ಚಂಡೀಗಢ(ಪಂಜಾಬ್): ಕಳೆದೆರಡು ದಿನಗಳಿಂದ ಪಂಜಾಬ್ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಪಂಜಾಬ್ ಆರೋಗ್ಯ ಸಚಿವರಿಗೆ ಕೊರೊನಾ ದೃಢಪಟ್ಟಿದೆ.
ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿದ್ದು ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂಥೆ ಖುದ್ದಾಗಿ ಮಾಹಿತಿ ನೀಡಿದ್ದಾರೆ. ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದ ಹೋಂ ಕ್ವಾರಂಟೈನ್ಗೊಳಗಾಗಿದ್ದು, ತಮ್ಮೊಂದಿಗೆ ಸಂಪರ್ಕದಲ್ಲಿದ್ದವರು ತಪಾಸಣೆಗೊಳಗಾಗುವಂತೆ ಮನವಿ ಮಾಡಿದ್ದಾರೆ. ಬೆಳಗ್ಗೆಯಿಂದಲೂ ಜ್ವರದಿಂದ ಬಳಲುತ್ತಿದ್ದ ಕಾರಣ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಈ ವೇಳೆ ವರದಿ ಪಾಸಿಟಿವ್ ಬಂದಿದೆ.
-
Punjab Health Minister Balbir Sidhu (file pic) tests positive for #COVID19: Health Minister's Office pic.twitter.com/ZY756Q4GNE
— ANI (@ANI) October 6, 2020 " class="align-text-top noRightClick twitterSection" data="
">Punjab Health Minister Balbir Sidhu (file pic) tests positive for #COVID19: Health Minister's Office pic.twitter.com/ZY756Q4GNE
— ANI (@ANI) October 6, 2020Punjab Health Minister Balbir Sidhu (file pic) tests positive for #COVID19: Health Minister's Office pic.twitter.com/ZY756Q4GNE
— ANI (@ANI) October 6, 2020
ರಾಹುಲ್ ಗಾಂಧಿ ನೇತೃತ್ವದಲ್ಲಿ ನಿನ್ನೆ ನಡೆದ ಖೇತಿ ಬಚಾವೋ ರ‍್ಯಾಲಿಯಲ್ಲಿ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿದ್ದು ಕಾಣಿಸಿಕೊಂಡಿದ್ದರು. ಇದರಲ್ಲಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇದೀಗ ಅವರಲ್ಲೂ ಕೊರೊನಾ ಸೋಂಕಿನ ಭೀತಿ ಕಾಡಲು ಶುರುವಾಗಿದೆ.