ನವದೆಹಲಿ: ಕೋವಿಡ್ -19 ವಿರುದ್ಧದ ಹೋರಾಟದ ಭಾಗವಾಗಿ ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರು ರಾಷ್ಟ್ರಪತಿಗಳ ಎಸ್ಟೇಟ್ ಶಕ್ತಿ ಹಾತ್ ನಲ್ಲಿ ಬುಧವಾರ ಮುಖಗವಚಗಳನ್ನು ತಮ್ಮ ಕೈಯಾರೆ ಹೊಲಿದಿದ್ದಾರೆ. ಈ ಮಾಸ್ಕ್ಗಳನ್ನು ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ವಿವಿಧ ಆಶ್ರಯ ಮನೆಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಖಗವಚ ಹೊಲಿಯುವಾಗ ಪ್ರಥಮ ಮಹಿಳೆ ತಮ್ಮ ಮುಖವನ್ನು ಕೆಂಪು ಬಣ್ಣದ ಬಟ್ಟೆಯ ಮುಖಗವಚದಿಂದ ಮುಚ್ಚಿದ್ದರು. ಮುಖಗವಚಗಳನ್ನು ಹೊಲಿಯುವ ಮೂಲಕ, ಎಲ್ಲರೂ ಒಟ್ಟಾಗಿ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.
ಮುಖಗವಚ ಧರಿಸುವುದರ ಜೊತೆಗೆ ಜನರು ಸಾಮಾಜಿಕ ದೂರ ಮತ್ತು ಇತರ ಕ್ರಮಗಳನ್ನು ಅನುಸರಿಸಬೇಕು ಎಂದು ಕರೆ ನೀಡಿದ್ದಾರೆ. ಕೊರೊನಾ ಹರಡುವಿಕೆಯನ್ನು ತಡೆಯಲು ಸಾಮಾನ್ಯವಾಗಿ ಬಟ್ಟೆಯ ಮುಖವಾಡಗಳನ್ನೇ ಬಳಸಲಾಗುತ್ತದೆ. ಇವು ಮೂರು-ಪದರಗಳುಳ್ಳ ಸರ್ಜಿಕಲ್ ಮಾಸ್ಕ್ ಮತ್ತು ಎನ್ 95 ರೆಸ್ಪಿರೇಟರ್ಗಳನ್ನೊಳಗೊಂಡಿದೆ.