ETV Bharat / bharat

ಚೆಕ್​ ಪೋಸ್ಟ್​​ ಬಳಿ ಕೋಟಿ ರೂ. ನಗದು ವಶಪಡಿಸಿಕೊಂಡ ಪೊಲೀಸರು! - ಚೆಕ್​ ಪೋಸ್ಟ್​​ ಬಳಿ 1 ಕೋಟಿ ರೂ ನಗದು ವಶಪಡಿಸಿಕೊಂಡ ಪೊಲೀಸರು

ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಕ್ರಮವಾಗಿ ಹಣದ ಹೊಳೆ ಹರಿಯಲು ಶುರುವಾಗಿದೆ.

Bihar news
Bihar news
author img

By

Published : Oct 6, 2020, 4:54 PM IST

ದರ್ಭಾಂಗ್(ಬಿಹಾರ): ಇಲ್ಲಿನ ಹನುಮಾನ್​ ನಗರ ಚೆಕ್​ ಪೋಸ್ಟ್​​ ಬಳಿ ತಪಾಸಣೆ ನಡೆಸಿರುವ ಪೊಲೀಸರು 1 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ. ಸಮಸ್ತಿಪುರದಿಂದ ಜಯನಗರದ ಕಡೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬನ ಬಳಿ ಇಷ್ಟೊಂದು ಪ್ರಮಾಣದ ಹಣ ದೊರೆತಿದೆ. ಇದೀಗ ಆತನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬಿಹಾರದಲ್ಲಿ ಚುನಾವಣೆ ಘೋಷಣೆಯಾಗಿರುವ ಕಾರಣ ಬೇನಾಮಿ ಹಣ ಹೆಚ್ಚಿನ ಪ್ರಮಾಣದಲ್ಲಿ ಹರಿದಾಡುತ್ತಿದೆ. ಈ ರೀತಿಯ ಅಕ್ರಮ ಹಣದ ಹರಿವಿನ ನಿಯಂತ್ರಣಕ್ಕೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

243 ಮತ ಕ್ಷೇತ್ರಗಳ ಬಿಹಾರ ಅಸೆಂಬ್ಲಿ ಚುನಾವಣೆಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್​ 28, ನವೆಂಬರ್​ 3 ಹಾಗೂ 7ರಂದು ವೋಟಿಂಗ್‌ ನಿಗದಿಯಾಗಿದೆ. ಇದರ ಫಲಿತಾಂಶ ನವೆಂಬರ್​ 10ರಂದು ಹೊರಬೀಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.