ETV Bharat / bharat

ಕೋವಿಡ್​ ವಿರುದ್ಧದ ಹೋರಾಟಕ್ಕೆ ​ 'ಕೊರೊನಾ ವೀರರ' ನೇಮಕ

ರಾಜಸ್ಥಾನ ಸರ್ಕಾರ, ಶೀಘ್ರದಲ್ಲೇ 2,000 ವೈದ್ಯರನ್ನು ಮತ್ತು 9,000 ಕ್ಕೂ ಹೆಚ್ಚು ದಾದಿಯರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ಆರೋಗ್ಯ ಸಚಿವ ರಘು ಶರ್ಮಾ ಮಾಹಿತಿ ನೀಡಿದ್ದಾರೆ.

2,000 ವೈದ್ಯರನ್ನು ಮತ್ತು 9,000 ಕ್ಕೂ ಹೆಚ್ಚು ದಾದಿಯರ ನೇಮಕ

author img

By

Published : Apr 23, 2020, 10:49 AM IST

ಜೈಪುರ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕೊರೊನಾ ವೀರರನ್ನು ಹೆಚ್ಚಿಸಲು ಮುಂದಾಗಿರುವ ರಾಜಸ್ಥಾನ ಸರ್ಕಾರ, ಶೀಘ್ರದಲ್ಲೇ 2,000 ವೈದ್ಯರನ್ನು ಮತ್ತು 9,000 ಕ್ಕೂ ಹೆಚ್ಚು ದಾದಿಯರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ರಘು ಶರ್ಮಾ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ವಿವಿಧ ಜಿಲ್ಲೆಗಳಲ್ಲಿ 735 ಹೊಸ ವೈದ್ಯರನ್ನು ನೇಮಕ ಮಾಡಲಾಗಿದ್ದು, ಇನ್ನೂ ಕೂಡ 2 ಸಾವಿರ ವೈದ್ಯರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸೂಚನೆಯ ಮೇರೆಗೆ, 9,000 ಎಎನ್‌ಎಂ ಮತ್ತು ಜಿಎನ್‌ಎಂಗಳ ನೇಮಕಾತಿಯನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ವೈದ್ಯಕೀಯ ಪರೀಕ್ಷಾ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಪ್ರಸ್ತುತ ಪ್ರತಿದಿನ 4,700 ಕೊರೊನಾ ವೈರಸ್​ ಪರೀಕ್ಷೆಗಳನ್ನು ಮಾಡಬಹುದು. ಇದನ್ನು ಮುಂದಿನ ದಿನಗಳಲ್ಲಿ 10,000 ಕ್ಕೆ ವಿಸ್ತರಿಸಲಾಗುವುದು. ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಜ್ಜುಗೊಳ್ಳಲು ವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.