ETV Bharat / bharat

ರ‍್ಯಾಪಿಡ್​​ ಟೆಸ್ಟಿಂಗ್​ ಕಿಟ್​ಗಳಿಂದಾಗಿ ಕೊರೊನಾ ಪರೀಕ್ಷೆ ವೇಗಕ್ಕೆ ಬ್ರೇಕ್​: ಡಿ.ಬಿ.ಗುಪ್ತಾ - ಕೊರೊನಾ

ರಾಜಸ್ಥಾನದ ಮುಖ್ಯ ಕಾರ್ಯದರ್ಶಿ ಡಿ.ಬಿ.ಗುಪ್ತಾ ಈಟಿವಿ ಭಾರತ್​ನೊಂದಿಗೆ ಸಂಭಾಷಣೆ ನಡೆಸಿದ್ದು, ರಾಜ್ಯಕ್ಕೆ ತರಿಸಿಕೊಳ್ಳಲಾದ ರ‍್ಯಾಪಿಡ್​​ ಟೆಸ್ಟಿಂಗ್​ ಕಿಟ್​ಗಳಿಂದಾಗಿ ಕೊರೊನಾ ಪರೀಕ್ಷೆ ನಿದಾನಗತಿಯಲ್ಲಿ ಸಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.

DB Gupta
ಡಿ.ಬಿ.ಗುಪ್ತಾ
author img

By

Published : Apr 23, 2020, 9:18 PM IST

ಜೈಪುರ (ರಾಜಸ್ಥಾನ): ಇತ್ತೀಚೆಗೆ ಪಡೆದುಕೊಳ್ಳಲಾದ ರ‍್ಯಾಪಿಡ್​​ ಟೆಸ್ಟಿಂಗ್​ ಕಿಟ್​ಗಳು (ಕ್ಷಿಪ್ರ ಪರೀಕ್ಷಾ ಕಿಟ್‌) ತಪ್ಪಾದ ಫಲಿತಾಂಶಗಳನ್ನು ನೀಡುವ ಪರಿಣಾಮದಿಂದಾಗಿ ರಾಜ್ಯದಲ್ಲಿ ಕೊರೊನಾ ಪರೀಕ್ಷೆಯ ವೇಗ ಸ್ಥಗಿತಗೊಂಡಿದೆ. ರಾಜಸ್ಥಾನವು ದೇಶದಲ್ಲಿಯೇ ಶೀಘ್ರ ಪರೀಕ್ಷೆಗಳನ್ನು ನಡೆಸಿದ ಮೊದಲ ರಾಜ್ಯವಾಗಿತ್ತು. ಆದರೆ, ಹೆಚ್ಚಿನ ಫಲಿತಾಂಶಗಳು ದೋಷಪೂರಿತ ಮತ್ತು ವೈದ್ಯರ ದಾರಿತಪ್ಪಿಸುವಂತದ್ದಾಗಿತ್ತು ಎಂದು ರಾಜಸ್ಥಾನದ ಮುಖ್ಯ ಕಾರ್ಯದರ್ಶಿ ಡಿ.ಬಿ.ಗುಪ್ತಾ ಹೇಳಿದ್ದಾರೆ.

ರಾಜ್ಯದ ಕ್ಷಿಪ್ರ ಪರೀಕ್ಷಾ ಕಿಟ್‌ಗಳ ಬಗ್ಗೆ ಮಾತನಾಡಿದ ಮುಖ್ಯ ಕಾರ್ಯದರ್ಶಿ ಡಿ.ಬಿ.ಗುಪ್ತಾ, "ನಾವು ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 159 ಜನರನ್ನು ಪರೀಕ್ಷಿಸಿದ್ದೇವೆ. ಆದರೆ, ಕೇವಲ ಒಂಬತ್ತು ಜನರ ಫಲಿತಾಂಶ ಮಾತ್ರ ಸ್ಪಷ್ಟವಾಗಿ ಬಂದಿದೆ. ಆದ್ದರಿಂದ ಈ ಕಿಟ್ಟಿನ ವಿಶ್ವಾಸಾರ್ಹತೆ ಮತ್ತು ಸತ್ಯಾಸತ್ಯತೆಯ ಬಗ್ಗೆ ಅನುಮಾನಿಸಿ, ಸರ್ಕಾರ ಈ ಪರೀಕ್ಷಾ ಪ್ರಕ್ರಿಯೆಯನ್ನು ನಿಲ್ಲಿಸಿದೆ ಎಂದಿದ್ದಾರೆ.

