ಜಾರ್ಖಂಡ್/ಡುಮ್ಕಾ: ನಾಗರಿಕತ್ವ ತಿದ್ದುಪಡಿ ಕಾಯ್ದೆಯ ವಿಚಾರವಾಗಿ ನಡೆಯುತ್ತಿರುವ ಹಿಂಸಾಚಾರಗಳಿಗೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಮೌನವಾಗಿ ಬೆಂಬಲ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಜಾರ್ಖಂಡ್‌ನ ಡುಮ್ಕಾದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸರ್ಕಾರವು ದೇಶದ ವಿಶ್ವಾಸವನ್ನು ಬಲಪಡಿಸಿದೆ ಎಂದರು.
-
PM Modi: Congress & their allies are giving silent support to what is happening (incidents of violence over #CitizenshipAmendmentAct). These scenes are strengthening country's confidence that Modi, Parliament, & the government have saved the country by bringing the Act.#Jharkhand https://t.co/UDb7gDJg6S
— ANI (@ANI) December 15, 2019 " class="align-text-top noRightClick twitterSection" data="
">PM Modi: Congress & their allies are giving silent support to what is happening (incidents of violence over #CitizenshipAmendmentAct). These scenes are strengthening country's confidence that Modi, Parliament, & the government have saved the country by bringing the Act.#Jharkhand https://t.co/UDb7gDJg6S
— ANI (@ANI) December 15, 2019PM Modi: Congress & their allies are giving silent support to what is happening (incidents of violence over #CitizenshipAmendmentAct). These scenes are strengthening country's confidence that Modi, Parliament, & the government have saved the country by bringing the Act.#Jharkhand https://t.co/UDb7gDJg6S
— ANI (@ANI) December 15, 2019
ಭಾರತಕ್ಕೆ ಪಲಾಯನಗೊಂಡ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಮತ್ತು ನಿರಾಶ್ರಿತರಾಗಿ ಬದುಕುತ್ತಿದ್ದವರಿಗೆ ಗೌರವ ನೀಡಲು, ಸಂಸತ್ತಿನ ಉಭಯ ಸದನಗಳು ಈ ಕಾನೂನನ್ನು ಅಂಗೀಕರಿಸಿವೆ ಎಂದರು.
ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಅವರ ಮಿತ್ರಪಕ್ಷಗಳು ಅಸಭ್ಯತೆಯನ್ನು ಸೃಷ್ಟಿಸುತ್ತಿವೆ. ಪರೋಕ್ಷವಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿವೆ. ಅವರು ಧರಿಸಿರುವ ಬಟ್ಟೆಗಳಿಂದಲೇ ಹಿಂಸಾಚಾರ ಯಾರು ಸೃಷ್ಟಿಸುತ್ತಿದ್ದಾರೆ ಎಂಬುದನ್ನು ಗುರುತಿಸಬಹುದು ಎಂದರು.