ETV Bharat / bharat

ಆಡಳಿತ ನಿರ್ವಹಣೆಗೆ ತಂತ್ರಜ್ಞಾನದ ಮೊರೆ ಹೋದ ಮಹಾ ರಾಜಕಾರಣಿಗಳು

ಪ್ರಸ್ತುತ ಸಮಯದಲ್ಲಿ ರಾಜಕಾರಣಿಗಳು ಮತದಾರರೊಂದಿಗೆ ಕಾರ್ಪೊರೇಟ್ ಶೈಲಿಯಲ್ಲಿ ಸಂಪರ್ಕ ಸಾಧಿಸುವುದು ಅನಿವಾರ್ಯವಾಗಿದೆ. ಮುಂಚೆ ನಡೆಯುತ್ತಿದ್ದ ಮುಖಾಮುಖಿ ಸಭೆಗಳು ಈಗ ನಿಂತು ಹೋಗಿದ್ದು, ವರ್ಚ್ಯುವಲ್​ ಮೀಟಿಂಗ್​ಗಳು ಈಗ ಸಾಮಾನ್ಯವಾಗುತ್ತಿವೆ ಎನ್ನುತ್ತಾರೆ ಮಹಾರಾಷ್ಟ್ರ ಕಾಂಗ್ರೆಸ್​ ಸೋಶಿಯಲ್ ಮೀಡಿಯಾ ಸೆಲ್ ಮುಖ್ಯಸ್ಥ ಅಭಿಜೀತ್ ಸಪಕಾಳ.

author img

By

Published : Apr 30, 2020, 2:28 PM IST

Politicians log into technology to beat lockdown hurdles

ಮುಂಬೈ: ಲಾಕ್​ಡೌನ್​ನಿಂದ ಜೀವನ ವಿಧಾನವೇ ಬದಲಾಗುತ್ತಿರುವ ಈ ದಿನಗಳಲ್ಲಿ ಮಹಾರಾಷ್ಟ್ರ ರಾಜಕಾರಣಿಗಳು ಹಾಗೂ ಸಚಿವರು ಸಹ ಕಾರ್ಯಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುತ್ತಿದ್ದಾರೆ. ಲಾಕ್​ಡೌನ್​ ನಿರ್ಬಂಧಗಳಿಂದಾಗಿ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಸಂಚರಿಸಲು ಸಾಧ್ಯವಾಗದ್ದರಿಂದ ಈಗ ತಂತ್ರಜ್ಞಾನದ ಸಹಾಯದಿಂದ ಕ್ಷೇತ್ರದ ಜನತೆಯೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಆನ್ಲೈನ್​ನಲ್ಲೇ ಜನಸಭೆಗಳನ್ನು ನಡೆಸಲು ಇವರೆಲ್ಲ ಮುಂದಾಗಿದ್ದಾರೆ.

ಪ್ರಸ್ತುತ ಸಮಯದಲ್ಲಿ ರಾಜಕಾರಣಿಗಳು ಮತದಾರರೊಂದಿಗೆ ಕಾರ್ಪೊರೇಟ್ ಶೈಲಿಯಲ್ಲಿ ಸಂಪರ್ಕ ಸಾಧಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಮಹಾರಾಷ್ಟ್ರ ಕಾಂಗ್ರೆಸ್​ ಸೋಶಿಯಲ್ ಮೀಡಿಯಾ ಸೆಲ್ ಮುಖ್ಯಸ್ಥ ಅಭಿಜೀತ್ ಸಪಕಾಳ. ಮುಂಚೆ ನಡೆಯುತ್ತಿದ್ದ ಮುಖಾಮುಖಿ ಸಭೆಗಳು ಈಗ ನಿಂತು ಹೋಗಿದ್ದು, ವರ್ಚ್ಯುವಲ್​ ಮೀಟಿಂಗ್​ಗಳು ಈಗ ಸಾಮಾನ್ಯವಾಗುತ್ತಿವೆ.

ವರ್ಚ್ಯುವಲ್​ ಮೀಟಿಂಗ್ ನಡೆಸಲು ಕಾರ್ಪೊರೇಟ್​ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಝೂಮ್​ ಆ್ಯಪ್​​, ರಾಜಕಾರಣಗಳಿಗೂ ಈಗ ಅತ್ಯಂತ ಇಷ್ಟವಾಗಿದೆ. ಕಾಂಗ್ರೆಸ್​ ಪಕ್ಷ ಝೂಮ್​ ಆ್ಯಪ್​ ಸಬ್​ಸ್ಕ್ರೈಬ್​ ಮಾಡಿದ್ದು, ಬಳಕೆಯ ಅನುಮತಿ ಪಡೆದುಕೊಂಡಿದೆ. ಸಬ್​ಸ್ಕ್ರೈಬ್​ ಮಾಡದಿದ್ದರೆ ಕೇವಲ 40 ನಿಮಿಷ ಮಾತ್ರ ಮೀಟಿಂಗ್​ ನಡೆಸಬಹುದು ಹಾಗೂ ಸುರಕ್ಷತೆಗೆ ಅಪಾಯ ಬರಬಹುದು ಎಂದು ಅಭಿಜೀತ್ ಸಪಕಾಳ ಹೇಳಿದರು.

ವಿಡಿಯೋ ಕಾನ್ಫರೆನ್ಸಿಂಗ್​ ಹೊಸ ಯುಗದ ಸಂಪರ್ಕ ಮಾಧ್ಯಮವಾಗಿದ್ದು, ಬಳಸಲು ಅತಿ ಸುಲಭವೂ ಆಗಿದೆ. ಬಳಕೆಯಲ್ಲಿ ಏನಾದರೂ ಸಮಸ್ಯೆಗಳಾದಲ್ಲಿ ನನ್ನ ಪುತ್ರಿ ಬಗೆಹರಿಸುತ್ತಾಳೆ ಎಂದು ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ಅಶೋಕ ಚವಾಣ್​ ಹೇಳಿದ್ದಾರೆ.

ಒಟ್ಟಾರೆಯಾಗಿ ಲಾಕ್​ಡೌನ್​ ನಿರ್ಬಂಧದಲ್ಲಿ ನೂತನ ಸಂವಹನ ಮಾಧ್ಯಮಗಳ ಬಳಕೆ ರಾಜಕಾರಣಿಗಳಿಗೆ ಅನಿವಾರ್ಯವಾಗಿದೆ. ಕ್ಷೇತ್ರದ ಜನತೆ, ಅಧಿಕಾರಿಗಳು ಅಥವಾ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸುವುದು ಹೀಗೆ ಎಲ್ಲದಕ್ಕೂ ಆ್ಯಪ್​ ಬಳಕೆ ಸಾಮಾನ್ಯವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.