ಇಂದೋರ್(ಮಧ್ಯಪ್ರದೇಶ): ಇಲ್ಲಿನ ಪೊಲೀಸರು ಲಾಕ್ಡೌನ್ ನಡುವೆಯೂ ಮನೆಯಿಂದ ಹೊರಬರುವ ಜನರನ್ನು ನಿಯಂತ್ರಿಸಲು ವಿಭಿನ್ನ ಉಪಾಯ ಹೆಣೆದಿದ್ದಾರೆ.
ದೇಶದಲ್ಲಿ ಲಾಕ್ಡೌನ್ ಇದ್ದರೂ, ಪೊಲೀಸರು ಸ್ಥಳದಿಂದ ಗೈರಾದ ತಕ್ಷಣ ಜನರು ಬೀದಿಗಿಳಿಯುತ್ತಿದ್ದಾರೆ. ಹೀಗಾಗಿ ಇಂದೋರ್ನ ವಿಜಯ ನಗರ ಪೊಲೀಸರು ಜನರನ್ನು ಸರಿದಾರಿಗೆ ತರಲು ರಾತ್ರಿಯಲ್ಲಿ ದೆವ್ವಗಳಾಗಿ ತಿರುಗಾಡುತ್ತಿದ್ದಾರೆ.
ಹೌದು ಇಂದೋರ್ನ ಕೆಲ ಬೀದಿಗಳಲ್ಲಿ ಪೊಲೀಸರು ರಾತ್ರಿ ವೇಳೆ ದೆವ್ವಗಳ ವೇಷ ಹಾಕಿ ಜನರಲ್ಲಿ ಬೀದಿಗೆ ಬರದಂತೆ ಮನವಿ ಮಾಡುತ್ತಿದ್ದಾರೆ. ಈ ಮೂಲಕ ಕೊರೊನಾದಿಂದ ಜಾಗೃತರಾಗಿ ಮನೆಯಲ್ಲೇ ಉಳಿಯುವಂತೆ ಜನರಿಗೆ ಪರಿಣಾಮಕಾರಿ ಸಂದೇಶ ನೀಡುತ್ತಿದ್ದಾರೆ.