ETV Bharat / bharat

ಇಂದು-ನಾಳೆ ತವರು ರಾಜ್ಯ ಗುಜರಾತ್​​ನಲ್ಲಿ ನಮೋ... ಪ್ರಮುಖ ಯೋಜನೆಗಳಿಗೆ ಚಾಲನೆ!

ಕೊರೊನಾ ಮಹಾಮಾರಿ ನಂತರ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ತವರು ರಾಜ್ಯ ಗುಜರಾತ್​ ಪ್ರವಾಸ ಕೈಗೊಳ್ಳುತ್ತಿದ್ದು, ಇಂದು ಮತ್ತು ನಾಳೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

PM on 2-day Gujarat trip
PM on 2-day Gujarat trip
author img

By

Published : Oct 30, 2020, 3:48 AM IST

Updated : Oct 31, 2020, 2:54 PM IST

ಅಹಮದಾಬಾದ್​​: ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತು ನಾಳೆ ತವರು ರಾಜ್ಯ ಗುಜರಾತ್​​ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಎರಡು ದಿನಗಳ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆವಾಡಿಯಾ ಸಮಗ್ರ ಅಭಿವೃದ್ಧಿ ಭಾಗವಾಗಿ ಇಂದು ಮತ್ತು ನಾಳೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಏಕ್ತಾ ಕ್ರೂಸ್‌ ಸೇವೆ, ಮಕ್ಕಳ ನ್ಯೂಟ್ರಿಷನ್ ಪಾರ್ಕ್ ಉದ್ಘಾಟನೆಯೂ ಸೇರಿಕೊಂಡಿವೆ. ಇದರ ಜತೆಗೆ ಸರ್ದಾರ್‌ ವಲ್ಲಭಭಾಯಿ ಪಟೇಲರ ಕಂಚಿನ ಪ್ರತಿಮೆಗೂ ನಮೋ ಭೇಟಿ ನೀಡಲಿದ್ದಾರೆ.

ರಾಷ್ಟ್ರೀಯ ಏಕತಾ ದಿನಾಚರಣೆ (ಸರ್ದಾರ್​ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ) ಸಂದರ್ಭದಲ್ಲಿ ನಮೋ ಪ್ರವಾಸ ಕೈಗೊಂಡಿದ್ದು, ಅಕ್ಟೋಬರ್​ 31ರಂದು ಸರ್ದಾರ್‌ ವಲಭ‌ಭಾಯ್‌ ಪಟೇಲ್​ ಅವರ ಕಂಚಿನ ಪ್ರತಿಮೆಗೆ ಗೌರವ ಸಲ್ಲಿಕೆ ಮಾಡಲಿದ್ದಾರೆ.

ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಗಾಂಧಿನಗರಕ್ಕೆ ತೆರಳಿ ಗುಜರಾತ್​ನ ಮಾಜಿ ಮುಖ್ಯಮಂತ್ರಿ ಕೇಶುಭಾಯ್​ ಪಟೇಲ್​ ಅವರ ನಿವಾಸಕ್ಕೆ ತೆರಳಿ ಕುಟುಂಬದವರೊಂದಿಗೆ ಮಾತನಾಡುವ ಸಾಧ್ಯತೆ ಇದ್ದು, ಇದಾದ ಬಳಿಕ ಕೆವಾಡಿಯಾಕ್ಕೆ ತೆರಳಲಿದ್ದಾರೆ.

ಅಕ್ಟೋಬರ್ 31 ರಂದು ಗುಜರಾತ್​ನಲ್ಲಿ ದೇಶದ ಮೊಟ್ಟಮೊದಲ ಸಮುದ್ರ ವಿಮಾನ ಸೇವೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಜಂಗಲ್​ ಸಫಾರಿ ಎಂದು ಜನಪ್ರಿಯವಾಗಿರುವ ಸರ್ದಾರ್​ ಪಟೇಲ್​ ಜಿಯೋಲಾಜಿಕಲ್​ ಪಾರ್ಕ್​ ಉದ್ಘಾಟನೆ ಮಾಡಲಿದ್ದಾರೆ. ಮಾರ್ಚ್​ ನಂತರ ಪ್ರಧಾನಿ ಮೋದಿ ಕೈಗೊಳ್ಳುತ್ತಿರುವ ಮೊದಲ ತವರು ರಾಜ್ಯದ ಪ್ರವಾಸ ಇದಾಗಿದೆ.

Last Updated : Oct 31, 2020, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.