ಇನ್ನು ಪರೀಕ್ಷೆಗೆ ಬಾಕಿ ಇರುವ ಮಾದರಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸುಮಾರು 4,000 ಮಾದರಿಗಳನ್ನು ದೆಹಲಿಗೆ ಕಳುಹಿಸಲಾಗಿದೆ, ಅದರಲ್ಲಿ ಕನಿಷ್ಠ 100 ಸ್ಯಾಂಪಲ್​ಗಳು ಕೊರೊನಾ ಪೀಡತವಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ, ನಾವು ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಗಳು ನಡೆಯುತ್ತಿವೆ. ಪರೀಕ್ಷಿಸಿದ 61,492 ಮಾದರಿಗಳಲ್ಲಿ 54,100 ನೆಗೆಟಿವ್​ ಎಂದು ವರದಿಗಳು ಬಂದಿವೆ ಎಂದು ಗುಪ್ತಾ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಡಿ.ಬಿ.ಗುಪ್ತಾ

ಕೊರೊನಾ ಮುಕ್ತ ಜಿಲ್ಲೆಯಾಗಿ ಮಾರ್ಪಟ್ಟಿರುವ ಭಿಲ್ವಾರಾ ಮಾಡೆಲ್ ಬಗ್ಗೆ ಮಾತನಾಡಿದ್ದು, ನಾವು ಕಟ್ಟುನಿಟ್ಟಿನ ಕರ್ಫ್ಯೂ ವಿಧಿಸಿದ್ದರಿಂದ ಮತ್ತು ವೈರಸ್ ಹರಡುವಿಕೆ ಒಳಗೊಂಡಿರುವ ಜನರ ಸಂಚಾರವನ್ನು ನಿರ್ಬಂಧಿಸಿದ್ದೇವೆ. ರಾಮಗಂಜ್​​​​​ನಲ್ಲಿ ಕೊರೊನಾ ಹರಡುವುದನ್ನು ತಡೆಯುವುದು ಆಡಳಿತಕ್ಕೆ ಕಠಿಣ ಸವಾಲಾಗಿತ್ತು ಎಂದು ವಿವರಣೆ ನೀಡಿದರು.

ರಾಜಸ್ಥಾನದಲ್ಲಿ ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಹಿಂದೂ ಕುಟುಂಬಗಳ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯದರ್ಶಿ, ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಈ ಕುಟುಂಬಗಳ ಸಮೀಕ್ಷೆಯನ್ನು ನಡೆಸಿದ ನಂತರ ಆಡಳಿತವು ಸುಮಾರು 450 ವಲಸೆ ಕುಟುಂಬಗಳಿಗೆ ಪಡಿತರ ಮತ್ತು ಆರ್ಥಿಕ ನೆರವು ನೀಡುವ ಪ್ರಯತ್ನವನ್ನು ಮಾಡಿದೆ ಎಂದಿದ್ದಾರೆ .

ಸುಮಾರು 4.5 ಲಕ್ಷ ಎಂಎನ್‌ಆರ್‌ಇಜಿಎ ಕಾರ್ಮಿಕರಿಗೆ ಈಗಾಗಲೇ ಉದ್ಯೋಗ ದೊರೆತಿದ್ದು, ಗ್ರಾಮ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ವಲಸೆ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ವಾಪಸ್ ಕಳುಹಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಿಬಿ ಗುಪ್ತಾ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.