ವಿಶಾಖಪಟ್ಟಣ: ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಗರ್ಭಿಣಿಯನ್ನು 6 ಕಿ.ಮೀ. ದೂರ ಹೊತ್ತೊಯ್ದ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.
ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಮರದ ಕಂಬಕ್ಕೆ ಕಟ್ಟಿದ ಬಟ್ಟೆಯಿಂದ ಮಾಡಿದ ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಗರ್ಭಿಣಿಯನ್ನು ಕೊತವಲ್ಸಾ ಗ್ರಾಮದಿಂದ 6 ಕಿ.ಮೀ. ಅಂತರದಲ್ಲಿರುವ ಕೆಜೆ ಪುರಂ ಆಸ್ಪತ್ರೆಗೆ ಹೊತ್ತೊಯ್ಯಲಾಯಿತು.
ಮಹಿಳೆ ಕೆಜೆ ಪುರಂ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ಸದ್ಯ ಮಹಿಳೆ ಹಾಗೂ ಮಗು ಆರೋಗ್ಯವಾಗಿದ್ದಾರೆ.