ಜಗದಲ್‌ಪುರ (ಛತ್ತೀಸ್‌ಗಢ): ಯೋಗ್ಯ ಜೀವನಕ್ಕಾಗಿ ಮೂಲಭೂತ ಸೌಕರ್ಯಗಳು ಅತ್ಯಗತ್ಯ. ಮೂಲಭೂತ ಸೌಕರ್ಯಗಳ ವ್ಯಾಪ್ತಿಯಲ್ಲಿ ಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯ, ವಸತಿ, ಹಳ್ಳಿಗೆ ಉತ್ತಮವಾದ ರಸ್ತೆ, ವಿದ್ಯುತ್, ಆರೋಗ್ಯ ಕೇಂದ್ರ, ಶಾಲೆ ಮತ್ತು ಇನ್ನೂ ಅನೇಕವು ಸೇರಿಕೊಳ್ಳುತ್ತವೆ. ಆದ್ರೆ ಛತ್ತೀಸ್ಗಢದ ಗ್ರಾಮವೊಂದು ಈ ಎಲ್ಲ ಸೌಲಭ್ಯದಿಂದ ವಂಚಿತವಾಗಿದೆ.
ಜಗದಲ್‌ಪುರ ಜಿಲ್ಲೆಯ ಪುಸ್ಪಾಲ್ನ ಪಡರ್‌ಪಾನಿ ಪಾರಾ ಕುಗ್ರಾಮದ ಗ್ರಾಮೀಣ ಪ್ರದೇಶದ ಒಂದು ಸಣ್ಣ ಭಾಗದಲ್ಲಿ, ಮೂಲಭೂತವಾಗಿ ಬದುಕುಳಿಯಲು ಬೇಕಾಗಿರುವ ಸುರಕ್ಷಿತ ಕುಡಿಯುವ ನೀರಿಗಾಗಿ ಅಲ್ಲಿನ ಜನರು ಹೆಣಗಾಡುತ್ತಿದ್ದಾರೆ. ಭಾರಿ ಬಜೆಟ್ ಹಂಚಿಕೆಗಳ ನಡುವೆಯೂ ಜಿಲ್ಲಾ ಕೇಂದ್ರದಿಂದ 90 ಕಿ.ಮೀ ದೂರದಲ್ಲಿರುವ ಪುಸ್ಪಾಲ್ ಗ್ರಾಮವು ಈ ಸಮಸ್ಯೆಯಿಂದ ಬಳಲುತ್ತಿದೆ.
ಇಲ್ಲಿನ ಗ್ರಾಮಸ್ಥರಿಗೆ ಕುಡಿಯುವ ನೀರು ಇಲ್ಲದ ಕಾರಣ ಈಗ ಸಣ್ಣ ಹಳ್ಳದಿಂದ ಕುಡಿಯಲು ನೀರನ್ನು ತರುತ್ತಿದ್ದಾರೆ. ಆ ನೀರು ಕುರಿಯಲು ಯೋಗ್ಯವಾಗಿಲ್ಲ. ಆದ್ರೂ ಜನ ಅದನ್ನೇ ಕುಡಿಯುತ್ತಿದ್ದಾರೆ. ಇಲ್ಲವಾದ್ರೆ ಅಲ್ಲಿಯ ಜನ ಬಾಯಾರಿಕೆಯಿಂದಾಗಿ ಸಾಯಬೇಕಾಗುತ್ತದೆ. ಅಡುಗೆ ಮತ್ತು ಅವರ ಇತರ ಮೂಲಭೂತ ಅಗತ್ಯತೆಗಳಿಗಾಗಿ ಈ ನೀರನ್ನೇ ಬಳಸುತ್ತಿದ್ದಾರೆ.
ಈ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಸರ್ಕಾರದಿಂದ ಯಾವುದೇ ನೆರವು ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ನೀರನ್ನು ಜನರು ಕುಡಿಯುತ್ತಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಕೆಲಸಗಳು ನಡೆದಿಲ್ಲ. ಆದರೆ, ಶೀಘ್ರದಲ್ಲೇ ಪಾಡೆರ್ಪಾನಿ ಪ್ಯಾರಾದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ಜನರು ಶುದ್ಧ ಕುಡಿಯುವ ನೀರನ್ನು ಕುಡಿಯುವಂತೆ ಮಾಡುತ್ತೇವೆ ಎಂದು ಅಧಿಕಾರಿ ಕಶ್ಯಪ್ ಹೇಳಿದ್ದಾರೆ.