ETV Bharat / bharat

ವಿಶೇಷ ಅಂಕಣ: ಸಂಸತ್ತಿನ ಪ್ರಶ್ನೋತ್ತರ ಅವಧಿ ಪ್ರಜಾಪ್ರಭುತ್ವದ ಮೂಲತತ್ವವಾಗಿದೆ - Parliment news

ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರೆಗೆ ಯಾವುದೇ ವಿರಾಮವಿಲ್ಲದೆ ನಡೆಯಲಿರುವ ಈ ಅಧಿವೇಶನಗಳು ಎರಡು ಪಾಳಿಯಲ್ಲಿ ಅಂದರೆ ಬೆಳಿಗ್ಗೆ ಲೋಕಸಭೆ ಮತ್ತು ಮಧ್ಯಾಹ್ನ ರಾಜ್ಯಸಭೆ ಕಲಾಪಗಳು ನಡೆಯಲಿದೆ. ಇತ್ತೀಚಿನ ನಿಯಮಗಳು ಪ್ರಕಾರ ಕಲಾಪಗಳ ಪಾಳಿ ಅವಧಿಯನ್ನ ಕೇವಲ ನಾಲ್ಕು ಗಂಟೆಗಳವರೆಗೆ ಸೀಮಿತಗೊಳಿಸುವುದರಿಂದ, ಯಾವುದೇ ಪ್ರಶ್ನೋತ್ತರ ಅವಧಿ ಇರುವುದಿಲ್ಲ, ಶೂನ್ಯ ಅವಧಿಯನ್ನ ಅರ್ಧ ಗಂಟೆಗೆ ಸೀಮಿತಗೊಳಿಸಲಾಗಿದೆ.

Parliment
ಸಂಸತ್ತು
author img

By

Published : Sep 11, 2020, 10:39 PM IST

ಕಳೆದ ಬಜೆಟ್ ಅಧಿವೇಶನ ಮುಗಿದು 174 ದಿನಗಳ ದೀರ್ಘ ಅವಧಿ ನಂತರ ಸೆಪ್ಟೆಂಬರ್ 14 ರಿಂದ ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭವಾಗಲಿದೆ. ಕಳೆದ ಹಲವು ದಶಕಗಳಲ್ಲಿ ಈ ರೀತಿ ಸಂಸತ್‌ ಅಧಿವೇಶನ ವಿಳಂಬವಾಗುವ ಘಟನೆ ಎಂದಿಗೂ ಆಗಿರಲಿಲ್ಲ.! ಸಂಸತ್ತಿನ ಎರಡು ಸದನಗಳ ಅಧಿವೇಶನಗಳ ನಡುವಿನ ಅಂತರವು ಆರು ತಿಂಗಳು ಮೀರಬಾರದು ಎಂಬ ಸಾಂವಿಧಾನಿಕ ನಿಯಮಾವಳಿ ಅನುಸಾರವಾಗಿ ನಡೆಯುತ್ತಿರುವ ಮಾನ್ಸೂನ್ ಅಧಿವೇಶನವನ್ನು ಈ ಬಾರಿ 'ಕೋವಿಡ್ ಸೆಷನ್' ಎಂದು ಕರೆಯಬಹುದು. ಏಕೆಂದರೆ ಮಹಾಮಾರಿ ಕೋವಿಡ್ ಸಾಂಕ್ರಾಮಿಕ ರೋಗವು 41 ಲಕ್ಷಕ್ಕೂ ಹೆಚ್ಚು ಜನರಿಗೆ ಹಬ್ಬಿದೆ ಮತ್ತು ದೇಶಾದ್ಯಂತ 70 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಕೇಂದ್ರವು ಘೋಷಿಸಿದ ಆರೋಗ್ಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಸತ್ತಿನ ಕಾರ್ಯ ಕಲಾಪಗಳ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿದೆ.

ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರೆಗೆ ಯಾವುದೇ ವಿರಾಮವಿಲ್ಲದೆ ನಡೆಯಲಿರುವ ಈ ಅಧಿವೇಶನಗಳು ಎರಡು ಪಾಳಿಯಲ್ಲಿ ಅಂದರೆ ಬೆಳಿಗ್ಗೆ ಲೋಕಸಭೆ ಮತ್ತು ಮಧ್ಯಾಹ್ನ ರಾಜ್ಯಸಭೆ ಕಲಾಪಗಳು ನಡೆಯಲಿದೆ. ಇತ್ತೀಚಿನ ನಿಯಮಗಳು ಪ್ರಕಾರ ಕಲಾಪಗಳ ಪಾಳಿ ಅವಧಿಯನ್ನ ಕೇವಲ ನಾಲ್ಕು ಗಂಟೆಗಳವರೆಗೆ ಸೀಮಿತಗೊಳಿಸುವುದರಿಂದ, ಯಾವುದೇ ಪ್ರಶ್ನೋತ್ತರ ಅವಧಿ ಇರುವುದಿಲ್ಲ, ಶೂನ್ಯ ಅವಧಿಯನ್ನ ಅರ್ಧ ಗಂಟೆಗೆ ಸೀಮಿತಗೊಳಿಸಲಾಗಿದೆ. ಇನ್ನೂ, ಖಾಸಗಿ ಸದಸ್ಯರ ಬಿಲ್‌ಗಳನ್ನು ಅನುಮತಿಸಲಾಗುವುದಿಲ್ಲ.

