ETV Bharat / bharat

ಅಧಿಕಾರಿ ವಿರುದ್ಧ ಲಂಚದ ಆರೋಪ: ಪಡೆದ ಹಣ ಮರಳಿಸುಂತೆ ರೈತರ ಪ್ರತಿಭಟನೆ - ರೈತರ ಪ್ರತಿಭಟನೆ

ಕಂದಾಯ ಅಧಿಕಾರಿಯೊಬ್ಬರ ಮೇಲೆ ಜನರಿಂದ ಲಂಚ ಪಡೆದ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ವರ್ಗಾಯಿಸಲಾಗಿದೆ. ಹೀಗಾಗಿ ತಮ್ಮ ಹಣವನ್ನು ಹಿಂದಿರುಗಿಸಬೇಕು ಅಥವಾ ಅಧಿಕಾರಿ ಯಾವ ಕೆಲಸವನ್ನು ಮಾಡಲು ಹಣ ತೆಗೆದುಕೊಂಡಿದ್ದಾರೆಯೋ ಆ ಕೆಲಸವನ್ನು ಮುಗಿಸಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.

protest
author img

By

Published : Jul 31, 2020, 9:22 AM IST

ಕುಮಾರಂಭಿಮ್ (ತೆಲಂಗಾಣ): ಆಸಿಫಾಬಾದ್​​ನ ಚಿಂತಲಮನೆಪಲ್ಲಿ ಮಂಡಲ್​ನ ಕಂದಾಯ ಅಧಿಕಾರಿ ಖಾಜಾ ನಯಾಜುದ್ದೀನ್ ಮೇಲೆ ಜನರಿಂದ ಲಂಚ ಪಡೆದ ಆರೋಪ ಕೇಳಿಬಂದಿದೆ.

ಈ ಆರೋಪದ ಹಿನ್ನೆಲೆ ಅವರನ್ನು ಡಿಸಿ ಜಿಲ್ಲಾ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ. ತಾವು ಹಣ ನೀಡಿದ ಅಧಿಕಾರಿಯನ್ನು ಬೇರೆ ನಗರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿದ ವಿವಿಧ ಗ್ರಾಮಗಳ ರೈತರು, ಕಂದಾಯ ಇಲಾಖೆ ಕಚೇರಿ ಎದುರು ಜಮಾಯಿಸಿ ತಾವು ನೀಡಿದ ಹಣ ವಾಪಸ್​ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು.

protest by farmers against officer for taking bribe
ತಾವು ಕೊಟ್ಟ ಹಣ ವಾಪಸ್​ ನೀಡಬೇಕು ಎಂದು ರೈತರಿಂದ ಪ್ರತಿಭಟನೆ

ತಮ್ಮ ಹಣವನ್ನು ಹಿಂದಿರುಗಿಸಬೇಕು ಅಥವಾ ಅಧಿಕಾರಿ ತಮ್ಮ ಯಾವ ಕೆಲಸವನ್ನು ಮಾಡಲು ಹಣ ತೆಗೆದುಕೊಂಡಿದ್ದಾರೆಯೋ ಆ ಕೆಲಸವನ್ನು ಮುಗಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದರು.

ಪ್ರತಿ ರೈತನಿಂದ 10,000 ದಿಂದ 70,000 ರೂ. ವರೆಗೆ ಅಧಿಕಾರಿ ಲಂಚ ತೆಗೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಎಷ್ಟೇ ಪ್ರಯತ್ನಿಸಿದರೂ ಅವರು ಕೇಳಿಲಿಲ್ಲಿ.

ಅಂತಿಮವಾಗಿ ಎಂಆರ್‌ಒ ಶ್ವೇತಪತ್ರದಲ್ಲಿ ಯಾರಿಗೆ ಎಷ್ಟು ಹಣ ಕೊಡಬೇಕು ಎಂದು ಬರೆಯಿಸಿಕೊಂಡು ಆಗಸ್ಟ್ 18ರ ಒಳಗೆ ಅದನ್ನು ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್​ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.