ETV Bharat / bharat

ಆರ್ಥಿಕ ಪ್ಯಾಕೇಜ್ ಮರುಪರಿಶೀಲಿಸಿ, ಜನರ ಖಾತೆಗೆ ಹಣ ಜಮೆ ಮಾಡುವಂತೆ ರಾಗಾ ಮನವಿ - ಮೋದಿಗೆ ರಾಹುಲ್ ಗಾಂಧಿ ಮನವಿ

ಲಾಕ್​ಡೌನ್​ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಆರ್ಥಿಕ ಪ್ಯಾಕೇಜ್ ಮರುಪರಿಶೀಲಿಸಿ ಜನರ ಖಾತೆಗೆ ನೇರವಾಗಿ ಹಣ ಜಮೆ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

Rahul Gandhi requests reconsider economic package
ಜನರ ಖಾತೆಗೆ ಹಣ ಜಮೆ ಮಾಡುವಂತೆ ರಾಗಾ ಮನವಿ
author img

By

Published : May 16, 2020, 3:28 PM IST

Updated : May 16, 2020, 3:36 PM IST

ನವದೆಹಲಿ: ದೇಶವು ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತಿರುವುದರಿಂದ ಕೇಂದ್ರವು ಘೋಷಿಸಿರುವ ಹಣಕಾಸು ಪ್ಯಾಕೇಜ್​ಅನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರನ್ನು ವಿನಂತಿಸಿಕೊಂಡಿದ್ದಾರೆ.

  • Today our poor people need money, I am requesting Prime Minister Narendra Modi that he should reconsider this package. He should consider direct bank transfer, MGNREGA for 200 days & money to farmers directly, as these people are our future: Rahul Gandhi, Congress pic.twitter.com/hvTu5NDAdM

    — ANI (@ANI) May 16, 2020 " class="align-text-top noRightClick twitterSection" data=" ">

ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, 'ಇಂದು ನಮ್ಮ ಬಡ ಜನರಿಗೆ ಹಣ ಬೇಕು. ಈ ಪ್ಯಾಕೇಜ್​​ಅನ್ನು ಮರುಪರಿಶೀಲಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸುತ್ತಿದ್ದೇನೆ. ಹಣವನ್ನು ನೇರವಾಗಿ ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡುವುದನ್ನು ಪರಿಗಣಿಸಬೇಕು. ನರೇಗಾ ಅಡಿಯಲ್ಲಿ 200 ದಿನಗಳವರೆಗೆ ಕೆಲಸ ಮತ್ತು ನೇರವಾಗಿ ಹಣವನ್ನು ಅವರ ಖಾತೆಗೆ ಜಮೆ ಮಾಡಬೇಕು' ಎಂದು ಮನವಿ ಮಾಡಿದ್ದಾರೆ.

ಕಳೆದ ವರ್ಷ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಿದ NYNY ಯೋಜನೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಪರಿಚಯಿಸಿರಬಹುದು ಎಂದು ಸಲಹೆ ನೀಡಿದ್ದಾರೆ.

ತಾತ್ಕಾಲಿಕವಾಗಿ NYAY ಪ್ರಾರಂಭ ಮಾಡಿ. ಆದರೆ ದಯವಿಟ್ಟು ಹಣವನ್ನು ನೇರವಾಗಿ ಸಣ್ಣ ವ್ಯವಹಾರಗಾರರು, ವಲಸಿಗರ ಬ್ಯಾಂಕ್ ಖಾತೆಗಳಿಗೆ ಹಾಕಲು ಪ್ರಾರಂಭಿಸಿ ಎಂದಿದ್ದಾರೆ.

Last Updated : May 16, 2020, 3:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.