ಗಡಿಯಲ್ಲಿ ಚೀನಾದ ಅತಿಕ್ರಮಣಗಳು, ದೇಶೀಯವಾಗಿ ಕರೋನಾ ಸಾವುಗಳು, ಶೇಕಡಾ ಮೈನಸ್ 23 ರಷ್ಟು ಬೆಳವಣಿಗೆಯ ದರ ಕುಸಿದಿರುವುದು, ಉದ್ಯೋಗ ಕ್ಷೇತ್ರ ಸ್ಥಗಿತ ಮತ್ತು ಇನ್ನೆಂದು ನೋಡದ ರೀತಿ ಕೈಗಾರಿಕಾ ಪ್ರಗತಿ ಕುಸಿತ. ಇವೆಲ್ಲವೂ ದೇಶದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಸಾರ್ವಜನಿಕ ಕಲ್ಯಾಣದ ವ್ಯಾಪಕ ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವುದು ಉತ್ತರ ಪಡೆಯುವುದಕ್ಕೆ ಪ್ರಶ್ನೋತ್ತರ ಅವಧಿ ಅತ್ಯಂತ ಉತ್ತಮ ವೇದಿಕೆಯಾಗಬಹುದು. ಪ್ರಶ್ನೋತ್ತರ ಅವಧಿ ರದ್ದಾದ ಹೊರತಾಗಿಯೂ, ಕೇಂದ್ರ ಸರ್ಕಾರವು ವಿಪಕ್ಷದ ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ನೀಡುತ್ತದೆ ಎಂದು ಹೇಳುತ್ತದೆ - ಆದರೆ, ಆ ರೀತಿಯ ಉತ್ತರಗಳು ಮೌಖಿಕ ಉತ್ತರಗಳಿಗೆ ಬದಲಿ ಉತ್ತರವಾಗುವುದಿಲ್ಲ. ಪ್ರಜಾಪ್ರಭುತ್ವದ ಸಾರವು ಹೊಣೆಗಾರಿಕೆಯಾಗಿದ್ದಾಗ ಪ್ರಶ್ನೋತ್ತರ ಅವಧಿಯನ್ನ ರದ್ದು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇಂಡೋ-ಚೀನಾ ಮತ್ತು ಇಂಡೋ-ಪಾಕ್ ಯುದ್ಧಗಳ ತುರ್ತು ಸಂದರ್ಭದಲ್ಲಿ ಪ್ರಶ್ನೋತ್ತರ ಅವಧಿ ರದ್ದುಗೊಳಿಸಿದ ಉದಾಹರಣೆಗಳಿದ್ದರೂ, ಪ್ರಸ್ತುತ ಬಿಕ್ಕಟ್ಟು ಅವಗಳಗಿಂತ ಭಿನ್ನವಾಗಿದೆ. ಪ್ರಬುದ್ಧ ಪ್ರಶ್ನೋತ್ತರ ಅವಧಿಯು ಬಿಕ್ಕಟ್ಟಿನ ಸಮಯದಲ್ಲಿ ಸಂಸತ್ತಿನ ಚರ್ಚೆ ನಡೆಸಲು ಸೂಕ್ತ ವೇದಿಕೆಯಾಗಲಿದೆ.

ಸಂವಿಧಾನ ತಜ್ಞ ಸರ್ ವಿಲಿಯಂ ಐವರ್ ಜೆನ್ನಿಂಗ್ಸ್ ಅವರು ಹೇಳುವ ಪ್ರಕಾರ, ಸಂಸತ್ತಿನ ಕೆಲಸವು ಕೇವಲ ಆಡಳಿತ ನಡೆಸುವುದಲ್ಲ, ಅಲ್ಲಿ ವಾದ-ವಿವಾದಗಳು, ಚರ್ಚೆ ನಡೆಯಬೇಕು ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದೇ ಆಗಿದೆ. ಒಂದು ಆದರ್ಶ ಪ್ರಜಾಪ್ರಭುತ್ವವು ಆಡಳಿತಾರೂಢ ಸರ್ಕಾರವನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸಲು ಪ್ರತಿಪಕ್ಷಗಳ ಟೀಕೆಗಳ ಹಕ್ಕನ್ನು ನೀಡುವುದೇ ಆಗಿದೆ. 1957 ರಲ್ಲಿ ಸಂಸತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಬಿಹಾರ ಸಂಸದ ರಾಮ್ ಸುಭಾಗ್ ಸಿಂಗ್ ಅವರು ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ ಅವರನ್ನು ಪ್ರಶ್ನಿಸುವ ಮೂಲಕ ಸ್ವತಂತ್ರ ಭಾರತದಲ್ಲಿ ನಡೆದ ಮೊದಲ ಹಗರಣವನ್ನು ಬಹಿರಂಗ ಮಾಡಿದ್ದರು.

