ETV Bharat / bharat

ವಿಶೇಷ ಅಂಕಣ... ನಾಗರಿಕ ಹಕ್ಕುಗಳ ರಕ್ಷಣೆ: ಬೆಳಕಾಗಿ ಬಂದ ಸುಪ್ರೀಂ ತೀರ್ಪು

author img

By

Published : Jan 17, 2020, 1:16 PM IST

ಪೌರತ್ವ ಕುರಿತ ವ್ಯಾಖ್ಯಾನವನ್ನು ಬದಲಿಸುವ  ಕಾನೂನು ಮತ್ತು ಅದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಪೌರತ್ವ ನೋಂದಣಿಗೆ ಮುಂದಾಗಿರುವುದು ದೇಶದ ಹಲವು ನಗರಗಳು ಮತ್ತು ಪಟ್ಟಣಗಳಲ್ಲಿ ಆತಂಕದ ಛಾಯೆ ಮೂಡಿಸಿದೆ. ಇಂತಹ ಬೃಹತ್ ಹೋರಾಟಗಳನ್ನು ಕಾಶ್ಮೀರ ಮಾದರಿಯಲ್ಲಿಯೇ ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ.

human rights
ನಾಗರಿಕ ಹಕ್ಕುಗಳ ರಕ್ಷಣೆ

ಪ್ರಜಾಪ್ರಭುತ್ವ ಗಣರಾಜ್ಯದಲ್ಲಿ, ನಾಗರಿಕರಿಗೆ ಕಾನೂನುಬದ್ಧವಾಗಿ ಪ್ರತಿಭಟಿಸುವ ಮೂಲಭೂತ ಹಕ್ಕು ಇದೆ. ಅಂತಹ ಮೂಲಭೂತ ಹಕ್ಕನ್ನು ದಮನ ಮಾಡುವ ಸರ್ಕಾರಗಳ ಇತ್ತೀಚಿನ ಕರಾಳ ನಿರ್ಧಾರದ ನಡುವೆ ಸುಪ್ರೀಂಕೋರ್ಟ್‌ನ ಮೂವರು ಸದಸ್ಯರ ಪೀಠ ನೀಡಿದ ತೀರ್ಪು ದಾರಿದೀಪವಾಗಿ ತೋರುತ್ತಿದೆ.

ಶಾಸಕಾಂಗದ ಸದಸ್ಯರು ಮತ್ತು ಅಧಿಕಾರಿಗಳಿಗೆ ಸಾಂವಿಧಾನಿಕ ಅವಕಾಶಗಳನ್ನು ಕೋರ್ಟ್ ನೆನಪು ಮಾಡಿಕೊಟ್ಟಿದೆ. ಕಳೆದ ವರ್ಷ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ “ಕಾಶ್ಮೀರ ಟೈಮ್ಸ್” ನ ಸಂಪಾದಕಿ ಮತ್ತು ಜಮ್ಮು - ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಅವರು ಸುಪ್ರೀಂಕೋರ್ಟ್ ಬಾಗಿಲು ಬಡಿದರು. ಅಲ್ಲಿ ದೂರವಾಣಿ ಮತ್ತು ಅಂತರ್ಜಾಲ ಸೌಲಭ್ಯಗಳನ್ನು ಅಮಾನತು ಮಾಡಿದ್ದರ ವಿರುದ್ಧ ಮೇಲ್ಮನವಿ ಸಲ್ಲಿಸಿದರು.

