ETV Bharat / bharat

ಪ್ರಿಯಾಂಕಾ ಗಾಂಧಿ ಜೊತೆ ಸ್ಕೂಟಿಯಲ್ಲಿ ತೆರಳಿದ್ದ ಮಾಲೀಕನಿಗೆ ಭಾರಿ ದಂಡ: ಕಾರಣ? - ಉತ್ತರ ಪ್ರದೇಶ ಕಾಂಗ್ರೆಸ್ ನಾಯಕನಿಗೆ ದಂಡ

ಮಾಜಿ ಐಪಿಎಸ್​ ಅಧಿಕಾರಿ ಎಸ್​.ಆರ್. ದರಪುರಿ ಅವರ ಕುಟುಂಬಸ್ಥರನ್ನು ಭೇಟಿಯಾಗಲು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಯಾಣಿಸಿದ್ದ ಸ್ಕೂಟಿ ಮಾಲೀಕನಿಗೆ ಟ್ರಾಫಿಕ್ ಪೊಲೀಸರು ಭಾರಿ ಪ್ರಮಾಣದ ದಂಡ ವಿಧಿಸಿದ್ದಾರೆ.

Priyanka takes ride on scooty, ಸ್ಕೂಟಿ ಮಾಲೀಕನಿಗೆ ಯುಪಿ ಪೊಲೀಸರಿಂದ ದಂಡ
ಸ್ಕೂಟಿ ಮಾಲೀಕನಿಗೆ ಯುಪಿ ಪೊಲೀಸರಿಂದ ದಂಡ
author img

By

Published : Dec 30, 2019, 8:22 AM IST

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಮಾಜಿ ಐಪಿಎಸ್​ ಅಧಿಕಾರಿ ಎಸ್​.ಆರ್.ದರಪುರಿ ಅವರ ಕುಟುಂಬಸ್ಥರನ್ನು ಭೇಟಿಯಾಗಲು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಕೂಟಿಯಲ್ಲಿ ತೆರಳಿದ್ದರು. ಇದೀಗ ಆ ಸ್ಕೂಟಿ ಮಾಲೀಕನಿಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಬಂಧನಕ್ಕೊಳಗಾದ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಮತ್ತೋರ್ವ ಪ್ರತಿಭಟನಾಕಾರ ಸದಾಫ್ ಜಾಫರ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಲು ಪ್ರಿಯಾಂಕಾ ಗಾಂಧಿ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಅವರಿಗೆ ತಡೆಯೊಡ್ಡಿದ್ದರು. ಘಟನೆ ವೇಳೆ ಉತ್ತರ ಪ್ರದೇಶದ ಪೊಲೀಸರು ನನ್ನ ಕುತ್ತಿಗೆ ಹಿಡಿದು ನೆಲಕ್ಕೆ ತಳ್ಳಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗಂಭೀರ ಆರೋಪ ಮಾಡಿದ್ದರು.

  • Lucknow: The Congress party worker on whose two wheeler Priyanka Gandhi Vadra travelled while going to meet family members of Former IPS officer SR Darapuri yesterday, has been challaned with a penalty of Rs 6100 for not wearing helmets. (File pic) pic.twitter.com/LArpmx31UJ

    — ANI UP (@ANINewsUP) December 29, 2019 " class="align-text-top noRightClick twitterSection" data=" ">

'ನಾನು ದಾರಪುರಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಯುಪಿ ಪೊಲೀಸರು ನನ್ನನ್ನು ತಡೆದರು. ಅವರು ನನ್ನ ಕುತ್ತಿಗೆ ಹಿಡಿದು ಬಲಪ್ರಯೋಗ ನಡೆಸಿದರು. ನಾನು ಪಕ್ಷದ ಕಾರ್ಯಕರ್ತರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗಲೂ ನನ್ನನ್ನು ಸುತ್ತುವರಿದಿದ್ದರು' ಎಂದು ಪ್ರಿಯಾಂಕಾ ತಿಳಿಸಿದ್ದರು.

ಪೊಲೀಸರು ತಡಯೊಡ್ಡಿದ ನಂತರ ಕಾಂಗ್ರೆಸ್ ನಾಯಕ ಧೀರಜ್ ಗುಜ್ಜರ್​ ಅವರ ಸ್ಕೂಟಿಯಲ್ಲಿ ಪ್ರಿಯಾಂಕಾ ತೆರಳಿದ್ದರು. ಈ ವೇಳೆ ಇಬ್ಬರೂ ಸವಾರರು ಹೆಲ್ಮೆಟ್​ ಧರಿಸದ ಕಾರಣ ಟ್ರಾಫಿಕ್ ಪೊಲೀಸರು 6,100 ರೂಪಾಯಿ ದಂಡ ವಿಧಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.