ಬಾರ್ಮರ್: ರಾಜಸ್ಥಾನದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಮತಬೇಟೆ ಆರಂಭಿಸಿದ್ದಾರೆ. ಆದ್ರೆ ಇಲ್ಲೊಬ್ಬ ಅಜ್ಜಿ ತನ್ನ ಸೊಸೆಗಾಗಿ ಇಳಿ ವಯಸ್ಸಿನಲ್ಲೂ ಕೈಯಲ್ಲಿ ಕೋಲು ಹಿಡಿದು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ಸಿಗರತಿ ದೇವಿಗೆ ಬರೋಬ್ಬರಿ 80 ವರ್ಷ. ಇವರ ಸೊಸೆ ಮೂಲಿ ಚೌಧರಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸೊಸೆ ಮೂಲಿ ಚೌಧರಿಗಾಗಿ ತಮ್ಮ ಇಳಿ ವಯಸ್ಸಿನಲ್ಲೂ ಅಜ್ಜಿ ಮತಬೇಟೆ ಆರಂಭಿಸುವ ಮೂಲಕ ಗಮನ ಸೆಳೆದಿದ್ದಾರೆ.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಮೂಲಿ ಚೌಧರಿ ಈ ಬಾರಿಯ ಪಂಚಾಯತ್ ಚುನಾವಣೆಯ ಕಣದಲ್ಲಿದ್ದಾರೆ. ಈ ಸುದ್ದಿ ತಿಳಿದ ಸಿಗರತಿ ದೇವಿ ಸೊಸೆಗಾಗಿ 80ರ ವಯಸ್ಸಿನಲ್ಲೂ ಉತ್ಸಾಹದಿಂದ ಪ್ರಚಾರಕ್ಕಾಗಿ ಮನೆ-ಮನೆಗೆ ಭೇಟಿ ನೀಡುತ್ತಿರುವುದನ್ನು ಕಂಡು ಜನ ಆಶ್ಚರ್ಯಚಕಿತರಾಗುತ್ತಿದ್ದಾರೆ.
ನಾನು ಕಾಲೇಜು ಜೀವನದಲ್ಲಿ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ವಿದ್ಯಾರ್ಥಿ ಸಂಘದ ಅಧ್ಯಕ್ಷರಿಂದ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ್ದೇನೆ. ಈಗ ಬಾರ್ಮರ್ ಗ್ರಾಮೀಣ ಪಂಚಾಯತ್‌ನಿಂದ ತನ್ನ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದೇನೆ. ನನ್ನ ಬೆನ್ನೆಲುಬಾಗಿ ನನ್ನ 80 ವರ್ಷ ವಯಸ್ಸಿನ ಅತ್ತೆ ನನಗಾಗಿ ಮತ ಪ್ರಚಾರ ಮಾಡುತ್ತಿದ್ದಾರೆ ಎಂದು ಅಭ್ಯರ್ಥಿ ಮೂಲಿ ಚೌಧರಿ ಹೇಳಿದ್ದಾರೆ.
ಶಾಲೆಯ ಅವ್ಯವಸ್ಥೆ, ಗ್ರಾಮದಲ್ಲಿನ ನೀರಿನ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನ ಎರಡು ತಿಂಗಳ ಮುಗ್ಧ ಮಗನನ್ನು ಮನೆಯಲ್ಲಿ ಬಿಟ್ಟು ಬೆಳಗ್ಗೆ 10 ಗಂಟೆಗೆ ಅತ್ತೆಯೊಂದಿಗೆ ಮನೆ-ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದೇನೆ. ಚುನಾವಣಾ ಪ್ರಚಾರದಲ್ಲಿ ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ ಎಂದು ಚೌಧರಿ ಹೇಳಿದರು.
ನಾನು ಎಂದಿಗೂ ಚುನಾವಣೆಯಲ್ಲಿ ಪ್ರಚಾರ ಮಾಡಲಿಲ್ಲ. ಸೊಸೆಗಾಗಿ ಇದೇ ಮೊದಲು ನಾನು ಪ್ರಚಾರಕ್ಕಿಳಿದಿದ್ದೇನೆ. ನನ್ನ ಸೊಸೆಗೆ ಮತ ಹಾಕಿ ಎಂದು ಸಿಗರಾತಿ ದೇವಿಯ ಮಾತಾಗಿದೆ.
ವಿದ್ಯಾರ್ಥಿ ರಾಜಕಾರಣದಿಂದ ಆರಂಭಗೊಂಡ ಮೂಲಿ ಚೌಧರಿ ರಾಜಕೀಯ ಈಗ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.