ಬಳಿಕ, ಪೌರತ್ವ ಕುರಿತ ವ್ಯಾಖ್ಯಾನವನ್ನು ಬದಲಿಸುವ ಕಾನೂನು ಮತ್ತು ಅದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಪೌರತ್ವ ನೋಂದಣಿಗೆ ಮುಂದಾಗಿರುವುದು ದೇಶದ ಹಲವು ನಗರಗಳು ಮತ್ತು ಪಟ್ಟಣಗಳಲ್ಲಿ ಆತಂಕದ ಛಾಯೆ ಮೂಡಿಸಿದೆ. ಇಂತಹ ಬೃಹತ್ ಹೋರಾಟಗಳನ್ನು ಕಾಶ್ಮೀರ ಮಾದರಿಯಲ್ಲಿಯೇ ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ. ಭಾರತದ ಪ್ರಸ್ತುತ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌. ಎ. ಬೊಬ್ಡೆ ಅವರು ವಿವೇಚನಾಯುಕ್ತವಾಗಿ ಪ್ರತಿಕ್ರಿಯೆ ನೀಡಿದ್ದು ನ್ಯಾಯಮೂರ್ತಿಗಳಾದ ಪಿ. ವಿ. ರಮಣ, ಬಿ. ಆರ್. ಗವಾಯಿ, ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಅವರು ಮೂರು ಮುಖ್ಯ ಸಂಗತಿಗಳ ಬಗ್ಗೆ ತೀರ್ಪು ನೀಡುತ್ತ ಸರ್ಕಾರಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಅಕ್ಟೋಬರ್ 16 ರಂದೇ ಈ ಸಂಬಂಧ ಆದೇಶ ಹೊರಡಿಸಲಾಗಿತ್ತು. ಆದರೂ, ನಿರ್ಬಂಧಕಾಜ್ಞೆಗಳನ್ನು ಸರ್ಕಾರ ಹಿಂದಕ್ಕೆ ಪಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪಾರದರ್ಶಕತೆಯೇ ಉತ್ತರದಾಯಿ ಸಿದ್ಧಾಂತ ಆಗಿರುವ ಪ್ರಜಾಪ್ರಭುತ್ವದಲ್ಲಿ, ಅಂತಹ ಆದೇಶಗಳನ್ನು ರವಾನಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಅಹಂಕಾರದ ವರ್ತನೆಗಳನ್ನು ತಡೆಯಲು ಸಂವಿಧಾನ ಒದಗಿಸಿರುವ ಅತ್ಯಂತ ಪವಿತ್ರ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸರ್ಕಾರಕ್ಕೆ ಈ ತೀರ್ಪು ನೆನಪಿಸಿದೆ. ಇದೇ ವೇಳೆ ಪತ್ರಿಕಾ ಮುಖ್ಯಸ್ಥರ ಮೇಲೆ ಕತ್ತಿ ಝಳಪಿಸುವ ವರ್ತನೆ ಕಾನೂನುಬದ್ಧ ಅಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಸಿ ಆರ್‌ ಪಿ ಸಿ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ) ವಿಧಿಗಳ ಅಡಿಯಲ್ಲಿ ನಿರ್ಬಂಧಕಾಜ್ಞೆಗಳನ್ನು ಹೊರಡಿಸುವುದು ಮತ್ತು ಅಂತರ್ಜಾಲ ಬಳಕೆ ಮೇಲಿನ ನಿಷೇಧ ಹೇರುವುದು ಕಾನೂನುಬದ್ಧವಾಗಿ ಸಮರ್ಥನೀಯ ಅಲ್ಲ ಎಂದು ಕೂಡ ಅದು ಸ್ಪಷ್ಟಪಡಿಸಿದೆ. ಅಕ್ಷರಶಃ ಈ ಆದೇಶಗಳು ಪ್ರಜಾಪ್ರಭುತ್ವದ ಒಳಗಿನಿಂದ ಎದ್ದ ಕಿಡಿಗಳೇ ಆಗಿವೆ.

ನಮ್ಮದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆಪಟ್ಟರಷ್ಟೇ ಸಾಲದು. ಆದರೆ ದುರದೃಷ್ಟವಶಾತ್, ಕಾನೂನುಬದ್ಧ ಸಮರ್ಥನೀಯ ಪ್ರತಿಭಟನೆಗಳನ್ನು ಹತ್ತಿಕ್ಕುವ ನಾಯಕರ ಅಡಿಯಲ್ಲಿ ಪ್ರಜಾಪ್ರಭುತ್ವದ ಚೈತನ್ಯ ಕಳೆಗುಂದುತ್ತಿದೆ. 1861ರಲ್ಲಿ ನಿರ್ಬಂಧಕಾಜ್ಞೆಗಳನ್ನು ರೂಪಿಸಲಾಯಿತು. ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿ ಆಗುವುದನ್ನು ತಪ್ಪಿಸಲು 1973ರ ಭಾರತೀಯ ದಂಡ ಸಂಹಿತೆಯಲ್ಲಿಯೂ ಇದು ಕಾಣಿಸಿಕೊಂಡಿತು. ಇದೇ ವೇಳೆ ನಾಗರಿಕರ ಪ್ರತಿಭಟಿಸುವ ಸ್ವಾತಂತ್ರ್ಯ ಮತ್ತು ಅವರು ನಿಯಂತ್ರಣದಿಂದ ಹೊರಗುಳಿಯದಂತೆ ಹಾಗೂ ಸಮಾಜದ ಹಿತಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಇದರಲ್ಲಿ ವಿಫಲ ಆಗಿದ್ದರಿಂದಲೇ ನಿರ್ಬಂಧಕಾಜ್ಞೆಗಳು ಮತ್ತು ಲಾಠಿ ಪ್ರಹಾರದ ಮೂಲಕ ಇತ್ತೀಚೆಗೆ ರಕ್ತತರ್ಪಣ ಆಗಿದೆ. ಜನರ ಸಾಂವಿಧಾನಿಕ ಹಕ್ಕುಗಳನ್ನು ತೀವ್ರ ರೀತಿಯಲ್ಲಿ ಉಲ್ಲಂಘನೆ ಮಾಡಲಾಗಿದೆ. ಸೆಕ್ಷನ್ 144 ರ ಸಾಂವಿಧಾನಿಕ ಕಾನೂನುಬದ್ಧತೆಯನ್ನು ಪರಾಮರ್ಶೆಗೆ ಒಳಪಡಿಸಿದ ಸುಪ್ರೀಂ ಕೋರ್ಟ್ ಇದನ್ನು ಯಾವಾಗ ಮತ್ತು ಯಾವ ಆಧಾರದ ಮೇಲೆ ಬಳಸಬೇಕು ಎಂದು ಸೂಚನೆ ನೀಡಿದೆ.

