ETV Bharat / bharat

ಮೋದಿ ಯೋಧರನ್ನು ನೋಯಿಸಿದ್ದಾರೆ: ಗಾಲ್ವಾನ್​ ಸಂಘರ್ಷದ ವಿಚಾರಕ್ಕೆ ರಾಹುಲ್‌ ಟೀಕೆ

author img

By

Published : Oct 23, 2020, 3:11 PM IST

Updated : Oct 23, 2020, 3:42 PM IST

ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಹಾರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿಳಿರುವ ರಾಹುಲ್​ ಗಾಂಧಿ, ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಜೊತೆ ಸೇರಿ ಜಂಟಿ ರ‍್ಯಾಲಿ ನಡೆಸಿದರು.

Rahul attacks PM Modi over Galwan, says he 'insulted' soldiers
ರಾಹುಲ್​ ಗಾಂಧಿ

ಹಿಸುವಾ (ಬಿಹಾರ​): ಲಡಾಖ್​ನಲ್ಲಿ ಭಾರತದ ಭೂಪ್ರದೇಶಕ್ಕೆ ಚೀನಾ ಸೈನಿಕರು ನುಸುಳಿಲ್ಲ, ನಮ್ಮ ಪ್ರದೇಶವನ್ನು ಅತಿಕ್ರಮಿಸಿಕೊಂಡಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತೀಯರ ಯೋಧರಿಗೆ ತೀವ್ರ ನೋವನ್ನುಂಟುಮಾಡಿದ್ದಾರೆ ಎಂದು ಮತ್ತೊಮ್ಮೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಿಡಿ ಕಾರಿದ್ದಾರೆ.

ಬಿಹಾರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ರಾಹುಲ್​ ಗಾಂಧಿ ಮಾತು

ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಹಾರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿಳಿರುವ ರಾಹುಲ್​ ಗಾಂಧಿ, ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಜೊತೆ ಸೇರಿ 'ಬದ್ಲಾ ಸಂಕಲ್ಪ್​​' (ಬದಲಾವಣೆಯ ಸಂಕಲ್ಪ) ಎಂಬ ಜಂಟಿ ರ‍್ಯಾಲಿ ಕೈಗೊಂಡಿದ್ದಾರೆ. ಈ ವೇಳೆ ಬಿಹಾರ ಜನತೆಯನ್ನುದ್ದೇಶಿ ಮಾತನಾಡಿದ ರಾಗಾ, ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದನ್ನು ಸ್ಮರಿಸಿದರು.

ದೇಶದ 1,200 ಕಿ.ಮೀ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ. ನಮ್ಮ ಯೋಧರು ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಪಿಎಂ ಮೋದಿ ಮಾತ್ರ ಚೀನಾ ಸೈನಿಕರು ಭಾರತಕ್ಕೆ ನುಸುಳಿಲ್ಲ ಎಂದು ಹೇಳಿಕೆ ನೀಡಿ ಭಾರತೀಯರ ಯೋಧರಿಗೆ ತೀವ್ರ ನೋವನ್ನುಂಟುಮಾಡಿದ್ದಾರೆ. ನಮ್ಮ ಜಾಗವನ್ನು ಆಕ್ರಮಿಸಿಕೊಂಡು ಕುಳಿತಿರುವ ಚೀನಾ ಸೈನಿಕರನ್ನು ಯಾವಾಗ ಹೊರ ಹಾಕುತ್ತೀರಾ? ಎಂದು ರಾಹುಲ್​ ಗಾಂಧಿ ಮೋದಿಗೆ ಪ್ರಶ್ನಿಸಿದ್ದಾರೆ.

Rahul attacks PM Modi over Galwan, says he 'insulted' soldiers
ರಾಹುಲ್​ ಗಾಂಧಿ - ತೇಜಸ್ವಿ ಯಾದವ್​ ಜಂಟಿ ರ‍್ಯಾಲಿ

ಬಿಹಾರ ಜನತೆಗೆ ಸುಳ್ಳು ಹೇಳಬೇಡಿ..

ಮೋದಿ ಜೀ, ಬಿಹಾರ ಜನತೆಗೆ ಸುಳ್ಳು ಹೇಳಬೇಡಿ. ಕಳೆದ ಚುನಾವಣೆ ವೇಳೆ 2 ಕೋಟಿ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ರಿ. ಒಬ್ಬರಿಗೆ ಕೂಡ ಸಿಕಿಲ್ಲ. ಎಷ್ಟು ಜನ ಬಿಹಾರಿಗಳು ಉದ್ಯೋಗ ಪಡೆದಿದ್ದಾರೆ. ಸಾರ್ವಜನಿಕವಾಗಿ ಮಾತ್ರ ಯೋಧರು, ರೈತರು, ಕಾರ್ಮಿರಿಗಾಗಿ ತಲೆ ಬಾಗುತ್ತೇನೆ ಎಂದು ಮೋದಿ ಹೇಳುತ್ತಾರೆ. ಮನೆಗೆ ಹೋದಮೇಲೆ ಅಂಬಾನಿ, ಅದಾನಿ ಪರವಾಗಿ ಕೆಲಸ ಮಾಡುತ್ತಾರೆ ಎಂದು ರಾಹುಲ್​​ ಹರಿಹಾಯ್ದಿದ್ದಾರೆ.

ರೈತರ ಮೇಲೆ ದಾಳಿ ನಡೆಸಲು ಮೋದಿಯವರು 3 ಹೊಸ ಕೃಷಿ ಕಾನೂನುಗಳನ್ನು ರೂಪಿಸಿದ್ದಾರೆ. ಬಿಹಾರ ಸೇರಿದಂತೆ ಇಡೀ ರಾಷ್ಟ್ರದಲ್ಲಿ ಮಂಡಿಗಳು ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ)ಯನ್ನು ಕೊನೆಗೊಳಿಸಿದ್ದಾರೆ. ಈ ಮೂಲಕ ಲಕ್ಷಾಂತರ ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಮೋದಿ ಹೋದಲ್ಲೆಲ್ಲಾ ಹೇಳುವುದು ಸುಳ್ಳನ್ನೇ ಎಂದು ರಾಗಾ ಇದೇ ವೇಳೆ ಆರೋಪಿಸಿದ್ದಾರೆ.

Last Updated : Oct 23, 2020, 3:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.