ನವದೆಹಲಿ: ಸೆಪ್ಟೆಂಬರ್ 10ರಂದು ಐದು ರಫೇಲ್ ಫೈಟರ್ ಜೆಟ್ಗಳು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ನ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಹಾಗೂ ಭಾರತದ ವಾಯುಪಡೆಯ ಉನ್ನತಾಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ನಡೆಯುವ ಈ ಸಮಾರಂಭದ ನಂತರ ಭಾರತ ಹಾಗೂ ಫ್ರಾನ್ಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಮಾತುಕತೆ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಐದು ರಫೆಲ್ ಜೆಟ್‌ಗಳ ಮೊದಲ ಬ್ಯಾಚ್ ಜುಲೈ 29ರಂದು ಭಾರತಕ್ಕೆ ಆಗಮಿಸಿತ್ತು. ಭಾರತವು ಫ್ರಾನ್ಸ್‌ನೊಂದಿಗೆ 36 ರಫೇಲ್ ಯುದ್ಧ ವಿಮಾನಗಳಿಗಾಗಿ 59 ಸಾವಿರ ಕೋಟಿ ಮೊತ್ತದ ಅಂತರ್-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ನಾಲ್ಕು ವರ್ಷಗಳ ನಂತರ ಅವುಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ.
2021ರ ವೇಳೆಗೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬರಲಿದ್ದು, ನವೆಂಬರ್ ವೇಳೆಗೆ ನಾಲ್ಕು ಅಥವಾ ಐದು ರಫೇಲ್ ಜೆಟ್ಗಳು ಎರಡನೇ ಬ್ಯಾಚ್ನಲ್ಲಿ ಭಾರತಕ್ಕೆ ಬರಲಿವೆ.