ETV Bharat / bharat

ಹಸಿರು ಸಾರಿಗೆ ವಲಯದಿಂದ 15 ದಶಲಕ್ಷ ಉದ್ಯೋಗ ಸೃಷ್ಟಿ : ಐಎಲ್ಒ - ಹಸಿರು ಸಾರಿಗೆ ವಲಯ

ವಿಶ್ವಾದ್ಯಂತ 10 ಮಿಲಿಯನ್ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯುನಿಸೆಫ್ ವ್ಯಾಪ್ತಿಯಲ್ಲಿ 2.9 ಮಿಲಿಯನ್ ಉತ್ಪಾದನೆಯಾದರೆ, ಅದರಲ್ಲಿ ತಯಾರಿಸಿದ ಎಲ್ಲ ವಾಹನಗಳಲ್ಲಿ 50 ಪ್ರತಿಶತ ವಾಹನಗಳು ವಿದ್ಯುತ್ ಚಾಲಿತವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

greening transport sector
ಕೋವಿಡ್-19 ನಂತರ ಹಸಿರು ಸಾರಿಗೆ ವಲಯದಿಂದ 15 ದಶಲಕ್ಷ ಉದ್ಯೋಗ ಸೃಷ್ಟಿ
author img

By

Published : May 23, 2020, 4:57 PM IST

ಹೈದರಾಬಾದ್: ಸಾರಿಗೆ ಕ್ಷೇತ್ರದಲ್ಲಿ ಪರಿವರ್ತನೆಗೆ ಪೂರಕವಾದ ಬಂಡವಾಳ ಹೂಡಿಕೆಯು ಕೊವಿಡ್ ಚೇತರಿಕೆಗೆ ಎಡೆ ಮಾಡಿಕೊಡುವುದಲ್ಲದೇ ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ದೇಶಗಳು ಹಸಿರು, ಆರೋಗ್ಯಕರ ಆರ್ಥಿಕತೆಗಳತ್ತ ಸಾಗಲು ಸಹಾಯ ಮಾಡುತ್ತದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಯುರೋಪ್ ಯುಎನ್ ಆರ್ಥಿಕ ಆಯೋಗದ ವರದಿ ತಿಳಿಸಿದೆ.

ವಿಶ್ವಾದ್ಯಂತ 10 ಮಿಲಿಯನ್ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬಹುದೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯುನಿಸೆಫ್ ವ್ಯಾಪ್ತಿಯಲ್ಲಿ 2.9 ಮಿಲಿಯನ್ ಉತ್ಪಾದನೆಯಾದರೆ, ಅದರಲ್ಲಿ ತಯಾರಿಸಿದ ಎಲ್ಲ ವಾಹನಗಳಲ್ಲಿ 50 ಪ್ರತಿಶತ ವಾಹನಗಳು ವಿದ್ಯುತ್ ಚಾಲಿತವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚುವರಿಯಾಗಿ, ಯುನಿಸೆಫ್ ದೇಶಗಳು ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆಯನ್ನು ದ್ವಿಗುಣಗೊಳಿಸಿದರೆ ವಿಶ್ವದಾದ್ಯಂತ ಸುಮಾರು 5 ಮಿಲಿಯನ್ ಹೊಸ ಉದ್ಯೋಗವನ್ನು ಸೃಷ್ಟಿಸಬಹುದು. ಅಲ್ಲದೇ ಯುನಿಸೆಫ್ ಪ್ರದೇಶ ಒಂದರಲ್ಲೇ ಯುನೆಸ್ ಪ್ರದೇಶದಲ್ಲಿ ಸುಮಾರು 2.5 ಮಿಲಿಯನ್ ಸೃಷ್ಟಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಾರಿಗೆಯ ವಲಯದ ಹೊರತಾದ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸುವ ಇತರ ಅಂಶಗಳೆಂದರೆ, ಸರಕು ಮತ್ತು ಸೇವೆಗಳ ಮೇಲೆ ಹೆಚ್ಚು ವೆಚ್ಚಮಾಡುವುದು ಇದರಿಂದ ತೈಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಹಾಗೆಯೇ ಇತರ ಕ್ರಮಗಳೆಂದರೆ ಉತ್ಪಾದನೆ ಮತ್ತು ವಿದ್ಯುತ್ ಬಳಕೆಗೆ ಸಂಬಂಧಿಸಿದ್ದಾಗಿದೆ. ಖಾಸಗಿ ಪ್ರಯಾಣಿಕ ವಾಹನಗಳ ವಿದ್ಯುದೀಕರಣ ಮತ್ತು ಸರಕು ಸಾಗಣೆಯಿಂದಾಗಿ ಉದ್ಯೋಗಗಳನ್ನು ಸೃಷ್ಟಿಸಬಹುದು ಅದರಲ್ಲಿ ವಿಶೇಷವಾಗಿ ನವೀಕರಿಸಬಹುದಾದ ವಿದ್ಯುತ್ ಮೂಲಗಳಿಂದ ಬಂದರೆ ಇದು ಸಾಧ್ಯವಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ರೀತಿಯ ಸಾರಿಗೆ ಉಪಕ್ರಮಗಳಿಂದ ಬಳಸಲ್ಪಡುವ ಹಸಿರು ಸಾರಿಗೆ ವ್ಯವಸ್ಥೆಗಳು ಅನಿಲ ಹೊರಸೂಸುವಿಕೆ, ಗಾಳಿ ಮತ್ತು ಶಬ್ದ ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ. ಅಲ್ಲದೆ ಇದು ಕಡಿಮೆ ರಸ್ತೆ ಅಪಘಾತಗಳಿಗೆ ಕಾರಣವಾಗಬಹುದು ಎಂದು ವರದಿ ಯಲ್ಲಿ ತಿಳಿಸಲಾಗಿದೆ. ಸಾರಿಗೆ ವಲಯದ ಹಸಿರೀಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ಸಮಗ್ರ ನೀತಿಗಳನ್ನು ಅನುಷ್ಠಾನಗೊಳಿಸಲು ವರದಿಯು ಶಿಫಾರಸು ಮಾಡಲಾಗಿದೆ. ಇದರಲ್ಲಿ ಕೌಶಲ್ಯ ಅಭಿವೃದ್ಧಿ, ಸಾಮಾಜಿಕ ರಕ್ಷಣೆ, ಕಾರ್ಮಿಕ ಮಾರುಕಟ್ಟೆ ನೀತಿಗಳು ಮತ್ತು ಸಾಮಾಜಿಕ ಸಂವಾದ ಮತ್ತು ಕೆಲಸದಲ್ಲಿ ಮೂಲ ಹಕ್ಕುಗಳ ರಕ್ಷಣೆ ಸೇರಿದಂತೆ ಎಲ್ಲವೂ ಒಳಗೊಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.