ಅಜ್ಮೀರ್(ರಾಜಸ್ಥಾನ) : ಅನೇಕರಿಗೆ ಚಂದ್ರನಲ್ಲಿ ಜಾಗ ಖರೀದಿ ಮಾಡಬೇಕು ಎಂದು ಕನಸಿರುತ್ತದೆ. ಆದರೆ, ಈ ಕನಸು ರಾಜಸ್ಥಾನದ ದಂಪತಿ ಜೀವನದಲ್ಲಿ ನನಸಾಗಿದೆ.
ರಾಜಸ್ಥಾನ ಮೂಲದ ಧರ್ಮೇಂದ್ರ ಅನಿಜಾ ಎಂಬುವರು ತಮ್ಮ 8ನೇ ವಿವಾಹ ವಾರ್ಷಿಕೋತ್ಸವ ದಿನದಂದು ಪತ್ನಿ ಸಪ್ನಾ ಅನಿಜಾಗೆ ಚಂದ್ರನ ನೆಲದಲ್ಲಿ ಖರೀದಿಸಿದ ಮೂರು ಎಕರೆ ಭೂಮಿ ಉಡುಗೊರೆಯಾಗಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು,"ಡಿಸೆಂಬರ್ 24ರಂದು ನಮ್ಮ ವಿವಾಹ ವಾರ್ಷಿಕೋತ್ಸವ. ನಾನು ಅವಳಿಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದ್ದೆ. ಪ್ರತಿಯೊಬ್ಬರೂ ಕಾರುಗಳು ಮತ್ತು ಆಭರಣಗಳನ್ನ ಉಡುಗೊರೆಯಾಗಿ ನೀಡುತ್ತಾರೆ. ಆದರೆ, ನಾನು ಚಂದ್ರನ ಮೇಲೆ ಭೂಮಿ ಖರೀದಿಸಿ ನೀಡಿದ್ದೇನೆ" ಎಂದರು.
ಇದನ್ನು ಓದಿ: ಪ್ರಧಾನಿ ಮೋದಿಯಿಂದ ಇಂದು ವರ್ಷದ ಕೊನೆಯ ಮನ್ ಕಿ ಬಾತ್..!
ಅಮೆರಿಕದ ನ್ಯೂಯಾರ್ಕ್ ನಗರದ ಲೂನಾ ಸೊಸೈಟಿ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆಯ ಮೂಲಕ ಧರ್ಮೇಂದ್ರ ಈ ಭೂಮಿಯನ್ನು ಖರೀದಿಸಿದ್ದಾರೆ.