ETV Bharat / bharat

ವಿಷಕಾರಿ ಮದ್ಯ ಸೇವಿಸಿ 6 ಮಂದಿ ಸಾವು: ಹಲವರ ಸ್ಥಿತಿ ಗಂಭೀರ - ಅಕ್ರಮವಾಗಿ ಮನೆ ಮನೆಗೆ ಮದ್ಯ ಮಾರಾಟ

ವಿಷದ ಮದ್ಯ ಸೇವಿಸಿ ಅಸ್ವಸ್ಥಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ವಿಷಕಾರಿ ಮದ್ಯ ಸೇವಿಸಿ 6 ಮಂದಿ ಸಾವು
ವಿಷಕಾರಿ ಮದ್ಯ ಸೇವಿಸಿ 6 ಮಂದಿ ಸಾವು
author img

By

Published : Jul 31, 2020, 7:30 AM IST

ಅಮೃತಸರ( ಪಂಜಾಬ್​): ವಿಷಕಾರಿ ಮದ್ಯ ಸೇವಿಸಿ ಕನಿಷ್ಠ ಆರು ಮಂದಿ ಸಾವನ್ನಪ್ಪಿರುವ ಘಟನೆ ಪಂಜಾಬ್​​​ನ ತಾರ್ಸಿಕಾ ಪೊಲೀಸ್ ಠಾಣೆ ವ್ಯಾಪ್ತಿಯ ಮುಚಾಲ್ ಗ್ರಾಮದಲ್ಲಿ ನಡೆದಿದೆ.

ಮದ್ಯ ಸೇವಿಸಿ ಅಸ್ವಸ್ಥಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಮದ್ಯ ಕುಡಿದವರೆಲ್ಲ ಬಡವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮದ ಅನೇಕ ಮನೆಗಳಲ್ಲಿ ಈ ಮದ್ಯ ಮಾರಾಟವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಅಕ್ರಮವಾಗಿ ಮನೆ ಮನೆಗೆ ಮದ್ಯ ಮಾರಾಟ ಮಾಡುವ ಗ್ಯಾಂಗ್​ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ. ಪೊಲೀಸ್​ ಇಲಾಖೆ ನಿರ್ಲಕ್ಷ್ಯವೇ ಇಷ್ಟಕ್ಕೆಲ್ಲ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.