ಗುವಾಹತಿ: ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಅಸ್ಸೋಂನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಿಸಿ ಹೆಚ್ಚಾಗುತ್ತಿರುವ ಕಾರಣದಿಂದಾಗಿ ರೈಲು ಹಾಗೂ ವಿಮಾನ ಸೇವೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಲ್ಲದೇ ರಾಜ್ಯದ 10 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಮುಂದಿನ 48 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಇಂಟರ್ನೆಟ್ ಸೇವೆ ಸ್ಥಗಿತ:
ಲಖಿಂಪುರ, ಟಿನ್ಸುಕಿಯಾ, ಧೆಮಾಜಿ, ದಿಬ್ರುಗರ್, ಚಾರೈಡಿಯೊ, ಶಿವಸಾಗರ್, ಜೋರ್ಹತ್, ಗೋಲಾಘಾಟ್, ಕಮ್ರೂಪ್ ಸೇರಿದಂತೆ 10 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಸ್ಸೋಂ ಗೃಹ ಮತ್ತು ರಾಜಕೀಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣ ಮಾಹಿತಿ ನೀಡಿದ್ದಾರೆ.
-
Kumar Sanjay Krishna,Addl Chief Secretary (Home&Political Dept) Assam: Mobile internet service suspended for 48 more hours in 10 districts (Lakhimpur, Tinsukia, Dhemaji, Dibrugarh,Charaideo,Sivasagar,Jorhat, Golaghat, Kamrup (Metro)&Kamrup) of Assam. #CitizenshipAmendmentBill pic.twitter.com/gbJuwTnKsX
— ANI (@ANI) December 12, 2019 " class="align-text-top noRightClick twitterSection" data="
">Kumar Sanjay Krishna,Addl Chief Secretary (Home&Political Dept) Assam: Mobile internet service suspended for 48 more hours in 10 districts (Lakhimpur, Tinsukia, Dhemaji, Dibrugarh,Charaideo,Sivasagar,Jorhat, Golaghat, Kamrup (Metro)&Kamrup) of Assam. #CitizenshipAmendmentBill pic.twitter.com/gbJuwTnKsX
— ANI (@ANI) December 12, 2019Kumar Sanjay Krishna,Addl Chief Secretary (Home&Political Dept) Assam: Mobile internet service suspended for 48 more hours in 10 districts (Lakhimpur, Tinsukia, Dhemaji, Dibrugarh,Charaideo,Sivasagar,Jorhat, Golaghat, Kamrup (Metro)&Kamrup) of Assam. #CitizenshipAmendmentBill pic.twitter.com/gbJuwTnKsX
— ANI (@ANI) December 12, 2019
ವಿಮಾನ ಸೇವೆ ರದ್ದು:
ಸಿಎಬಿ ವಿರೋಧಿ ಪ್ರತಿಭಟನೆ ಹಿನ್ನೆಲೆ ಹಲವಾರು ಖಾಸಗಿ ವಿಮಾನಯಾನ ಸಂಸ್ಥೆಗಳು ಕೋಲ್ಕತ್ತಾದಿಂದ ಅಸ್ಸೋಂ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ವಿಮಾನಗಳನ್ನು ರದ್ದುಗೊಳಿಸಿವೆ.
