ETV Bharat / bharat

ಜಲಿಯನ್​ ವಾಲಾಬಾಗ್ ಹತ್ಯಾಕಾಂಡಕ್ಕೆ 101 ವರ್ಷ; ಪ್ರಧಾನಿಯಿಂದ ಹುತಾತ್ಮರ ಸ್ಮರಣೆ

''ಜಲಿಯನ್ ವಾಲಾಬಾಗ್ ದುರಂತದಲ್ಲಿ ನಿರ್ದಯವಾಗಿ ಕೊಲ್ಲಲ್ಪಟ್ಟ ಹುತಾತ್ಮರಿಗೆ ನಾನು ನಮಸ್ಕರಿಸುತ್ತೇನೆ. ಅವರ ಧೈರ್ಯ, ತ್ಯಾಗವನ್ನು ನಾವೆಂದಿಗೂ ಮರೆಯುವುದಿಲ್ಲ''.

pm-remembers-martyrs-of-jallianwalabagh-massacre
ಪ್ರಧಾನಿಯಿಂದ ಹುತಾತ್ಮರ ಸ್ಮರಣೆ
author img

By

Published : Apr 13, 2020, 11:01 AM IST

Updated : Apr 13, 2020, 11:31 AM IST

ನವದೆಹಲಿ: 1919 ರಲ್ಲಿ ಪಂಜಾಬ್ ಅಮೃತಸರದಲ್ಲಿ ನಡೆದ ಅತ್ಯಂತ ಘೋರ ಎನ್ನಲಾದ ಜಲಿಯನ್​ ವಾಲಾಬಾಗ್ ಹತ್ಯಾಕಾಂಡದ ಹುತಾತ್ಮರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದು, ಅವರ ಶೌರ್ಯವು ಭಾರತೀಯರಿಗೆ ಸ್ಫೂರ್ತಿ ಎಂದು ಕೊಂಡಾಡಿದ್ದಾರೆ.

  • I bow to those martyrs who were killed mercilessly in Jallianwala Bagh on this day. We will never forget their courage and sacrifice. Their valour will inspire Indians for the years to come. pic.twitter.com/JgDwAoWkAy

    — Narendra Modi (@narendramodi) April 13, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ, "ಜಲಿಯನ್ ವಾಲಾಬಾಗ್ ದುರಂತದಲ್ಲಿ ನಿರ್ದಯವಾಗಿ ಕೊಲ್ಲಲ್ಪಟ್ಟ ಹುತಾತ್ಮರಿಗೆ ನಾನು ನಮಸ್ಕರಿಸುತ್ತೇನೆ. ಅವರ ಧೈರ್ಯ, ತ್ಯಾಗವನ್ನು ನಾವೆಂದಿಗೂ ಮರೆಯುವುದಿಲ್ಲ" ಎಂದಿದ್ದಾರೆ.

ನಿರ್ದಯಿ ಹತ್ಯಾಕಾಂಡದ ಆ ದಿನ:

1919 ಏಪ್ರಿಲ್​​​ 13 ರಂದು ಸುಗ್ಗಿಯ ಬೈಸಾಖಿ ಹಬ್ಬಾಚರಿಸಲು ಸಾವಿರಾರು ಭಾರತೀಯರು ಪಂಜಾಬ್​​ನ ಅಮೃತಸರದ ಜಲಿಯನ್​ ವಾಲಾಬಾಗ್‌ ಪಾರ್ಕ್​​ನಲ್ಲಿ ಸೇರಿದ್ದರು. ಈ ವೇಳೆ ಬ್ರಿಟೀಷ್ ಜನರಲ್​ ಡಯರ್,​ ನೆರೆದಿದ್ದ ಜನರ ಮೇಲೆ ತನ್ನ ಬಂದೂಕಿನಿಂದ ಗುಂಡಿನ ಮಳೆಗರೆದನು. ಈ ಘಟನೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಭಾರತೀಯರು ಹುತಾತ್ಮರಾದರು. ಸಾವಿರಾರು ಮಂದಿ ಗಾಯಗೊಂಡರು. ಇದು ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ನಿರ್ದಯಿ ಹತ್ಯಾಕಾಂಡ.

Last Updated : Apr 13, 2020, 11:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.