ETV Bharat / bharat

ಭಾರತ-ಚೀನಾ ಗಡಿ ಸಮಸ್ಯೆ: ರಾಜ್ಯಸಭೆಯಲ್ಲಿ ಮಾಹಿತಿ ನೀಡಲಿರುವ ರಾಜನಾಥ್​​ ಸಿಂಗ್​​ - Line of Actual Control

ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದದ ಕುರಿತು ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಈಗಾಗಲೇ ಮಾಹಿತಿ ನೀಡಿದ್ದು, ಇಂದು ರಾಜ್ಯಸಭೆಯಲ್ಲೂ ಅವರು ಮಾತನಾಡಲಿದ್ದಾರೆ.

Rajnath Singh
Rajnath Singh
author img

By

Published : Sep 17, 2020, 4:43 AM IST

Updated : Sep 17, 2020, 6:38 AM IST

ನವದೆಹಲಿ: ಭಾರತ-ಚೀನಾ ನಡುವೆ ಲಡಾಖ್​ ಗಡಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದ್ದು, ಇದೇ ವಿಚಾರವಾಗಿ ಈಗಾಗಲೇ ಲೋಕಸಭೆಯಲ್ಲಿ ಮಾಹಿತಿ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್,​​ ಇಂದು ರಾಜ್ಯಸಭೆಯಲ್ಲೂ ಮಾತನಾಡಲಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಉಭಯ ದೇಶಗಳ ನಡುವೆ ಉಂಟಾಗಿರುವ ಗಡಿ ವಿಚಾರವಾಗಿ ಈಗಾಗಲೇ ಲೋಕಸಭೆಯಲ್ಲಿ ರಾಜನಾಥ್​ ಸಿಂಗ್​ ಮಾತನಾಡಿದ್ದಾರೆ. ಆದರೆ ರಾಜನಾಥ್​ ಸಿಂಗ್​​ ಭಾಷಣದ ವಿರುದ್ಧ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳು ಹರಿಹಾಯ್ದಿವೆ.

ಲಡಾಖ್​​ನಲ್ಲಿ ಚೀನಾ ಜೊತೆಗಿನ ಗಡಿ ವಿವಾದ ಶಾಂತಿಯುತವಾಗಿ ಬಗೆಹರಿಸಲು ನಾವು ಬದ್ಧರಾಗಿದ್ದೇವೆ. ಆದರೆ ಇದಕ್ಕೆ ಚೀನಾ ಮುಂದಾಗುತ್ತಿಲ್ಲ ಎಂದು ರಾಜನಾಥ್​ ಸಿಂಗ್​ ತಿಳಿಸಿದ್ದು, ಅವರ ಹಿಂಸಾತ್ಮಕ ಕೃತ್ಯದಿಂದಾಗಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದರು.

ಪ್ರತಿಪಕ್ಷಗಳು ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ಇದೇ ವಿಚಾರವಾಗಿ ವಾಗ್ದಾಳಿ ನಡೆಸಿದ್ದು, ಸದ್ಯದ ಪರಿಸ್ಥಿತಿಯ ಮಾಹಿತಿ ನೀಡಿಲ್ಲ ಎಂದಿವೆ. ಇದೀಗ ಇದೇ ವಿಚಾರವಾಗಿ ಪ್ರತಿಪಕ್ಷಗಳಿಗೆ ರಾಜನಾಥ್​ ಸಿಂಗ್​ ರಾಜ್ಯಸಭೆಯಲ್ಲಿ ಉತ್ತರ ನೀಡುವ ಸಾಧ್ಯತೆ ಇದೆ.

Last Updated : Sep 17, 2020, 6:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.