ETV Bharat / bharat

ಸರ್ಕಾರಿ ಶಾಲೆಯಲ್ಲಿ ಓದಿದ ಬಾಲೆಯ ಸಾಧನೆ: ಗಣಿತ, ಸಮಾಜದಲ್ಲಿ 100 ಅಂಕ, ಶೇ.98.8ರಷ್ಟು ರಿಸಲ್ಟ್​​ - ಸರ್ಕಾರಿ ಶಾಲೆ ವಿದ್ಯಾರ್ಥಿನಿ

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿನಿ ಸಿಬಿಎಸ್​ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.98.8ರಷ್ಟು ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ.

Ranchi girl
Ranchi girl
author img

By

Published : Jul 15, 2020, 9:17 PM IST

ರಾಂಚಿ: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ದೇಶಾದ್ಯಂತ ಶೇ. 88.78ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿನಿಯೊಬ್ಬಳು ಈ ಪರೀಕ್ಷೆಯಲ್ಲಿ ಗಣಿತ ಹಾಗೂ ಸಮಾಜ ವಿಜ್ಞಾನ ವಿಭಾಗದಲ್ಲಿ 100ಕ್ಕೆ 100ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾಳೆ.

ಜಾರ್ಖಂಡ್​ನ ರಾಂಚಿಯ ಜವಾಹರ್​​ ವಿದ್ಯಾ ಮಂದಿರದಲ್ಲಿ ವ್ಯಾಸಂಗ ಮಾಡಿದ ಅನನ್ಯಾ ಸಿಂಗ್​​​ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ಇಂಗ್ಲಿಷ್​​ನಲ್ಲಿ 97 ಅಂಕ, ಹಿಂದಿ ಹಾಗೂ ಕಂಪ್ಯೂಟರ್​​​ ವಿಷಯದಲ್ಲಿ 98 ಅಂಕ ಗಳಿಸಿದ್ದು, ಒಟ್ಟು ಫಲಿತಾಂಶ ಶೇ. 98.8ರಷ್ಟಾಗಿದೆ.

ಈ ಕುರಿತ ಪ್ರತಿಕ್ರಿಯಿಸಿರುವ ಅನನ್ಯಾ ಸಿಂಗ್, ತಾಯಿ ಹಾಗೂ ತಂದೆಗೆ ಗೆಲುವಿನ ಗೌರವ ಸಲ್ಲಿಸಿದ್ದಾರೆ. ಪ್ರತಿದಿನ 12 ಗಂಟೆಗಳ ಕಾಲ ಅಭ್ಯಾಸ ಮಾಡ್ತಿದ್ದು, ಮುಂದಿನ ದಿನಗಳಲ್ಲಿ ವೈದ್ಯೆಯಾಗುವ ಬಯಕೆ ಹೊಂದಿದ್ದಾಳೆ.

ಈ ಸಲದ ಪರೀಕ್ಷೆಯಲ್ಲಿ ದೇಶಾದ್ಯಂತ ಶೇ. 93.31ರಷ್ಟು ವಿದ್ಯಾರ್ಥಿನಿಯರು ಪಾಸ್​​ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.