ನವದೆಹಲಿ: ಭಾರತದ ಆರ್ಥಿಕತೆ ಗಂಭೀರ ಪರಿಸ್ಥಿತಿ ತಲುಪಿದೆ ಎಂಬ ಮಾತುಗಳು ಕಳೆದ ಕೆಲ ದಿನಗಳಿಂದಲ್ಲೂ ಕೇಳಿ ಬರುತ್ತಿದೆ. ಆದರೆ ಭಾರತದ ಆರ್ಥಿಕತೆ ಮೂಲ ಸದೃಢವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ತಿದ್ದು, ಇದೀಗ ಇದೇ ವಿಷಯವನ್ನಿಟ್ಟುಕೊಂಡು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಕಾಲೆಳೆದಿದ್ದಾರೆ.
ರಾಹುಲ್ ಗಾಂಧಿ ಬರೆದುಕೊಂಡಿದ್ದೇನು!?
ಡಿಯರ್ ಪಿಎಂ, ನಿಮ್ಮ ಅದ್ಭುತ ವ್ಯಾಯಾಮ ದಿನಚರಿ ಮುಂದುವರಿಸಿ, ಆವಾಗಲಾದರೂ ದೇಶದ ಆರ್ಥಿಕತೆಯನ್ನು ನೀವೂ ಸುಧಾರಿಸಬಹುದು ಎಂದಿದ್ದಾರೆ.
-
Dear PM,
— Rahul Gandhi (@RahulGandhi) February 2, 2020 " class="align-text-top noRightClick twitterSection" data="
Please try your magical exercise routine a few more times. You never know, it might just start the economy. #Modinomics pic.twitter.com/T9zK58ddC0
">Dear PM,
— Rahul Gandhi (@RahulGandhi) February 2, 2020
Please try your magical exercise routine a few more times. You never know, it might just start the economy. #Modinomics pic.twitter.com/T9zK58ddC0Dear PM,
— Rahul Gandhi (@RahulGandhi) February 2, 2020
Please try your magical exercise routine a few more times. You never know, it might just start the economy. #Modinomics pic.twitter.com/T9zK58ddC0
ಈ ವಿಡಿಯೋ ತುಣಕನ್ನ ಪ್ರಧಾನಿ ನರೇಂದ್ರ ಮೋದಿ ಯೋಗ ದಿನದಂದು ತಮ್ಮ ಟ್ವಿಟ್ಟರ್ನಲ್ಲಿ ಹಾಕಿಕೊಂಡಿದ್ದರು. ರಾಹುಲ್ ಗಾಂಧಿ ಈ ವಿಡಿಯೋ ಶೇರ್ ಮಾಡುತ್ತಿದ್ದಂತೆ 50 ಸಾವಿರ ಮಂದಿ ಲೈಕ್ ಮಾಡಿದ್ದು, 11 ಸಾವಿರ ಜನ ರಿಟ್ವೀಟ್ ಮಾಡಿದ್ದಾರೆ. ಜತೆಗೆ ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ.
ಭಾರತದ ಆರ್ಥಿಕತೆ ಗಂಭೀರ ಪರಿಸ್ಥಿತಿ ತಲುಪಿದ್ದು, ಸರ್ಕಾರ ತುರ್ತಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಈ ಹಿಂದೆ ಸಲಹೆ ನೀಡಿತ್ತು.