ನವದೆಹಲಿ: ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ವಿಶೇಷ ರೈಲುಗಳ ಸೌಲಭ್ಯ ಕಲ್ಪಿಸಿರುವ ರೈಲ್ವೆ ಇಲಾಖೆ ಇದೀಗ ಮತ್ತೊಂದು ನಿರ್ಧಾರವನ್ನು ಕೈಗೊಂಡಿದೆ. ಎಲ್ಲ ವಿಶೇಷ ರೈಲುಗಳಿಗೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಅವಧಿಯನ್ನು 30 ರಿಂದ 120 ದಿನಗಳಿಗೆ ಹೆಚ್ಚಿಸಿದೆ. ಈ ಮೊದಲು ಕೇವಲ 30ದಿನಗಳಿಗೆ ಮಾತ್ರ ಅವಕಾಶ ನೀಡಿತ್ತು.
ಈ ವಿಶೇಷ ರೈಲುಗಳು ಮೇ 12 ರಿಂದಲೇ ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸಂಚಾರ ಮಾಡುತ್ತಿವೆ. ಜೂನ್ 1 ರಿಂದ 100 ವಿಶೇಷ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಎಲ್ಲ ವಿಶೇಷ ರೈಲುಗಳ ಮುಂಗಡ ಕಾಯ್ದಿರಿಸುವ ಅವಧಿ (ARP)ಯನ್ನು 30 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮಾತ್ರಲ್ಲದೇ, 230 ರೈಲುಗಳಲ್ಲೂ ಪಾರ್ಸೆಲ್ ಬುಕ್ಕಿಂಗ್ ಹಾಗೂ ಲಗೇಜ್‌ಗೂ ಅವಕಾಶ ನೀಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈ ಬದಲಾವಣೆಗಳು 2020ರ ಮೇ 31ರಿಂದ ಅನ್ವಯ ವಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಸ್ತುತ ಇರುವ ಬುಕ್ಕಿಂಗ್, ರಸ್ತೆ ಬದಿಯ ಸಮೀಪದ ರೈಲ್ವೆ ನಿಲ್ದಾಣಗಳಲ್ಲಿ ತಾತ್ಕಾಲ್ ಕೋಟಾ ಸೀಟು ಹಂಚಿಕೆ ಮತ್ತು ಇತರ ನಿಯಮಗಳು ಮತ್ತು ಷರತ್ತುಗಳು ಈ ಹಿಂದಿನಂತಲೇ ಇರುತ್ತವೆ ಎಂದಿದೆ.