ವಾರಣಾಸಿ(ಉತ್ತರ ಪ್ರದೇಶ): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಅವರು ಇಂದು ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ(ಬಿಹೆಚ್ಯು) ಭೇಟಿ ನೀಡಲಿದ್ದಾರೆ.
ಬನಾರಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿರುವ ಪ್ರಿಯಾಂಕ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್.ಆರ್.ಸಿ ವಿರುದ್ಧ ಹೋರಾಡಿ ಜೈಲಿಗೆ ಸೇರಿದವರನ್ನ ಭೇಟಿಯಾಗಿ ಧೈರ್ಯ ತುಂಬಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಈ ಕಾಯ್ದೆ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡು ಮೃತಪಟ್ಟಿರುವ ಕುಟುಂಬಸ್ಥರನ್ನು ಭೇಟಿ ಮಾಡಲಿರುವ ಪ್ರಿಯಾಂಕ ವಾದ್ರ, ವಾರಣಾಸಿಯ ಗುಳೇರಿಯಾ ಕೋಟಿ,
ಗುಳೇರಿಯಾ ಘಾಟ್, ರಾಮ್ ಘಾಟ್ಗೆ ಭೇಟಿ ನೀಡಲಿದ್ದಾರೆ.