ನವದೆಹಲಿ: ಸಹಕಾರಿ ಕ್ಷೇತ್ರದಲ್ಲಿನ ಹಗರಣಗಳನ್ನು ಕೊನೆಗೊಳಿಸಲು ಮತ್ತು ಸಹಕಾರಿ ಬ್ಯಾಂಕ್ಗಳ ಆಡಳಿತ ಸುಧಾರಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಬೇಕು ಎಂದು ಆರ್.ಗಾಂಧಿ ಸಮಿತಿ ಕೆಲವು ವರ್ಷಗಳ ಹಿಂದೆ ಸೂಚಿಸಿದ್ದರೂ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮೀನಮೇಷ ಏಣಿಸುತ್ತಿದೆ.
ಒಟ್ಟು ಏಳು ರಾಜ್ಯಗಳನ್ನೊಳಗೊಂಡ 9 ಲಕ್ಷ ಗ್ರಾಹಕರ ಠೇವಣಿ ಹೊಂದಿರುವ ಪಂಜಾಬ್-ಮಹಾರಾಷ್ಟ್ರ ಸಹಕಾರ ಬ್ಯಾಂಕ್ (ಪಿಎಮ್‌ಸಿ) ನಲ್ಲಿ ಕಳೆದ ವರ್ಷ 11,614 ಕೋಟಿ ರೂ.ಗಳ ಆರ್ಥಿಕ ಹಗರಣದಿಂದ ದೇಶವು ಆಘಾತಕ್ಕೊಳಗಾಗಿದೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿತು. ದೇಶಾದ್ಯಂತ 1,482 ನಗರ ಮತ್ತು ಇತರ 58 ಬಹು-ರಾಜ್ಯ ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿದಾರರ ಸಂಖ್ಯೆ 8.6 ಕೋಟಿ. ಸಹಕಾರಿ ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡಿದ ಒಟ್ಟು ಮೊತ್ತ ಸುಮಾರು 5 ಲಕ್ಷ ಕೋಟಿ ರೂಪಾಯಿಗಳು!
277 ನಗರ ಸಹಕಾರಿ ಬ್ಯಾಂಕ್ಗಳ ಆರ್ಥಿಕ ಸ್ಥಿತಿ ದುರ್ಬಲವಾಗಿದೆ, 105 ಬ್ಯಾಂಕ್ಗಳು ನಿಯಮಗಳ ಪ್ರಕಾರ ಕನಿಷ್ಠ ಹೂಡಿಕೆ ಗುರಿಯನ್ನು ಪೂರೈಸಲು ಸಾಧ್ಯವಿಲ್ಲ ಮತ್ತು 328 ಬ್ಯಾಂಕ್ಗಳು ಶೇಕಡಾ 15ಕ್ಕಿಂತ ಹೆಚ್ಚಿನ ನಿಷ್ಕ್ರಿಯ ಆಸ್ತಿಯನ್ನು ಸಂಗ್ರಹಿಸಿವೆ ಎಂದು ಹಣಕಾಸು ಸಚಿವರು ಸಂಸತ್ನಲ್ಲಿ ಹೇಳಿಕೆ ನೀಡಿದ್ದರು.