ಶಾಸಕಾಂಗಕ್ಕೆ ಜವಾಬ್ದಾರರಾಗಿರಲು ಜನರ ಪರವಾಗಿ ಕಾರ್ಯಕಾರಿಣಿಗೆ ಕಠಿಣ ಪ್ರಶ್ನೆಗಳನ್ನು ಕೇಳುವುದು ಪ್ರತಿನಿಧಿ ಸಭೆಯ ಸದಸ್ಯರ ಪವಿತ್ರ ಕರ್ತವ್ಯವಾಗಿದೆ. 1961 ರಿಂದ ಪ್ರತಿ ಬುಧವಾರ ಸದಸ್ಯರಿಗೆ ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ಅರ್ಧ ಗಂಟೆ ಪ್ರಶ್ನೋತ್ತರ ಅವಧಿಯನ್ನ ಬ್ರಿಟನ್ ಪ್ರಧಾನ ಮಂತ್ರಿಗೆ ನಿಗದಿಪಡಿಸಲಾಗಿದೆ. ಅಲ್ಲಿ ಒಂದು ವರ್ಷದಲ್ಲಿ ಕನಿಷ್ಠ 160 ದಿನಗಳವರೆಗೆ ಸಭೆ ಸೇರುವ ಸಂಸತ್ತು, ಪ್ರತಿ ಅಧಿವೇಶನಕ್ಕೆ 20 ದಿನಗಳವರೆಗೆ ಅಜೆಂಡಾ ನಿಗದಿಪಡಿಸುವ ಅಧಿಕಾರವನ್ನು ವಿರೋಧ ಪಕ್ಷವು ಹೊಂದಿದೆ, ಇದು ಪ್ರಜಾಪ್ರಭುತ್ವದ ಉತ್ಸಾಹ ಮತ್ತು ಘನತೆಯನ್ನು ಹೆಚ್ಚಿಸುತ್ತದೆ.

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದು ಸದಸ್ಯರ ಹಕ್ಕು ಎಂದು ಲೋಕಸಭಾ ಸಚಿವಾಲಯವೇ ಘೋಷಿಸಿದ್ದರೂ, ಕಳೆದ ಲೋಕಸಭಾ ಅಧಿವೇಶನದಲ್ಲಿ ಕೇವಲ 67 ಪ್ರತಿಶತದಷ್ಟು ಪ್ರಶ್ನೋತ್ತರ ಸಮಯವನ್ನು ಮಾತ್ರ ಸರಿಯಾಗಿ ಬಳಸಿಕೊಳ್ಳಲಾಯಿತು. 2009-19ರ ಅವಧಿಯಲ್ಲಿ ರಾಜ್ಯಸಭೆಯ ಪ್ರಶ್ನೋತ್ತರ ಸಮಯವನ್ನು ಕೇವಲ 41 ಪ್ರತಿಶತದಷ್ಟು ಮಾತ್ರ ಬಳಸಿಕೊಳ್ಳಲಾಗಿದೆ. ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲಾಗಿದೆ ಎಂದು ಆರೋಪಿಸುವ ವಿಪಕ್ಷಗಳು ಈ ಹಿಂದೆ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ ರೀತಿ ಬಗ್ಗೆ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನವ ಭಾರತವನ್ನು ಅನಾವರಣಗೊಳಿಸುವ ದಿಕ್ಕಿನಲ್ಲಿ ಕಳೆದ ವರ್ಷ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' (ಎಲ್ಲರ ಜೊತೆ ಕೆಲಸ ಮಾಡುವುದು, ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ) ಕುರಿತು ಪ್ರಸ್ತಾಪಿಸಿದ ಮೋದಿ, ಆ ಮನೋಭಾವಕ್ಕೆ ಅನುಗುಣವಾಗಿ ಪ್ರಾಮಾಣಿಕವಾಗಿ ಸಂಸತ್ತು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಗೆ ಆದ್ಯತೆ ನೀಡುವ ಮೂಲಕ ಸಂಸತ್ತಿನ ಘನತೆಯನ್ನ ಎತ್ತಿಹಿಡಿಯಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.