ಇಂದೋರ್: ಸರ್ಕಾರಿ ಅಧಿಕಾರಿಗೆ ಸಾರ್ವಜನಿಕವಾಗಿ ಬ್ಯಾಟ್‌ನಿಂದ ಹೊಡೆದು ಜೈಲು ಸೇರಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯಾ ಇಂದು ಬಿಡುಗಡೆಯಾದರು. ಮತ್ತೊಮ್ಮೆ ಬ್ಯಾಟ್ ಹಿಡಿಯುವಂತೆ ಸನ್ನಿವೇಶ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದೂ ಹೇಳಿದರು.
ನಿನ್ನೆ ಆಕಾಶ್ಗೆ ಭೋಪಾಲ್ ಕೋರ್ಟ್ ಜಾಮೀನು ಮಂಜೂರು ಮಾಡಿದ್ದರಿಂದ ಅವರು ಇಂದು ಜೈಲಿನಿಂದ ಹೊರಬಂದರು. ಪಕ್ಷದ ಕಾರ್ಯಕರ್ತರು ಅವರಿಗೆ ಸ್ವಾಗತ ಕೋರಿದರು. ಆನಂತರ ತಮ್ಮ ಮನದಾಳ ಬಿಚ್ಚಿಟ್ಟ ಆಕಾಶ್, ಸಾರ್ವಜನಿಕ ಹಿತಾಸಕ್ತಿಯಿಂದ ಈ ಕೆಲಸ ಮಾಡಿದ್ದರಿಂದ ನನಗೆ ಪಾಪಪ್ರಜ್ಞೆ ಇಲ್ಲ. ಜನರ ಹಿತಕ್ಕಾಗಿ ಕೆಲಸ ಮುಂದುವರೆಸುವೆ. ಮತ್ತೊಮ್ಮೆ ಬ್ಯಾಟ್ ಹಿಡಿಯುವ ಅವಕಾಶ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು ಹೇಳಿದ್ದಾರೆ.
-
#WATCH Madhya Pradesh: Akash Vijayvargiya, BJP MLA and son of senior BJP leader Kailash Vijayvargiya, thrashes a Municipal Corporation officer with a cricket bat, in Indore. The officers were in the area for an anti-encroachment drive. pic.twitter.com/AG4MfP6xu0
— ANI (@ANI) June 26, 2019 " class="align-text-top noRightClick twitterSection" data="
">#WATCH Madhya Pradesh: Akash Vijayvargiya, BJP MLA and son of senior BJP leader Kailash Vijayvargiya, thrashes a Municipal Corporation officer with a cricket bat, in Indore. The officers were in the area for an anti-encroachment drive. pic.twitter.com/AG4MfP6xu0
— ANI (@ANI) June 26, 2019#WATCH Madhya Pradesh: Akash Vijayvargiya, BJP MLA and son of senior BJP leader Kailash Vijayvargiya, thrashes a Municipal Corporation officer with a cricket bat, in Indore. The officers were in the area for an anti-encroachment drive. pic.twitter.com/AG4MfP6xu0
— ANI (@ANI) June 26, 2019
ನಾನು ಸಾಕಷ್ಟು ಯೋಚಿಸಿ, ಜವಾಬ್ದಾರಿಯಿಂದಲೇ ಆ ಕೃತ್ಯ ಎಸಗಿದೆ. ಇಲ್ಲವಾಗಿದ್ದರೆ ಮಹಿಳೆಯ ಘನತೆಗೆ ಧಕ್ಕೆಯಾಗುತ್ತಿತ್ತು. ಬಿಜೆಪಿಯಲ್ಲಿ ನಾವು ಕಲಿತಿದ್ದು, ಮೊದಲು ಮನವಿ, ಆನಂತರ ದಾಳಿ ಎಂಬ ಪಾಠವನ್ನು ಎಂದು ಸಮರ್ಥಿಸಿಕೊಂಡಿದ್ದಾರೆ.
ಇಂದೋರ್-3 ವಿಧಾನಸಭಾ ಕ್ಷೇತ್ರದ ಶಾಸಕ ಆಕಾಶ್, ಬಿಜೆಪಿ ನಾಯಕ ಕೈಲಾಶ್ ವಿಜಯ್‌ವರ್ಗಿಯಾ ಅವರ ಪುತ್ರ. ಕಳೆದ ಬುಧವಾರ ಆಕಾಶ್, ಅಧಿಕಾರಿಯೊಬ್ಬರ ಮೇಲೆ ಬ್ಯಾಟ್‌ನಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿ ವಿಜಯ್‌ವರ್ಗಿಯಾ ಜೈಲು ಸೇರಿದ್ದರು.