ಸಹಕಾರಿ ಬ್ಯಾಂಕ್ಗಳ ವ್ಯವಹಾರಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸಲು, ಬಂಡವಾಳ ಸ್ವಾಧೀನಕ್ಕೆ ಹೊಸ ಮಾರ್ಗಗಳನ್ನು ತೆರೆಯಲು, ನಿರ್ವಹಣೆಯನ್ನು ಸುಧಾರಿಸಲು ಮತ್ತು ಠೇವಣಿದಾರರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಸರ್ಕಾರವು ಸಹಕಾರಿ ಬ್ಯಾಂಕ್ಗಳ ಮೇಲ್ವಿಚಾರಣೆ ಮಾಡಲು ರಿಸರ್ವ್ ಬ್ಯಾಂಕ್‌ಗೆ ಅವಕಾಶ ಕಲ್ಪಿಸಿದೆ. ಮಹಾರಾಷ್ಟ್ರ ಸಹಕಾರಿ ಒಕ್ಕೂಟ ಮತ್ತು ಇತರರು, ಸಹಕಾರ ಸ್ವಾಯತ್ತತೆ ಮತ್ತು ಪ್ರತಿ ಸದಸ್ಯರಿಗೆ ಒಂದು ಮತಕ್ಕೆ ಸಮಾನ ಮತದಾನದ ಹಕ್ಕುಗಳನ್ನು ಕೇಂದ್ರವು ಅಂಗೀಕರಿಸಿದ್ದರಿಂದ ತೃಪ್ತಿ ಹೊಂದಿದ್ದೇವೆ ಎಂದು ಘೋಷಿಸಿದ್ದಾರೆ. ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಆಶಾವಾದಿ ಭರವಸೆ ವಾಸ್ತವದಿಂದ ದೂರವಿದೆ ಎಂದು ಇದರಿಂದ ಸಾಬೀತಾಗಿದೆ.
ಅಂಗಹೀನತೆ ಮತ್ತು ಹಗರಣದಿಂದ ಬಳಲುತ್ತಿರುವ ಪಿಎಮ್‌ಸಿ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆಯಲ್ಲಿ ತಂದ ಒಂದು ವರ್ಷದ ನಂತರ, ಠೇವಣಿದಾರರ ಪರಿಸ್ಥಿತಿ ಹದಗೆಟ್ಟಿತು ಮತ್ತು ಅವರ ಪರಿಸ್ಥಿತಿಯು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ವಾಸ್ತವವಾಗಿ, ಸುಮಾರು 200 ಕೋಟಿ ರೂ. ಆರ್‌ಬಿಐ ನೌಕರರ ಸಹಕಾರಿ ಸಂಘಗಳ ಹಣವು ಸಹಕಾರಿ ಬ್ಯಾಂಕ್ಗಳೊಂದಿಗೆ ಸಿಲುಕಿಕೊಂಡಿದೆ ಮತ್ತು ಪರಿಸ್ಥಿತಿಯನ್ನು ಹೇಗೆ ಸರಿಹೊಂದಿಸುವುದು ಎಂಬುದರ ಬಗ್ಗೆ ಸಂಪೂರ್ಣ ಗೊಂದಲವಿದೆ. ಆರ್‌ಬಿಐ 1935 ರಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು ದೇಶವು 1947 ರಲ್ಲಿ ಸ್ವಾತಂತ್ರ್ಯಗಳಿಸುವ ಹೊತ್ತಿಗೆ ನೂರಾರು ಬ್ಯಾಂಕ್ಗಳು ಅತ್ಯಂತ ಕೆಟ್ಟ ಆರ್ಥಿಕ ನಿರ್ವಹಣೆಯಿಂದಾಗಿ ಠೇವಣಿದಾರರಿಗೆ ಕೈ ಎತ್ತಿದ್ದವು.
1947 ಮತ್ತು 1969ರ ನಡುವೆ 665 ಬ್ಯಾಂಕ್ಗಳು ಮತ್ತು ನಂತರದ 2019ರ ವರೆಗೆ 37 ಸಹಕಾರಿ ಬ್ಯಾಂಕ್ಗಳು ಹಳಿತಪ್ಪಿವೆ ಆರ್‌ಬಿಐ ಎಂದು ದಾಖಲೆಗಳು ತೋರಿಸುತ್ತವೆ. ಆರ್‌ಬಿಐ ತನ್ನ ಸಂಪೂರ್ಣ ಮೇಲ್ವಿಚಾರಣೆ ಮತ್ತು ನಿಯಂತ್ರಕ ಅಧಿಕಾರಗಳ ಹೊರತಾಗಿಯೂ ಸಹಕಾರಿ ಬ್ಯಾಂಕ್ಗಳ ವೈಫಲ್ಯಗಳನ್ನು ತಡೆಯಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.
