ಲಖನೌ: ದೇಶದಲ್ಲಿ ನಕಲಿ ನೋಟುಗಳು ಚಲಾವಣೆಯಲ್ಲಿದ್ದು, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
"ಹಳೇ ನೋಟುಗಳು ಅಮಾನ್ಯೀಕರಣವಾದ ನಾಲ್ಕು ವರ್ಷಗಳ ನಂತರವೂ ನಕಲಿ ನೋಟುಗಳು ಇವೆ. ಭ್ರಷ್ಟಾಚಾರ ಹೆಚ್ಚಾಗಿದೆ. ಕಪ್ಪು ಹಣದ ಲೆಕ್ಕ ಇಲ್ಲ. ಜನರ ಖಾತೆಗೆ 15 ಲಕ್ಷ ರೂಪಾಯಿ ಬರಲಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
-
‘नोटबंदी’ के चार साल
— Akhilesh Yadav (@yadavakhilesh) November 8, 2020 " class="align-text-top noRightClick twitterSection" data="
नक़ली नोट हैं बरक़रार
बढ़ा घोटाला-भ्रष्टाचार
काला लेनदेन बेहिसाब
न कालाधन का हिसाब
न खाते में ‘पंद्रह लाख’
जनता देगी इन्हें जवाब pic.twitter.com/HynuGSmc08
">‘नोटबंदी’ के चार साल
— Akhilesh Yadav (@yadavakhilesh) November 8, 2020
नक़ली नोट हैं बरक़रार
बढ़ा घोटाला-भ्रष्टाचार
काला लेनदेन बेहिसाब
न कालाधन का हिसाब
न खाते में ‘पंद्रह लाख’
जनता देगी इन्हें जवाब pic.twitter.com/HynuGSmc08‘नोटबंदी’ के चार साल
— Akhilesh Yadav (@yadavakhilesh) November 8, 2020
नक़ली नोट हैं बरक़रार
बढ़ा घोटाला-भ्रष्टाचार
काला लेनदेन बेहिसाब
न कालाधन का हिसाब
न खाते में ‘पंद्रह लाख’
जनता देगी इन्हें जवाब pic.twitter.com/HynuGSmc08
2016 ರಲ್ಲಿ ಕೇಂದ್ರದ ನೋಟು ನಿಷೇಧವು ಕಪ್ಪು ಹಣವನ್ನು ಕಡಿಮೆ ಮಾಡಲು, ತೆರಿಗೆ ಅನುಸರಣೆ ಹೆಚ್ಚಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಅಖಿಲೇಶ್ ಯಾದವ್ ಈಗ ಪ್ರಶ್ನೆ ಮಾಡಿದ್ದಾರೆ.
ನವೆಂಬರ್ 8, 2016 ರಂದು ಪ್ರಧಾನಿ ಮೋದಿ 500 ಮತ್ತು 1,000 ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರು.