ಕಾಸರಗೋಡು(ಕೇರಳ): ಕೇರಳದ ಅನಂತಪುರದ ಕುಂಬಲದಲ್ಲಿರುವ ದೇವಾಯಲದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ದೇವಸ್ಥಾನದ ಕಲ್ಯಾಣಿಯಲ್ಲಿ ವಾಸವಾಗಿದ್ದ ಮೊಸಳೆಯೊಂದು ಇದೇ ಮೊದಲ ಬಾರಿಗೆ ದೇಗುಲದೊಳಗೆ ಪ್ರವೇಶ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
75 ವರ್ಷದ್ದು ಎಂದು ನಂಬಲಾದ ಮೊಸಳೆ ಚಿತ್ರವನ್ನು ದೇವಾಲಯದ ಪ್ರಧಾನ ಅರ್ಚಕರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಬಿಯಾ ಎಂದು ಕರೆಯಲ್ಪಡುವ ಈ ಮೊಸಳೆ ಸಸ್ಯಹಾರಿಯಾಗಿದ್ದು, ದೇಗುಲದ ಕಲ್ಯಾಣಿಯಲ್ಲೇ ಇತ್ತು. ಅರ್ಚಕರು ಅಕ್ಕಿ ನೈವೇದ್ಯ ಅರ್ಪಿಸಲು ಕರೆದಾಗ ಮಾತ್ರ ಅದು ಗುಹೆಯ ಪ್ರವೇಶದ್ವಾರಕ್ಕೆ ಬರುತ್ತಿತ್ತು. ರಾತ್ರಿ ದೇವಾಲಯ ಮುಚ್ಚಿದ ನಂತರ ಬಬಿಯಾ ದೇವಾಲಯದ ಗರ್ಭಗುಡಿಗೆ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಪುರಾವೆ ಲಭ್ಯವಾಗಿರಲಿಲ್ಲ.
ಮೊಸಳೆ ಬಬಿಯಾ ಇಲ್ಲಿಯವರೆಗೆ ಯಾರಿಗೂ ತೊಂದರೆ ಮಾಡಿಲ್ಲ. ಸಸ್ಯಹಾರಿಯಾಗಿರುವ ಇದು, ದೇವರಿಗೆ ಅರ್ಪಿಸಿದ ನೈವೇದ್ಯ ತಿಂದು ಬದುಕುತ್ತಿದೆ. ದೇವಸ್ಥಾನದ ಪ್ರಾಂಗಣದಲ್ಲಿದ್ದ ಬಬಿಯಾಗೆ ದೇಗುಲದ ಪ್ರಧಾನ ಅರ್ಚಕರು ಆವಾಸಸ್ಥಾನಕ್ಕೆ ಹೋಗುವಂತೆ ಮನವಿ ಮಾಡಿದಾಗ ಅದು ಕಲ್ಯಾಣಿಗೆ ಹಿಂದಿರುಗಿದೆ ಎಂದು ತಿಳಿದು ಬಂದಿದೆ.