ಕೆಟ್ಟ ಹಣಕಾಸಿನ ಬಿಕ್ಕಟ್ಟಿನಿಂದ ಬಳಲುತ್ತಿರುವ ಸಹಕಾರಿ ಬ್ಯಾಂಕ್ಗಳನ್ನು ಆರ್ಥಿಕವಾಗಿ ಸದೃಢಹೊಂದಿರುವ ಸಾರ್ವಜನಿಕ ವಲಯದ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸಿ ತನ್ನ ಜವಾಬ್ದಾರಿಯಿಂದ ಆರ್‌ಬಿಐ ಮುಕ್ತವಾಯಿತು, ಅದೇ ಸಮಯದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳು ಹಗರಣಗಳಲ್ಲಿ ಸಿಲುಕಿಕೊಂಡಾಗ ಆರ್‌ಬಿಐ ಸಹಾಯಕತೆಯಿಂದ ನೋಡುವಂತಾಯಿತು.
ಮಾರ್ಚ್ 2018ರ ಅಂತ್ಯದ ವೇಳೆಗೆ 9.61 ಲಕ್ಷ ಕೋಟಿ ರೂ.ಗಳಷ್ಟಿದ್ದ ಬ್ಯಾಂಕಿಂಗ್ ಕ್ಷೇತ್ರದ ನಿಷ್ಕ್ರಿಯ ಆಸ್ತಿಗಳನ್ನು (ಎನ್‌ಪಿಎ) ಉಲ್ಲೇಖಿಸಿ, 'ಸಿಎಜಿ' ರಾಜೀವ್ ಮಹರ್ಷಿ ಎತ್ತಿದ "ಈ ಬಿಕ್ಕಟ್ಟಿಗೆ ಆರ್‌ಬಿಐ ಕಾರಣವೇ ಅಥವಾ ಇಲ್ಲವೇ? ಪ್ರಶ್ನೆಯು ಸಂಚಲನವನ್ನು ಸೃಷ್ಟಿಸಿತು. " ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ವಂಚನೆಗಳನ್ನು ಉಲ್ಲೇಖಿಸಿರುವ ಲೆಕ್ಕಪರಿಶೋಧಕ ಜನರಲ್ ಶಶಿಕಾಂತ್ ಶರ್ಮಾ ಅವರು, ಎರಡು ವರ್ಷಗಳ ಹಿಂದೆಯೇ ಆರ್‌ಬಿಐ 'ಸಿಎಜಿ' ಲೆಕ್ಕಪರಿಶೋಧನೆ ನಡೆಸಬೇಕಾಗಿತ್ತು ಎಂದು ಆಭಿಪ್ರಾಯಪಟ್ಟಿದ್ದಾರೆ.
ಕಳೆದ 5 ವರ್ಷಗಳಲ್ಲಿ, ಆರ್ಥಿಕವಾಗಿ ತೊಂದರೆಗೀಡಾದ ಬ್ಯಾಂಕ್ಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಅಕ್ಷರಶಃ ಮೂರೂವರೆ ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ! ಆರ್ಥಿಕ ಹಗರಣಗಳನ್ನು ಪತ್ತೆಹಚ್ಚಲು ಬ್ಯಾಂಕುಗಳಿಗೆ 5 ವರ್ಷಗಳ ಆವಧಿ ನೀಡುವ ಆರ್‌ಬಿಐ ಕ್ರಮವು ಅದರ 'ವೃತ್ತಿಪರ ಕುಶಾಗ್ರಮತಿ ಮತ್ತು ಮೇಲ್ವಿಚಾರಣಾ ಕೌಶಲ್ಯ'ದ ಪ್ರತಿಫಲನವಾಗಿದೆ! ತೀಕ್ಷ್ಣವಾದ ಸುಧಾರಣೆಗಳನ್ನು ತೆಗೆದಯಕೊಳ್ಳಲು ಆರ್‌ಬಿಐಗೆ ಹಿಂದೆಂದಿಗಿಂತಲೂ ಹೆಚ್ಚಿನ ಅವಶ್ಯಕತೆಯಿದೆ!