-
#6ETravelAdvisory: You may visit Plan B https://t.co/DSSJqiVQRK to choose alternate flight or get refund at no charge. For flight status, please visit https://t.co/TQCzzy2a2s or you may reach out to us on Twitter/Facebook or chat with us at https://t.co/kpCeBi5sNV pic.twitter.com/nKtVJ14pEE
— IndiGo (@IndiGo6E) December 12, 2019 " class="align-text-top noRightClick twitterSection" data="
">#6ETravelAdvisory: You may visit Plan B https://t.co/DSSJqiVQRK to choose alternate flight or get refund at no charge. For flight status, please visit https://t.co/TQCzzy2a2s or you may reach out to us on Twitter/Facebook or chat with us at https://t.co/kpCeBi5sNV pic.twitter.com/nKtVJ14pEE
— IndiGo (@IndiGo6E) December 12, 2019#6ETravelAdvisory: You may visit Plan B https://t.co/DSSJqiVQRK to choose alternate flight or get refund at no charge. For flight status, please visit https://t.co/TQCzzy2a2s or you may reach out to us on Twitter/Facebook or chat with us at https://t.co/kpCeBi5sNV pic.twitter.com/nKtVJ14pEE
— IndiGo (@IndiGo6E) December 12, 2019
ಅಸ್ಸೋಂನಲ್ಲಿ ನಡೆಯುತ್ತಿರುವ ಅಶಾಂತಿಯಿಂದಾಗಿ, ಗುವಾಹತಿ, ದಿಬ್ರುಗರ್ ಮತ್ತು ಜೋರ್ಹಾತ್- ಈ ಸ್ಥಳಗಳಿಗೆ ಹಾಗೂ ಸ್ಥಳಗಳಿಂದ ಹೊರಡುತ್ತಿರುವ ವಿಮಾನಯಾನದ ಸಮಯದಲ್ಲಿ ಬದಲಾವಣೆ ಹಾಗೂ ವಿಮಾನ ಸೇವೆ ಸ್ಥಗಿತವಾಗಿದ್ದು, ಡಿಸೆಂಬರ್ 14 ರವರೆಗೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಮರುಹೊಂದಿಸುವಿಕೆ / ರದ್ದತಿ ಶುಲ್ಕ ವಿನಾಯಿತಿಯನ್ನು ನೀಡುತ್ತಿದ್ದೇವೆ ಎಂದು ಇಂಡಿಗೋ ವಿಮಾನ ಸಂಸ್ಥೆ ತಿಳಿಸಿದೆ.
-
#TravelUpdate Due to the ongoing unrest in Assam, we are waiving rescheduling/cancellation fee to the customers travelling to and from Guwahati and Dibrugarh till Dec 13, 2019. Fare difference if any, will be applicable. Thank you.
— Vistara (@airvistara) December 11, 2019 " class="align-text-top noRightClick twitterSection" data="
">#TravelUpdate Due to the ongoing unrest in Assam, we are waiving rescheduling/cancellation fee to the customers travelling to and from Guwahati and Dibrugarh till Dec 13, 2019. Fare difference if any, will be applicable. Thank you.
— Vistara (@airvistara) December 11, 2019#TravelUpdate Due to the ongoing unrest in Assam, we are waiving rescheduling/cancellation fee to the customers travelling to and from Guwahati and Dibrugarh till Dec 13, 2019. Fare difference if any, will be applicable. Thank you.
— Vistara (@airvistara) December 11, 2019
ಇನ್ನು ಗುವಾಹತಿ ಮತ್ತು ದಿಬ್ರುಗರ್‌ಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಡಿಸೆಂಬರ್ 13, 2019 ರವರೆಗೆ ಮರು ಹೊಂದಿಸುವಿಕೆ / ರದ್ದತಿ ಶುಲ್ಕವನ್ನು ಮನ್ನಾ ಮಾಡುತ್ತಿದ್ದೇವೆ ಎಂದು ವಿಸ್ತಾರ ವಿಮಾನ ಸಂಸ್ಥೆ ತಿಳಿಸಿದೆ.
ರೈಲು ಸೇವೆ ಸ್ಥಗಿತ:
ಇನ್ನು, ತ್ರಿಪುರಾ ಹಾಗೂ ಅಸ್ಸೋಂ ಎರಡೂ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಈ ರಾಜ್ಯಗಳನ್ನು ಸಂಪರ್ಕಿಸುವ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಗುವಾಹತಿ ಪ್ರದೇಶಕ್ಕಿದ್ದ ಅಲ್ಪಾವಧಿ ದೂರದ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ISL ಪಂದ್ಯ ಮುಂದೂಡಿಕೆ:
ಪೌರತ್ವ (ತಿದ್ದುಪಡಿ) ಮಸೂದೆಯ ವಿರುದ್ಧ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜ್ಯವನ್ನು ಅನಿರ್ದಿಷ್ಟಾವಧಿವರೆಗೆ ಕರ್ಫ್ಯೂ ಹೇರಿರುವುದರಿಂದ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ನಡುವೆ ಗುವಾಹತಿಯ ಇಂದಿರಾಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಬೇಕಿದ್ದ ಇಂಡಿಯನ್ ಸೂಪರ್ ಲೀಗ್ ಪಂದ್ಯವನ್ನು ಮುಂದೂಡಲಾಗಿದೆ. ಮುಂದಿನ ಸೂಚನೆವರೆಗೆ ISL ಪಂದ್ಯವನ್ನು ಮುಂದೂಡಲಾಗಿದೆ ಎಂದು ISL ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.