ETV Bharat / bharat

ಬೆಂಕಿ ಹಚ್ಚಿ ಅರ್ಚಕನ ಕೊಲೆ ಕೇಸ್‌: ಬೇಡಿಕೆ ಈಡೇರಿಸುವವರೆಗೂ ಶವಸಂಸ್ಕಾರಕ್ಕೆ ನಕಾರ - ಬೇಡಿಕೆ ಈಡೇರಿಸುವವರೆಗೂ ಶವಸಂಸ್ಕಾರ ಮಾಡಲು ನಿರಾಕರಿಸಿದ ಕಟುಂಬಸ್ಥರು

ಭೂ ಅತಿಕ್ರಮಣಕಾರರಿಂದ ಜೀವಂತವಾಗಿ ಸುಟ್ಟುಹೋದ ಅರ್ಚಕನ ಕುಟುಂಬ ಸದಸ್ಯರು, ಅವರ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಪೂರೈಸುವವರೆಗೆ ಮೃತದೇಹದ ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದ್ದಾರೆ.

protest
protest
author img

By

Published : Oct 10, 2020, 2:36 PM IST

ಕರೌಲಿ (ರಾಜಸ್ಥಾನ): ಇಲ್ಲಿನ ಕರೌಲಿಯ ಬುಕ್ನಾ ಗ್ರಾಮದಲ್ಲಿ ಭೂ ಅತಿಕ್ರಮಣಕಾರರಿಂದ ಜೀವಂತವಾಗಿ ಸುಟ್ಟುಹೋದ ಅರ್ಚಕನ ಕುಟುಂಬ ಸದಸ್ಯರು, ಅವರ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಪೂರೈಸುವವರೆಗೆ ಮೃತದೇಹದ ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದ್ದಾರೆ.

ಅಕ್ಟೋಬರ್ 8ರ ರಾತ್ರಿ, ಬುಕ್ನಾ ಗ್ರಾಮದ ಕರೌಲಿಯಲ್ಲಿರುವ ದೇವಾಲಯದ ಭೂಮಿಯನ್ನು ಅತಿಕ್ರಮಿಸಲು ಬಯಸಿದ್ದ ಐದು ಜನರಿಂದ ಬೆಂಕಿಗೆ ಆಹುತಿಯಾಗಿ ಅರ್ಚಕ ಸಾವನ್ನಪ್ಪಿದ್ದಾರೆ.

ಅರ್ಚಕನ ಕುಟುಂಬ ಸದಸ್ಯರು ತಮ್ಮ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಪೂರೈಸುವವರೆಗೆ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ.

"ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಅಂತ್ಯಸಂಸ್ಕಾರ ನಿರ್ವಹಿಸುವುದಿಲ್ಲ. ನಮಗೆ 50 ಲಕ್ಷ ರೂ.ಗಳ ಪರಿಹಾರ ಮತ್ತು ಸರ್ಕಾರಿ ಕೆಲಸ ಬೇಕು. ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಮತ್ತು ಆರೋಪಿಗಳನ್ನು ಬೆಂಬಲಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮಗೆ ರಕ್ಷಣೆ ಬೇಕು" ಎಂದು ಅರ್ಚಕ ಬಾಬುಲಾಲ್ ಅವರ ಸಂಬಂಧಿ ಲಲಿತ್ ತಿಳಿಸಿದ್ದಾರೆ.

ಪ್ರತಿಭಟನಾಕಾರರಿಗೆ ಬೆಂಬಲ ನೀಡಿರುವ ಬಿಜೆಪಿ ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ, "ಬೇಡಿಕೆಗಳು ಈಡೇರುವವರೆಗೂ ಅಂತಿಮ ವಿಧಿಗಳು ನಡೆಯುವುದಿಲ್ಲ ಎಂದು ಇಡೀ ಗ್ರಾಮ ನಿರ್ಧರಿಸಿದೆ. ಇದಲ್ಲದೆ, 3-4 ಗಂಟೆಗಳಲ್ಲಿ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಮೃತ ದೇಹವನ್ನು ಜೈಪುರಕ್ಕೆ ಕೊಂಡೊಯ್ದು ಸಿಎಂ ನಿವಾಸದ ಮುಂದೆ ಧರಣಿ ನಡೆಸಲಿದ್ದೇವೆ" ಎಂದರು.

"ಪೊಲೀಸರು ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದರೆ, ನಮ್ಮ ಮೇಲೆ ಗುಂಡು ಹಾರಿಸಿದರೆ ಅಥವಾ ನಮ್ಮನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆತ ನಂತರವೇ ನಾವು ಪ್ರತಿಭಟನೆ ನಿಲ್ಲಿಸುತ್ತೇವೆ" ಎಂದು ಅವರು ಹೇಳಿದರು.

ಅರ್ಚಕ ಬಾಬು ಲಾಲ್ ವೈಷ್ಣವ್, ರಾಜಸ್ಥಾನದ ಕರೌಲಿ ಜಿಲ್ಲೆಯ ದೇವಾಲಯದ ಭೂಮಿಯನ್ನು ಅತಿಕ್ರಮಿಸಲು ಬಯಸಿದ್ದ ಐದು ಜನರು ಬೆಂಕಿ ಹಚ್ಚಿದ ಕಾರಣ ಮೃತಪಟ್ಟಿದ್ದಾರೆ.

ಐವರು ಆರೋಪಿಗಳು ಅರ್ಚಕನ ಮೇಲೆ ಪೆಟ್ರೋಲ್ ಸುರಿದು ಅಕ್ಟೋಬರ್ 7ರಂದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಅವರನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಮರುದಿನ ರಾತ್ರಿ ಅವರು ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಕೈಲಾಶ್ ಮೀನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.