ಸೆಕ್ಷನ್ 144 ಹೇರುವಾಗ ಸಂವಿಧಾನದ 19 ನೇ ಪರಿಚ್ಛೇದದ ಅಡಿಯಲ್ಲಿ ಜಾರಿಗೊಳಿಸಲಾದ ‘ಯುಕ್ತ ನಿರ್ಬಂಧಗಳ’ ಬಳಕೆಯನ್ನೂ ಕೋರ್ಟ್ ವಿವರಿಸಿದೆ. ಸೆಕ್ಷನ್ 144 ರ ಬಳಕೆ ನ್ಯಾಯಯುತ ಪರಿಶೀಲನೆಗೆ ಒಳಪಟ್ಟಿದೆಯೇ ಮತ್ತು ‘ಯುಕ್ತ ನಿರ್ಬಂಧಗಳ’ ಬಗ್ಗೆ ಸರಿಯಾದ ಕಾಳಜಿ ವಹಿಸಲಾಗಿದೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದೆ. ಇದನ್ನು 2016-17ರಲ್ಲಿಯೇ ವಿವರಿಸಲಾಗಿದೆ. ಆದರೆ ಸರ್ಕಾರಗಳು ಆ ಮಾರ್ಗಸೂಚಿ ಪಾಲಿಸಿರುವ ಯಾವುದೇ ಉದಾಹರಣೆ ಕಂಡು ಬಂದಿಲ್ಲ.

ಪೌರತ್ವ ಕಾಯ್ದೆಯ ತಿದ್ದುಪಡಿ ವೇಳೆ, 22 ಕೋಟಿ ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಟ್ವಿಟರ್ ಪ್ರಕಟಣೆ ಮೂಲಕ ಸೆಕ್ಷನ್ 144 ಪ್ರತಿಬಂಧಕಾಜ್ಞೆ ಹೊರಡಿಸಿರುವುದು ನಿರಂಕುಶ ಪ್ರಭುತ್ವದ ಒಂದು ಸ್ಪಷ್ಟ ಉದಾಹರಣೆ ಆಗಿದೆ. ಪ್ರತಿಯೊಂದು ಪ್ರತಿಭಟನೆ ಹಿಂಸಾತ್ಮಕ ಆಗಬಲ್ಲದು ಎಂಬ ನೆಪವೊಡ್ಡಿ ಸರ್ಕಾರ ನಿರ್ಬಂಧಕಾಜ್ಞೆಗಳನ್ನು ಹೊರಡಿಸಬಹುದೇ ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನೆ ಮಾಡಿದೆ. ಆಂಧ್ರಪ್ರದೇಶ ರಾಜಧಾನಿಯ ನಿವಾಸಿಗಳಿಗೆ ಸುಪ್ರೀಂ ಕೋರ್ಟ್‌ ತೀರ್ಪು ಅಷ್ಟೇನೂ ಅನಕೂಲಕರವಾಗದು. ಅಲ್ಲಿ ಸೊಕ್ಕಿನ ಸರ್ಕಾರಿ ಗೂಂಡಾಗಳು ಶಾಂತಿಯುತ ಹೋರಾಟದ ವಿರುದ್ಧ ಪ್ರತಿಬಂಧಕಾಜ್ಞೆ ಜಾರಿ ಮಾಡಿದ್ದಾರೆ, ಲಾಠಿ ಪ್ರಹಾರ ನಡೆಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ನಿಗ್ರಹಿಸಲು ಸೆಕ್ಷನ್ 144 ಸರ್ಕಾರಕ್ಕೆ ಅಸ್ತ್ರ ಆಗಬಾರದು ಎಂದು ಮೂವರು ಸದಸ್ಯರ ಸಾಂವಿಧಾನಿಕ ಪೀಠದ ತೀರ್ಪು ತಿಳಿಸಿದೆ. ಅಭಿವ್ಯಕ್ತಿ ಎಂಬುದು ಜನರ ಕಷ್ಟಗಳನ್ನು ಹೊರಹಾಕುವ ಕಿಂಡಿ ಇದ್ದಂತೆ ಎಂದು ಅದು ಸ್ಪಷ್ಟವಾಗಿ ಹೇಳಿದೆ. ಕಾನೂನು ಸುವ್ಯವಸ್ಥೆಗೆ ಅಪಾಯ ಒದಗಿದೆ ಎಂದು ತೋರಿದಾಗ ಮಾತ್ರ ನಿರ್ಬಂಧಕಾಜ್ಞೆಗಳನ್ನು ಹೊರಡಿಸಬೇಕು ಎಂಬುದು ಈ ಮೂಲಕ ಸ್ಪಷ್ಟ ಆಗಿದೆ. ವಿವೇಚನೆ ಇಲ್ಲದ ಮತ್ತು ವಿಚಿತ್ರ ಆದೇಶಗಳು ಸಮರ್ಥನೀಯ ಅಲ್ಲ. ಈ ಎಲ್ಲಾ ಆದೇಶಗಳು ಪರಾಮರ್ಶೆಗೆ ಒಳಪಟ್ಟಿರುತ್ತವೆ ಮತ್ತು ಅವುಗಳನ್ನು ಸಾರ್ವಜನಿಕವಾಗಿ ತಿಳಿಸಬೇಕು. ಇದರಿಂದಾಗಿ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಲು ಸಹಾಯ ಆಗುತ್ತದೆ. ಸುಪ್ರೀಂ ಕೋರ್ಟ್‌ನ ಈ ಆದೇಶಗಳು ನಿಜಕ್ಕೂ ಶ್ಲಾಘನೀಯ.

