ಹೈದ್ರಾಬಾದ್: ಇಲ್ಲಿನ 26 ವರ್ಷದ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ಘಟನೆ ವಿರೋಧಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ತೆಲಂಗಾಣದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಕಾವು ಜೋರಾಗಿದೆ.
ಒಂದೆಡೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಹೈದರಾಬಾದ್-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದೆಡೆ ತೆಲಂಗಾಣದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು 'ದೀಕ್ಷಾ' ಎಂಬ ಹೆಸರಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು. ತೆಲಂಗಾಣದಲ್ಲಿ ಮಹಿಳೆಯರು ಶೇ. 1ರಷ್ಟು ಕೂಡ ಸುರಕ್ಷಿತವಾಗಿಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಕುಲ ವಿಜಯ ಆರೋಪಿಸಿದ್ದಾರೆ.
-
#WATCH: Police lathicharged on locals who hurled slippers on police outside Shadnagar police station, where the accused in rape&murder case of the woman veterinary doctor were lodged earlier today. Accused have been shifted to Chanchalguda Central Jail. #Telangana pic.twitter.com/qXOc0SVOyS
— ANI (@ANI) November 30, 2019 " class="align-text-top noRightClick twitterSection" data="
">#WATCH: Police lathicharged on locals who hurled slippers on police outside Shadnagar police station, where the accused in rape&murder case of the woman veterinary doctor were lodged earlier today. Accused have been shifted to Chanchalguda Central Jail. #Telangana pic.twitter.com/qXOc0SVOyS
— ANI (@ANI) November 30, 2019#WATCH: Police lathicharged on locals who hurled slippers on police outside Shadnagar police station, where the accused in rape&murder case of the woman veterinary doctor were lodged earlier today. Accused have been shifted to Chanchalguda Central Jail. #Telangana pic.twitter.com/qXOc0SVOyS
— ANI (@ANI) November 30, 2019
ಈ ವೇಳೆ ಮಾತನಾಡಿದ ಬಿಜೆಪಿ ವಕ್ತಾರ ರಾಮ್‌ಚಂದರ್ ರಾವ್, ತೆಲಂಗಾಣದಲ್ಲಿ ಒಂದೇ ದಿನದಲ್ಲಿ ಎರಡು ಅತ್ಯಾಚಾರ ಮತ್ತು ಕೊಲೆ ಘಟನೆಗಳು ನಡೆದಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಸರ್ಕಾರ ಮೇಲ್ವಿಚಾರಣೆ ಮಾಡಬೇಕು. ಘಟನೆ ನಡೆದ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿರುವುದಕ್ಕೆ ಪೊಲೀಸರಿಗೆ ಶ್ಲಾಘಿಸಿದರು.
-
Correction: Protesters, including students of government schools, block Hyderabad-Bangalore Highway in protest against the rape and murder of a woman veterinary doctor. #Telangana pic.twitter.com/tqsGJLVaXU
— ANI (@ANI) November 30, 2019 " class="align-text-top noRightClick twitterSection" data="
">Correction: Protesters, including students of government schools, block Hyderabad-Bangalore Highway in protest against the rape and murder of a woman veterinary doctor. #Telangana pic.twitter.com/tqsGJLVaXU
— ANI (@ANI) November 30, 2019Correction: Protesters, including students of government schools, block Hyderabad-Bangalore Highway in protest against the rape and murder of a woman veterinary doctor. #Telangana pic.twitter.com/tqsGJLVaXU
— ANI (@ANI) November 30, 2019
ಇನ್ನು ಹೈದರಾಬಾದ್ನ ದಿಲ್ಶುಖ್ ನಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಘಟನೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಹಾಗೆಯೇ ಶಂಶಾಬಾದ್ನಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮೃತ ವೈದ್ಯೆ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.