ನವದೆಹಲಿ: ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ಮತ್ತೊಮ್ಮೆ ಚಾಟಿ ಬೀಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ಪರಿಹಾರ ನಿಧಿ ಕುರಿತು 'ಪಿ.ಎಂ. ಕೇರ್ಸ್-ಚಲಿಯೇ, ಪಾರದರ್ಶಕತೆ ಕೋ ವನಕ್ಕಂ! ಎಂಬ ಪತ್ರಿಕೆಯೊಂದರ ಹೆಡ್ಲೈನ್ ಅನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
-
PM Cares- 'Chaliye, transparency ko vanakkam'! pic.twitter.com/EgGR7LiYH9
— Rahul Gandhi (@RahulGandhi) December 17, 2020 " class="align-text-top noRightClick twitterSection" data="
">PM Cares- 'Chaliye, transparency ko vanakkam'! pic.twitter.com/EgGR7LiYH9
— Rahul Gandhi (@RahulGandhi) December 17, 2020PM Cares- 'Chaliye, transparency ko vanakkam'! pic.twitter.com/EgGR7LiYH9
— Rahul Gandhi (@RahulGandhi) December 17, 2020
ಪಿಎಂ ಕೇರ್ಸ್ ಫಂಡ್ ಮೇಲೆ ಅನುಮಾನ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಪಿಎಂ ಪರಿಹಾರ ನಿಧಿ ಸರ್ಕಾರದ್ದೋ ಅಥವಾ ಖಾಸಗಿ ವಲಯಕ್ಕೆ ಸೇರಿದ್ದೋ ಎಂದು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.
ಪ್ರಧಾನ ಮಂತ್ರಿ ಪರಿಹಾರ ನಿಧಿ ಕುರಿತು ನಿನ್ನೆ ಕಾಂಗ್ರೆಸ್ ಮುಖಂಡ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪಿಎಂ ಕೇರ್ಸ್ ಫಂಡ್ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಿದ್ದರು. ಭಾರತೀಯ ರಾಯಭಾರಿ ಕಚೇರಿಗಳ ಮೂಲಕ ದೇಣಿಗೆ ಪಡೆದಿರುವ ಹಾಗೂ 'ಚೀನಾ, ಪಾಕಿಸ್ತಾನ ಮತ್ತು ಕತಾರ್‌ನಿಂದ ಪಿಎಂ ಕೇರ್ಸ್ ಫಂಡ್‌ಗೆ ಸೇರಿದಂತೆ ವಿದೇಶಿ ದೇಣಿಗೆ'ಗಳ ಕುರಿತು ಸುರ್ಜೆವಾಲಾ ಪ್ರಶ್ನಿಸಿದ್ದಾರೆ.
ಪಿಎಂಗೆ ಪ್ರಶ್ನೆಗಳು:
1. ಭಾರತೀಯ ರಾಯಭಾರಿ ಕಚೇರಿಗಳು ಪಿಎಂ ಕೇರ್ಸ್ ಫಂಡ್‌ಗೆ ನೀಡಿದ ದೇಣಿಗೆಯನ್ನು ಏಕೆ ಪ್ರಚಾರ ಮಾಡಿವೆ?
2. ನಿಷೇಧಿತ ಚೀನಿ ಅಪ್ಲಿಕೇಶನ್‌ಗಳಲ್ಲಿ ನಿಧಿ ಕುರಿತು ಏಕೆ ಪ್ರಚಾರ ಮಾಡಲಾಯಿತು?
3. ಪಾಕಿಸ್ತಾನದಿಂದ ಎಷ್ಟು ಹಣವನ್ನು ಸ್ವೀಕರಿಸಲಾಗಿದೆ ಮತ್ತು ಯಾರು ದೇಣಿಗೆ ನೀಡಿದರು?
4. ಕತಾರ್‌ನ ಯಾವ ಎರಡು ಕಂಪನಿಗಳು ದೇಣಿಗೆ ನೀಡಿವೆ ಮತ್ತು ಎಷ್ಟು ಕೋಟಿಗಳನ್ನು ಸ್ವೀಕರಿಸಲಾಗಿದೆ? ಎಂದು ನರೇಂದ್ರ ಮೋದಿಯವರಿಗೆ ಪ್ರಶ್ನಿಸಿದ್ದಾರೆ.