ETV Bharat / bharat

ಪಶ್ಚಿಮ ಬಂಗಾಳ: ಸಾಮೂಹಿಕ ಅತ್ಯಾಚಾರ ಕೊಲೆ ಖಂಡಿಸಿ ಉಗ್ರ ಪ್ರತಿಭಟನೆ..! - ಉತ್ತರ ದಿನಾಜ್‌ಪುರದ ಕಲಗಚ್​ನ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ

ಉತ್ತರ ದಿನಾಜ್‌ಪುರದ ಕಲಗಚ್​​ನ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಕೊಲೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ.

West Bengal
ಪಶ್ಚಿಮ ಬಂಗಾಳ: ಸಾಮೂಹಿಕ ಅತ್ಯಾಚಾರ ಕೊಲೆಯನ್ನ ಖಂಡಿಸಿ ಸ್ಥಳೀಯರು ಪ್ರತಿಭಟನೆ
author img

By

Published : Jul 19, 2020, 8:15 PM IST

Updated : Jul 19, 2020, 9:06 PM IST

ಪಶ್ಚಿಮ ಬಂಗಾಳ: ಉತ್ತರ ದಿನಾಜ್‌ಪುರದ ಕಲಗಚ್​ನ ಬಾಲಕಿಯೋರ್ವಳು ನಿನ್ನೆ ನಾಪತ್ತೆಯಾಗಿದ್ದು, ಇಂದು ಆಕೆಯ ಶವ ಪತ್ತೆಯಾಗಿದೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪಶ್ಚಿಮ ಬಂಗಾಳ: ಸಾಮೂಹಿಕ ಅತ್ಯಾಚಾರ ಕೊಲೆಯನ್ನ ಖಂಡಿಸಿ ಸ್ಥಳೀಯರು ಪ್ರತಿಭಟನೆ

ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟನೆ ವಿಕೋಪಕ್ಕೆ ತೆರಳಿದೆ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರ ನಡುವೆ ಘರ್ಷಣೆ ನಡೆದಿದೆ. ಪೊಲೀಸರು ರಸ್ತೆಗಳಲ್ಲಿ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ್ದಾರೆ. ಇದಕ್ಕೆ ಬಗ್ಗದ ಪ್ರತಿಭಟನಕಾರರು ವಾಹನಗಳಿಗೆ ಬೆಂಕಿ ಹಚ್ಚಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

  • A 16 years old girl raped by Feroze Ali in Chopra. She died today morning. Did she pay the price of being the sister of the local BJP Booth President? And sadly, a state governed by a woman CM cannot protect it's girls. pic.twitter.com/Fw7Fp4v6hJ

    — BJP Bengal (@BJP4Bengal) July 19, 2020 " class="align-text-top noRightClick twitterSection" data=" ">

ಹುಡುಗಿಯ ಸಹೋದರಿಯ ಪ್ರಕಾರ, ಮೃತಳು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ನಿನ್ನೆ ರಾತ್ರಿ ಆಕೆ ನಾಪತ್ತೆಯಾಗಿದ್ದು, ಇವತ್ತು ಮರದ ಕೆಳಗೆ ಆಕೆಯ ಮೃತದೇಹ ಪತ್ತೆಯಾಗಿದೆ ಎಂದು ಹೇಳಿದ್ದಾಳೆ.

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತ ಎರಡು ಸೈಕಲ್‌ ಮತ್ತು ಕೆಲ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Last Updated : Jul 19, 2020, 9:06 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.