪಿಸುವುದು ಬ್ಯಾಂಕುಗಳಿಗೆ ಸವಾಲಾಗಿದೆ. ಹೀಗಾಗಿ ಆರ್‌ ಬಿ ಐ ವಹಿಸುವ ದೊಡ್ಡ ಪಾತ್ರ ಮತ್ತು ಬ್ಯಾಂಕುಗಳ ಹೊಣೆಗಾರಿಕೆ ಕೋವಿಡ್​-19 ಸಮರದ ಮುಂಚೂಣಿ ಯೋಧರನ್ನಾಗಿ ಮಾಡಿದ್ದು ವಿಮಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅವುಗಳ ಸೇವೆ ಕೂಡ ಶ್ಲಾಘನೀಯ.

ಲೇಖಕರು : ಡಾ. ಕೆ. ಶ್ರೀನಿವಾಸ ರಾವ್

ಹೈದರಾಬಾದಿನ​ ಇನ್ಸ್ಟಿಟ್ಯೂಟ್ ಆಫ್ ಇನ್ಸೂರೆನ್ಸ್ ಆ್ಯಂಡ್ ರಿಸ್ಕ್ ಮ್ಯಾನೇಜ್ಮೆಂಟ್, ಐ ಐ ಆರ್ ಎಂನಲ್ಲಿ ಸಹಾಯಕ ಪ್ರಾಧ್ಯಾಪಕರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.