ಅಂಕಿಅಂಶಗಳು ಬಹಿರಂಗಪಡಿಸಿರುವ ಪ್ರಕಾರ, ಇರಾಕ್ ಮತ್ತು ಸುಡಾನ್ ಬಳಿಕ ಅಂತರ್ಜಾಲದ ಮೇಲೆ ನಿರ್ಬಂಧ ಹೇರುತ್ತಿರುವ ಮೂರನೇ ದೇಶ ಭಾರತ. ಇದರಿಂದಾಗಿ 10,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಅಂತರ್ಜಾಲ ಹಕ್ಕುಗಳಿಗೆ ಅಡ್ಡಿ ಅಥವಾ ನಿರ್ಬಂಧ ಹೇರುವುದು ನಾಗರಿಕರ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಮತ್ತು ಅಂತಹ ಯತ್ನಕ್ಕೆ ಮುಂದಾಗದಂತೆ ಕೋರ್ಟ್ ಗೆರೆ ಎಳೆದಿದೆ. 2017 ರ ನಿಯಮಗಳಲ್ಲಿ “ತಾತ್ಕಾಲಿಕವಾಗಿ” ಎಂಬ ಪದವನ್ನು ವ್ಯಾಖ್ಯಾನಿಸದೆ ಇರುವ ಲೋಪ ಸರಿಪಡಿಸಲು ನ್ಯಾಯಾಲಯ ಶಾಸಕಾಂಗಕ್ಕೆ ಸೂಚಿಸಿದೆ. ಅಲ್ಲಿಯವರೆಗೆ, ಇಂಟರ್ನೆಟ್ ಸೇವೆಗಳನ್ನು ಮರು ಆರಂಭಿಸಲು ಸರ್ಕಾರಕ್ಕೆ ತಿಳಿಸಿರುವುದು ಶ್ಲಾಘನೀಯ ವಿಚಾರ. ಗಣರಾಜ್ಯವಾಗಿ ಭಾರತ 70 ವರ್ಷಗಳ ಅಸ್ತಿತ್ವ ಹೊಂದಿದ್ದರೂ ಪ್ರಜಾಪ್ರಭುತ್ವದ ಆತ್ಮ ಏನೆಂಬುದನ್ನು ಒತ್ತಿ ಹೇಳುವುದು ಕೇಂದ್ರಕ್ಕಾಗಲೀ ರಾಜ್ಯ ಸರ್ಕಾರಗಳಿಗಾಗಲೀ ಸಾಧ್ಯ ಆಗಿಲ್ಲ. ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಮುಂದಾಗಿರುವ ನ್ಯಾಯಾಂಗದ ಕಾರ್ಯ ಮೆಚ್ಚುಗೆಗೆ ಪಾತ್ರವಾಗುವಂಥದ್ದು ಮತ್ತು ಭವಿಷ್ಯದ ಭರವಸೆಯ ದೀವಿಗೆ ಆಗಬಲ್ಲಂತಹುದು.

Please Publish it ASAP & provide LINK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.