ನವದೆಹಲಿ: ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್, ದೇವಾಲಯದ ಅಡಿಪಾಯಕ್ಕೆ ಉತ್ತಮ ಮಾದರಿಗಳನ್ನು ಸೂಚಿಸುವಂತೆ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಗಳಿಗೆ ಕೋರಿದೆ.
ಪ್ರಧಾನಮಂತ್ರಿ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ದೇವಾಲಯದ ನಿರ್ಮಾಣ ಸಮಿತಿ ಈ ಕುರಿತು ಮಂಗಳವಾರ ಚರ್ಚೆ ನಡೆಸಿದೆ.
ಓದಿ: ಪುತ್ರರ ವಿರುದ್ಧ ಕೋಪ : ಪತ್ನಿ ಹಾಗೂ ನಾಯಿ ಹೆಸರಿಗೆ ಕೋಟ್ಯಂತರ ರೂ. ಆಸ್ತಿ ಬರೆದಿಟ್ಟ ರೈತ!
ಈ ಚರ್ಚೆಯ ಸಮಯದಲ್ಲಿ, ಸರಯೂ ನದಿಯು ದೇವಾಲಯದ ಕೆಳ ಭಾಗದಲ್ಲಿ ಹರಿಯುತ್ತಿರುವುದರಿಂದ ಮಂದಿರ ನಿರ್ಮಾಣಕ್ಕೆ ಭದ್ರ ಬುನಾದಿ ಅಗತ್ಯವಿಲ್ಲ. ದೇವಾಲಯದ ಅಡಿಪಾಯಕ್ಕೆ ಅಸ್ತಿತ್ವದಲ್ಲಿರುವ ಮಾದರಿ ಕಾರ್ಯ ಸಾಧ್ಯವಲ್ಲ. ಆದ್ದರಿಂದ ದೇವಾಲಯದ ಬಲವಾದ ಅಡಿಪಾಯಕ್ಕಾಗಿ ಉತ್ತಮ ಮಾದರಿಗಳನ್ನು ಸೂಚಿಸಲು ಐಐಟಿಗಳನ್ನು ಕೋರಲಾಗಿದೆ ಎಂದು 'ಶ್ರೀ ರಾಮ್ ಜನಂಭೂಮಿ ತೀರ್ಥ ಕ್ಷೇತ್ರ' ಟ್ರಸ್ಟ್ ಮೂಲಗಳು ತಿಳಿಸಿವೆ.
ರಾಮ ದೇವಾಲಯ ನಿರ್ಮಾಣ ಕಾರ್ಯವನ್ನು 2023 ರಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.